ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜರಿವಾಲ್ ಅವರ ಇತ್ತೀಚಿನ ಭೇಟಿ ರಾಜ್ಯದ ಮೂರೂ ರಾಜಕೀಯ ಪಕ್ಷಗಳನ್ನು ನಿದ್ದೆಯಿಂದ ಎಬ್ಬಿಸಿದಂತಿದೆ. ಸಿದ್ದರಾಮಯ್ಯನವರ ಪ್ರತಿಕ್ರಿಯೆ
• ಆಪ್ ಒಂದು ದೊಡ್ಡ ಪಕ್ಷ, ಅವರು ರಾಜಕೀಯದಲ್ಲಿ ಹಲವಾರು ವರ್ಷಗಳಿಂದ ಇದ್ದಾರೆ. ಅವರ ಬಗ್ಗೆ ನಾನು ಮಾತನಾಡುವುದಿಲ್ಲ, ಅವರು ರಾಜ್ಯದಲ್ಲಿ ಚುನಾವಣೆಯಲ್ಲಿ ಇನ್ನೂ ಭಾಗವಹಿಸಿಲ್ಲ. ಆದರೆ ಇಂದು ಕೇಜರಿವಾಲ್ ಬಂದು “ನಾವು ಚುನಾವಣೆಯಲ್ಲಿ ಭಾಗವಹಿಸುತ್ತೇವೆ ಎಂದು ಹೇಳಿದ್ದಾರೆ; ಅವರು ಭಾಗವಹಿಸಲಿ, ಜನರು ನಿರ್ಧಾರ ಮಾಡುತ್ತಾರೆ” ಎಂದರು.
• “ಕೇಜರಿವಾಲರ 40% ಟಿಪ್ಪಣಿಯ ಬಗ್ಗೆ ಉತ್ತರಿಸುತ್ತಾ “ನಾವೂ ಅದನ್ನೇ ಹೇಳುತ್ತಿದ್ದೇವೆ. ಇದರ ನಿರ್ಧಾರವನ್ನು ಜನರಿಗೆ ಬಿಡೋಣ” ಎಂದರು.
ಇದರ ಬಗ್ಗೆ ಪ್ರತಿಕ್ರಿಯಿಸಿದ ಪೃಥ್ವಿ ರೆಡ್ಡಿಯವರು
• “ನಾವು ಈಗ ಹುಟ್ಟಿರುವ ಸಣ್ಣ ಪಕ್ಷ ಆದರೆ ಪ್ರಾಮಾಣಿಕ ಜನರು ಒಟ್ಟು ಸೇರಿದರೆ ಕಡಿಮೆ ಸಮಯದಲ್ಲಿ ಎಷ್ಟೆಲ್ಲಾ ಮಾಡಬಹುದು ಎಂಬುದನ್ನು ಆಗಲೇ ಮಾಡಿ ತೋರಿಸಿದ್ದೇವೆ. ಆಪ್ ರಾಜ್ಯದ ಮತ್ತು ದೇಶದ ಜನರಿಗೆ ಹೊಸ ಆಶಾಕಿರಣವಾಗಿ ಹೊರಹೊಮ್ಮುತ್ತಿದೆ. ಕಾಂಗ್ರೆಸ್ ಅತ್ಯಂತ ಹಳೆಯ ಪಕ್ಷ, ಇದರ ಉಪಯುಕ್ತತೆ ಅವಧಿ ಮೀರಿದ್ದು ಜನರಿಗೆ ಇದರ ಮೇಲೆ ವಿಶ್ವಾಸ ಹೋಗಿದೆ” ಎಂದರು.
• ಕೇವಲ ಆಪ್ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದು , ಜೆಸಿಬಿ ಪಕ್ಷಗಳ ಭಷ್ಟಾಚಾರದ ಬಗ್ಗೆ ಮಾತನಾಡುವ ಧೈರ್ಯ ಮತ್ತು ನೈತಿಕ ಅಧಿಕಾರ ಇಟ್ಟುಕೊಂಡಿದೆ. ಜನರಿಗೆ 40% ಗಲಿ, 20% ಆಗಲಿ ಬೇಕಿಲ್ಲ ಅವರಿಗೆ ಕೇವಲ 0% ಭ್ರಷ್ಟಾಚಾರದ ಸರಕಾರ ಬೇಕಿದೆ” ಎಂದರು.
ಶ್ರೀ ಕುಮಾರಸ್ವಾಮಿಯವರ ಪ್ರತಿಕ್ರಿಯೆ:
ಆಪ್ ಬಗ್ಗೆ ಮಾತನಾಡಿದ ಜೆಡಿಎಸ್ ನಾಯಕ ಕುಮಾರಸ್ವಾಮಿಯವರು:
• “ಕೇಜರಿವಾಲ್ ಕರ್ನಾಟಕದಲ್ಲಿ ಏನು ಮಾಡಲು ಸಾಧ್ಯ? ಕೇಜರಿವಾಲ್ ಅವರನ್ನು ನಂಬಿ ಈ ರಾಜ್ಯದ ಸರ್ಕಾರ ನೆಡೆಸಲು ಕೊಡಲು ಸಾಧ್ಯವೇ? ನಾವು ಇಷ್ಟೊಂದು ಮಾಡಿದ್ದೂ ಸಹ ಈಗ ಏನೂ ಮಾಡಲು ಆಗುತ್ತಿಲ್ಲ; ಅವರು ದೆಹಲಿಯಿಂದ ಬಂದು ಏನು ಮಾಡಿಯಾರು? ಅವರು ತಮ್ಮ ಬದಿಯಲ್ಲಿ ಕುಳಿತಿರುವವರ ಜೊತೆ ಇಲ್ಲಿ 0% ಸರಕಾರಿ ಆಡಳಿತ ನೀಡಲು ಸಾಧ್ಯವೇ? ದೆಹಲಿಯ ರಾಜಕೀಯ ಮತ್ತಿ ಇಲ್ಲಿನ ರಾಜಕೀಯ ಎರಡೂ ಬೇರೆ ಬೇರೆ ವಿಚಾರ” ಎಂದರು.
• ಸಿದ್ದರಾಮಯ್ಯನವರ “ಬಿ ಟೀಮ್” ಹೇಳಿಕೆ ಬಗ್ಗೆ ಉತ್ತರಿಸಿದ ಅವರು “ನಾನು ಬಿಜೆಪಿ ಜೊತೆ ಹೋಗುತ್ತೇನೋ ಅಥವಾ ಆಪ್ ಜೊತೆಗೋ ಎಂದು ಕೇಳಲು ಸಿದ್ದರಾಮಯ್ಯ ಯಾರು?” ಎಂದರು
ಇದಕ್ಕೆ ಪ್ರತಿಕ್ರಿಯಿಸಿದ ಪೃಥ್ವಿ ರೆಡ್ಡಿ ಅವರು:
• ಸಮಯ ಮತ್ತು ಅವಕಾಶ ನೀಡಿದಾಗಲೂ ಭ್ರಷ್ಟಾಚಾರದ ಬಗ್ಗೆ ಏನೂ ಮಾಡಲು ಆಗಲಿಲ್ಲ ಎಂಬುದನ್ನು ಜೆ ಡಿ ಎಸ್ ಒಪ್ಪಿಕೊಂಡಿದೆ. ಆದ್ದರಿಂದ ಅವರು ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಅರವಿಂದ ಅವರಿಗೆ ಏನು ಮಾಡಲು ಸಾಧ್ಯ ಎಂಬುದನ್ನು ತೋರಿಸಲು ಅವಕಾಶ ನೀಡಬೇಕು.
• ಕೇವಲ ಅರವಿಂದರ ಆಪ್ ಪಕ್ಷ ತಾನು ಚುನಾವಣೆಯಲ್ಲಿ ಹೇಳಿದ್ದನ್ನು ದೆಹಲಿಯಲ್ಲಿ ಮಾಡಿ ತೋರಿಸಿದೆ ಮತ್ತು ಈಗ ಪಂಜಾಬಿನಲ್ಲೂ ಮಾಡುತ್ತಿದೆ. 0% ಎಂಬುದು ಕೇವಲ ಕನಸಲ್ಲ ನನಸು ಎಂಬುದನ್ನು ಸಹ ಜನತೆಗೆ ತೋರಿಸಿಕೊಟ್ಟಿದೆ.
• ನಮಗೆ ಯಾರು ಯಾರ ಬಿ ಟೀಮ್ ಎಂಬ ಚರ್ಚೆ ನಿರರ್ಥಕ. ಆಪ್ ಕರ್ನಾಟಕದ ಎ ಟೀಮ್ ಎನ್ನುವುದು ಮುಖ್ಯ” ಎಂದರು
ಬಿಜೆಪಿ ಪ್ರತಿಕ್ರಿಯೆ:
ಕೇಜರಿವಾಲ್ ಅವರ ಬೆಂಗಳೂರಿನ ಭೇಟಿಯ ವಿಚಾರ ಕಿವಿಗೆ ಬೀಳುತ್ತಲೇ, ಇದುವರೆಗೆ ಆಪ್ ನ ಉಚಿತ ವಿದ್ಯುತ್ ಯೋಜನೆಯ ಬಗ್ಗೆ ಹಗುರವಾಗಿ ಮಾತನಾಡಿತ್ತಿದ್ದ ಬಿಜೆಪಿ, ಇದೇ ತರಹ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸಲು ಮುಂದಾಗಿದೆ ಮತ್ತು ಎಸ್.ಸಿ./ಎಸ್.ಟಿ. ವರ್ಗದವರಿಗೆ 75 ಯೂನಿಟ್ ವಿದ್ಯುತ್ ಉಚಿತ ಎಂದು ಘೋಷಿಸಿದೆ.
ಬಿಹೆಪಿಯವರು ತಮ್ಮ 40% ಪಡೆಯುವುದನ್ನು ನಿಲ್ಲಿಸಿದ್ದೇ ಆದರೆ ನಾಡಿನ ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್ ನೀಡಬಹುದು.
ಪೃಥ್ವಿ ತಮ್ಮ ಮಾತು ಮುಂದುವರೆಸುತ್ತಾ:
“ಈ ಮೂರು ಪಕ್ಷದಲ್ಲಿಯೂ ಕೆಲವು ಒಳ್ಳೆಯವರು ಇದ್ದಾರೆ. ಅರವಿಂದ ಅವರು ಹೇಳಿದಂತೆ ಒಳ್ಳೆಯ ಮತ್ತು ಸಮಾನ ಮನಸ್ಕರು ಮುಂದೆ ಬಂದು ಆಪ್ ಪಕ್ಷ ಸೇರಿದರೆ ರಾಜಕೀಯ ಬದಲಾವಣೆ ಸಾಧ್ಯ ಮತ್ತು ರಾಜ್ಯದ ಜನತೆಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಬಹುದು” ಎಂದರು.

0 Comments