Ticker

6/recent/ticker-posts

Ad Code

Responsive Advertisement

ವಿಶ್ವ ಪುಸ್ತಕ ದಿನ: ಉಚಿತ ಪುಸ್ತಕ ವಿತರಣೆ,ಮಕ್ಕಳಲ್ಲಿ ಓದುವ ಹವ್ಯಾಸ ಬೇಳೆಸಿ-ಅನೂಪ್‍ಕುಮಾರ್

ಬಳ್ಳಾರಿ ಏ 24 : ಜ್ಞಾನ ಎಂಬುವುದು ಮನುಷ್ಯನಿಗೆ ತುಂಬ ಮುಖ್ಯವಾದದ್ದು. ಹಾಗಾಗಿ ಎಲ್ಲರು ತಮ್ಮ ಜ್ಞಾನವನ್ನು ಹೆಚ್ಚು ವೃದ್ಧಿಮಾಡಿಕೊಳ್ಳಬೇಕಾದರೆ ಉತ್ತಮ ರೀತಿಯ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೇಳೆಸಿಕೊಳ್ಳಬೇಕು ಎಂದು ಯುವ ಬಿಜೆಪಿ ಮುಖಂಡರಾದ ವಿ. ಅನೂಪ್ ಕುಮಾರ ಅವರು ಹೇಳಿದರು. ನಗರದ 38ನೇ ವಾರ್ಡಿನ ದೇವಿನಗರದ ತಮ್ಮ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಉಚಿತ ಪುಸ್ತಕ ವಿತರಿಸಿ ಅವರು ಮಾತನಾಡಿದರು.ಪ್ರಸ್ತುತ ದಿನಗಳಲ್ಲಿ ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತೀದ್ದು, ಎಲ್ಲರೂ ಮೊಬೈಲ್ ಮೋರೆ ಹೋಗುತ್ತಿದ್ದಾರೆ.

ಮನೆಗಳಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಹೆಚ್ಚು ಮೊಬೈಲ್ ಬಳಕೆ ಮಾಡಲು ಸಹಕಾರ ನೀಡುತ್ತೀದ್ದು, ಇದನ್ನು ನಿಲ್ಲಿಸುವಂತೆ ಮನವಿ ಮಾಡಿದರು.ನಮ್ಮ ಜ್ಞಾನ ಹೆಚ್ಚಾಗಬೇಕಾದರೆ ವಿವಿಧ ರೀತಿಯ ಪುಸ್ತಕಗಳ ಮೋರೆ ಹೋಗಬೇಕಾಗುತ್ತದೆ ಎಂದರು.ಇದೇ ಸಂದರ್ಭದಲ್ಲಿ ಮಕ್ಕಳಲ್ಲಿ ಓದುವ ಹವ್ಯಾಸ ಬೇಳೆಸಲು ಸ್ವಾತಂತ್ರ್ಯ ಹೋರಾಟಗಾರರ ಪುಸ್ತಕ, ಪ್ರಸಿದ್ದ ವ್ಯಕ್ತಿತ್ವ, ಪೌರಾಣಿಕ ಕಥೆಗಳ ಪುಸ್ತಕ, ರಾಮಾಯಣ ಮಹಾಭಾರತ ಪುಸ್ತಕ ಸೇರಿದಂತೆ 150 ವಿವಿಧ ಪುಸ್ತಕಗಳನ್ನು ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ಮೋಹನ್, ನಾಗರಾಜ, ಆನಂದ್, ಸೀನಾ, ಲೋಕೇಶ್, ವೀರೇಶ್, ಪವನ್ ಕುಮಾರ, ಪ್ರದೀಪ್ ಸೇರಿದಂತೆ ಇತರರು ಇದ್ದರು.ಬಿಜೆಪಿ ಯುವ ಮುಖಂಡರಾದ ವಿ. ಅನೂಪ್ ಕುಮಾರ ಅವರು ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಮಾಡಿದರು.


Post a Comment

0 Comments

Ad Code

Responsive Advertisement