ಬಳ್ಳಾರಿ ಏ 24. ನಗರದ ಡಾ.ರಾಜ್‍ಕುಮಾರ್ ಪಾರ್ಕ್ ಆವರಣದಲ್ಲಿ ಭಾನುವಾರ ಬೆಳಿಗ್ಗೆ ವರನಟ ದಿವಂಗತ ಡಾ.ರಾಜ್ ಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಡಾ.ರಾಜ್ ಕುಮಾರ್ ಅವರ ಪುಥಳಿಗೆ ಹೂವಿನ ಹಾರ ಹಾಕಿ ಪುμÁ್ಪರ್ಚನೆ, ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡಲಾಯಿತು. ಅಪ್ಪು ಸೇವಾ ಸಮಿತಿಯ ಮಾರ್ಗದರ್ಶನ ಚಂದ್ರಶೇಖರ್ ಆಚಾರಿ ಅವರ ಹುಟ್ಟು ಹಬ್ಬವನ್ನು ಸಹ ಆಚರಣೆ ಮಾಡಿ ನಂತರ ಉಚಿತ ಮಜ್ಜಿಗೆ ವಿತರಣೆ ಮಾಡಲಾಯಿತು.
ಈ ಸಮಯದಲ್ಲಿ ಅಪ್ಪು ಸೇವಾ ಸಮಿತಿಯ ಜೆಪಿ ಮಂಜುನಾಥ್, ಹಲಕುಂದಿ ರವಿಕುಮಾರ್,ಮಿಥುನ್, ಲಕ್ಷ್ಮಿ ರೆಡ್ಡಿ, ಜಿ ರಾಘವೇಂದ್ರ ಫೋಟೋ ರಾಜೇಶ್, ಶರಣ ಚಂದ್ರ, ಕಪ್ಪಗಲ್ ಚಂದ್ರಶೇಖರ್ ಆಚಾರ್, ವೆಂಕಟೇಶ್ ಬಾಬು, ವೀರೇಶ್, ಶೇಖರ್, ವೀರಭದ್ರ, ಹುಂಡೇಕರ್ ರಾಜೇಶ್, ಸಿದ್ಮಲ್ ಮಂಜುನಾಥ್, ಹನುಮಂತ ಗುಡಿಗಂಟೆ, ರಾಮಕೃಷ್ಣ ರೇಣಿಗುಂಟ ಭಾಗವಹಿಸಿದ್ದರು.

0 Comments