Ticker

6/recent/ticker-posts

Ad Code

Responsive Advertisement

ಪವಾಡ ಪುರುಷ ಅಲ್ಲೀಪುರ ಶ್ರೀ ಮಹಾದೇವ ತಾತ ಚಲನಚಿತ್ರ ಮೇ ತಿಂಗಳಲ್ಲಿ ರಾಜ್ಯಾದ್ಯಂತ ಅದ್ದೂರಿ ಬಿಡುಗಡೆ-ಪುರುಷೋತ್ತಮ ಓಂಕಾರ್

ಬಳ್ಳಾರಿ ಏ 24. ಪವಾಡ ಪುರುಷ ಅಲ್ಲೀಪುರ ಶ್ರೀ ಮಹಾದೇವ ತಾತನವರ ಚಲನ ಚಿತ್ರವನ್ನು ಅಂದಾಜು ಒಂದು ಕೋಟಿ ವೆಚ್ಚದಿಂದ  ಸಿದ್ದಪಡಿಸಿದೆ ಎಂದು ಚಿತ್ರದ ನಿರ್ದೇಶಕ ಪುರುಷೋತ್ತಮ ಓಂಕಾರ ಹೇಳಿದ್ದಾರೆ. ಅವರು ಭಾನುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ. ಮುಂದಿನ ತಿಂಗಳು ರಾಜ್ಯಾದ್ಯಾಂತ ಚಿತ್ರ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದರು.ಮಹದೇವತಾನವರು ಓಡಾಡಿದ ಸ್ಥಳಗಳು ಸೇರಿ ರಾಜ್ಯದ ಹಲವಡೆ ಚಿತ್ರೀಕರಿಸಲಾಗಿದೆ, ಚಲನಚಿತ್ರ ಸುಂದರವಾಗಿ,ಅಚ್ಚುಕಟ್ಟಾಗಿ ಮೂಡಿಬಂದಿದೆ ಎಂದರು.

ಇದರಲ್ಲಿ ಐದು ಹಾಡುಗಳಿವೆ, ಅಜಯ್ ವಾರಿಯರ್, ಸಚಿನ್, ರೇಷ್ಮ ಬಾಲು ಮೊದಲಾದವರು ಹಾಡಿದ್ದಾರೆ. ರಾಜಭಾಸ್ಕರ್ ಸಂಗೀತ ನೀಡಿದ್ದಾರೆ. ಐತಿಹಾಸಿಕ ಸಿನಿಮಾಗೆ ಚಿತ್ರ 25 ಲಕ್ಷ ರೂ ಸಹಾಯಧನ ನೀಡಲಿದೆ ಎಂದರು. ಇದು ನನ್ನ 25 ನೇ ಚಿತ್ರವೆಂದು ಅವರು ತಿಳಿಸಿದರು. ಭಾನುವಾರ ಸಂಜೆ ನಗರದ ಅಲ್ಲಿಪುರ ತಾತಾನ ಮಠದಲ್ಲಿ ಚಿತ್ರದ ಹಾಡು ಮತ್ತು ಟೀಸರ್ ಬಿಡುಗಡೆ ಮಾಡಲಿದ್ದೇವೆ ಎಂದು ತಿಳಿಸಿದರು. ಸ್ಥಳೀಯ ಹಿರಿಯ ರಂಗನಟ ರಮೇಶ್ ಗೌಡ ಪಾಟೀಲ್, ರಘು, ಉಷಾ, ವಾಮಣ್ಣ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆಂದೇ ಹೆಸರಾಗಿರುವ ಸೋಮನಾಥ್, ಶಿವಲಿಂಗಯ್ಯಸ್ವಾಮಿ, ಮೊದಲಾದವರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.



Post a Comment

0 Comments

Ad Code

Responsive Advertisement