Ticker

6/recent/ticker-posts

Ad Code

Responsive Advertisement

ಬೆಂಗಳೂರು: ನಗರದಲ್ಲಿ ಅತ್ಯಾಧುನಿಕ ಫಿಟ್ನೆಸ್ ಕೇಂದ್ರ ಆರೋಗ್ಯ ಸೇವೆಗೆ ಲಭ್ಯ

ಬೆಂಗಳೂರು: ನಗರದಲ್ಲಿ ಅತ್ಯಾಧುನಿಕ ಫಿಟ್ನೆಸ್ ಕೇಂದ್ರ ಆರೋಗ್ಯ ಸೇವೆಗೆ ಲಭ್ಯವಾಗಿದೆ.

ಬೆಂಗಳೂರಿನ ಉತ್ತರ ಕಾಚರಕನಹಳ್ಳಿಯ ಸೆಂಟ್ ಥಾಮಸ್ ಟೌನ್ ನಲ್ಲಿ "ಮಾರ್ಟಿನ್ ಫಿಟ್ನೆಸ್" ಸೆಂಟರ್ ಆರಂಭಗೊಂಡಿದೆ.

ಕಿರುತೆರೆ ಹಾಗೂ ಸಿನಿಮಾ ಕಲಾವಿದರ ದಂಡೇ ಈ ಫಿಟ್ನೆಸ್ ಕೇಂದ್ರದ ಉದ್ಘಾಟನೆಗೆ ದೌಡಾಯಿಸಿದ್ದರು.

ಕೇಕ್ ಕತ್ತರಿಸುವದರೊಂದಿಗೆ ಹಾಗೂ ಜಿಮ್  ನಲ್ಲಿ ತಾಲೀಮು‌ ಮಾಡುವ ಮೂಲಕ ನೂತನ ಫಿಟ್ನೆಸ್ ಕೇಂದ್ರಕ್ಕೆ ಚಾಲನೆ ನೀಡಲಾಯಿತು






ಈ ಸಂದರ್ಭದಲ್ಲಿ ಮಾತನಾಡಿದ ನಟಿಯರಾದ ನಿಖಿತಾ, ರೇಣುಕಾಗೌಡ ಹಾಗೂ  ಗಗನಾ, ಹೊಸ ಫಿಟ್ನೆಸ್ ಕೇಂದ್ರಕ್ಕೆ ಶುಭ‌ಕೋರಿ, "ಯೋಗ ,ಧ್ಯಾನ ಹಾಗೂ ಏರೋಬಿಕ್  ಮೂಲಕ  ಆರೋಗ್ಯ ರಕ್ಷಣೆ ಹಾಗೂ ವೃದ್ದಿ ಮಾಡುವುದು  ಅಗತ್ಯವಿದ್ದು, ಈ ನಿಟ್ಟಿನಲ್ಲಿ ಮಾರ್ಟಿನ್ ಫಿಟ್ನೆಸ್  ಕೇಂದ್ರ ತುಂಬಾ ಉಪಯುಕ್ತವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಕೆಜಿಎಫ್ ಪಾರ್ಟ್ ಒನ್ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿರುವ ಯೋಗಿಶ್ ಶಂಕರನಾರಾಯಣ ಮಾತನಾಡಿ, ಯುವ ಜನರಲ್ಲಿ ಆರೋಗ್ಯದ ಅರಿವು ಮೂಡಿಸುವ ಪ್ರಯತ್ನ ಶ್ಲಾಘನೀಯ ಎಂದರು.

ಫಿಟ್ನೆಸ್ ಕೇಂದ್ರದ ಮುಖ್ಯಸ್ಥ ಮಾರ್ಟೀನ್, ವ್ಯವಸ್ಥಾಪಕಿ ಲಿಯಾ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement