Ticker

6/recent/ticker-posts

Ad Code

Responsive Advertisement

ಶೀರಾಮನ ಸನ್ನಿಧಿಯಲ್ಲಿ ವಿಂಧ್ಯಾ ಗಾಯನ

ಬೆಂಗಳೂರಿನ ವಯ್ಯಾಲಿಕಾವಲ್ ನಲ್ಲಿರುವ ಶ್ರೀ ರಾಮ ದೇವಸ್ಥಾನದಲ್ಲಿ ವಯ್ಯಾಲಿಕಾವಲ್ ಎಕ್ಸ್ ಟೆನ್ಷನ್ ಅಸೋಸಿಯೇಶನ್ ವತಿಯಿಂದ ಏಪ್ರಿಲ್ 12, ಮಂಗಳವಾರ ಏರ್ಪಡಿಸಲಾಗಿದ್ದ "ದಾಸರಪದಗಳ ಗಾಯನ" ಕಾರ್ಯಕ್ರಮದಲ್ಲಿ ಶ್ರೀಮತಿ ವಿಂಧ್ಯಾ ಅಡಿಗ ಅವರು, "ಗಜಮುಖ ವಂದಿಸುವೆ ಕರುಣದಿ ಕಾಯೋ" ಎಂಬ ವಿಘ್ನೇಶ್ವರನ ಕೃತಿಯೊಂದಿಗೆ ಆರಂಭಿಸಿ, "ರಾಯ ಬಾರೋ ರಾಘವೇಂದ್ರ ಬಾರೋ", "ಯಾಕೆ ಮೂಕನಾದ್ಯೋ", "ಕೈಲಾಸ ವಾಸ ಗೌರೀಶ ಈಶ", "ಪಾವನಚರಿತ ಸಂಜೀವನ ಗಿರಿಧರ", "ವೀರಹನುಮ ಬಹು ಪರಾಕ್ರಮ", "ಬಾರೇ ಭಾಗ್ಯದ ನಿಧಿಯೇ", "ನಿಲ್ಲೇ ಕೊಲ್ಹಾಪುರ ದೇವಿ", "ರಾಮ ಬಂದನೇನೆ", "ರಾಮ ಮಂತ್ರವ ಜಪಿಸೋ", "ಅಂಗಳದೊಳು ರಾಮನಾಡಿದ", ಇನ್ನೂ ಹಲವಾರು ಅಪರೂಪದ ಕೃತಿಗಳನ್ನು ಸುಶ್ರಾವ್ಯವಾಗಿ ಹಾಡಿದರು. ಇವರಿಗೆ ವಾದ್ಯ ಸಹಕಾರದಲ್ಲಿ, ಶ್ರೀ ಶ್ರೀನಿವಾಸ ಕಾಖಂಡಕಿ (ತಬಲಾ), ಶ್ರೀ ಅಮಿತ್ ಶರ್ಮಾ (ಕೀ-ಬೋಡ್೯) ಸಾಥ್ ನೀಡಿದರು. ಸಂಸ್ಥೆಯ ಗೌರವ ಅಧ್ಯಕ್ಷರಾದ ಡಾ|| ಭಾಷ್ಯಂ ಚಕ್ರವರ್ತಿ ಅವರು ವಂದನಾರ್ಪಣೆ ಮಾಡಿದರು. 

ಗೌರವ ಕಾರ್ಯದರ್ಶಿಗಳಾದ ಶ್ರೀ ಪುರುಷೋತ್ತಮ ಅವರು ಕಲಾವಿದರಿಗೆ ಪ್ರಸಾದ ನೀಡಿದರು.

 ವರದಿ : ದೇಸಾಯಿ ಸುಧೀಂದ್ರ

Post a Comment

0 Comments

Ad Code

Responsive Advertisement