Ticker

6/recent/ticker-posts

Ad Code

Responsive Advertisement

Flash News: ಕಾಂಗ್ರೆಸ್-ಬಿಜೆಪಿ ನಾಯಕರ ಬಂಡವಾಳ ಬಯಲುಮಾಡುತ್ತೇನೆ: ಭಾಸ್ಕರ್ ರಾವ್

ಬೆಂಗಳೂರು, ಏ.6: ಕರ್ನಾಟಕ ರಾಜ್ಯದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳಿಗೆ ನೈತಿಕತೆಯೇ ಇಲ್ಲ, ಒಬ್ಬರನ್ನೊಬ್ಬರು ಆರೋಪ ಮಾಡುವುದರಲ್ಲೇ ಕಾಲಕಳೆಯುತ್ತಿದ್ದಾರೆ.

ಒಂದೊ0ದು ಹುದ್ದೆಗೂ ಇಲ್ಲಿ ಕೋಟ್ಯಂತರ ಹಣ ಕೊಡಬೇಕಾಗಿದೆ ಎಂದು ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಕಿಡಿಕಾರಿದ್ದಾರೆ.

ಆಮ್ ಆದ್ಮಿ ಪಕ್ಷದ ಸೇರ್ಪಡೆ ನಂತರ ಪ್ರೆಸ್ಕ್ಲಬ್ನಲ್ಲಿಂದು ಮಾಧ್ಯಮ ಸಂವಾದ ನಡೆಸಿದ ಅವರು, ಕಳೆದ ಮೂರು ದಶಕಗಳಿಂದ ಜನಪ್ರತಿನಿಗಳನ್ನು ಹತ್ತಿರದಿಂದ ನೋಡಿಕೊಂಡು ಬಂದಿದ್ದೇನೆ. ನನ್ನ ಸೇವಾ ಅವಧಿಯಲ್ಲಿ ರಾಜ್ಯದ ವಿದ್ಯಮಾನಗಳನ್ನು ಚೆನ್ನಾಗಿ ಅರಿತಿದ್ದೇನೆ ಎಂದರು.

ಕೊರೊನಾ ಸಂದರ್ಭದಲ್ಲಿ ಜನರ ಕಷ್ಟವನ್ನು ಹತ್ತಿರದಿಂದ ನೋಡಿದ್ದೇನೆ. ಕೋಟ್ಯಂತರ ಹಣ ಖರ್ಚು ಮಾಡುತ್ತಾರೆ. ಜನರ ಪರಿಸ್ಥಿತಿ ಬದಲಾವಣೆ ಆಗಲೇ ಇಲ್ಲ. ಎಲ್ಲವೂ ಕಾಗದದ ಮೇಲೆ ಸೀಮಿತವಾಗಿತ್ತು. ಎಲ್ಲವೂ ಟೊಳ್ಳು ಭರವಸೆಯಾಗಿಯೇ ಉಳಿದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ರಾಜ್ಯದಲ್ಲಿ ಉತ್ತಮವಾದ ರಾಜಕೀಯ ನಾಯಕನ ಹಾಗು ನಾಯಕತ್ವದ ಕೊರತೆ ಇದೆ. ಉತ್ತಮವಾಗಿ ಮಾತನ್ನಾಡುವ ನಾಯಕರ ಬಂಡವಾಳವನ್ನು ಮುಂದೆ ಬಿಚ್ಚಿಡುತ್ತೇನೆ ಎಂದು ಅವರು ಹೇಳಿದರು.

ಎದುರಾಳಿಗಳಿಗೆ ವಿನಃಕಾರಣ ಕೇಸ್ ದಾಖಲಿಸುವುದು, ಅಪರಾಧಿಗಳ ಜೊತೆ ಶಾಮೀಲಾಗೋದೇ ಆಗಿದೆ ರಾಜಕೀಯ ನಾಯಕರ ಕತೆ. ಇದೆಲ್ಲವನ್ನೂ ನೋಡಿ ಸಾಕಾಗಿದೆ. ನನಗೆ ಇನ್ನೂ ಮೂರು ವರ್ಷ ಅವಧಿ ಇತ್ತು. ಆದರೂ ವ್ಯವಸ್ಥೆಯಿಂದ ಬೇಸತ್ತು ನಿವೃತ್ತಿ ತೆಗೆದುಕೊಂಡಿದ್ದೇನೆ ಎಂದರು.

ಮು0ದೆ ನನ್ನ ಮನೆ ಮೇಲೆ ಕೂಡ ದಾಳಿಯಾದರು ಆಗಬಹುದು. ಏನೇ ಆದರೂ ಎದುರಿಸಲು ಸಿದ್ಧನಿದ್ದೇನೆ. ಇದೂವರೆಗೂ ಒಂದು ಕಪ್ಪು ಚುಕ್ಕೆ ನನ್ನ ಮೇಲಿಲ್ಲ. ನನ್ನ ಮೇಲೂ ಸಹ ಆರೋಪಗಳನ್ನ ಮಾಡುತ್ತಾರೆ. ಏನೇ ಆರೋಪ ಮಾಡಿದರೂ ಎದುರಿಸಲು ಸಿದ್ಧನಿದ್ದೇನೆ ಎಂದರು. ಪ್ರತಿಯೊಬ್ಬ ಅಧಿಕಾರಿ ಭಯದಿಂದ ಬದುಕುವಂತಾಗಿದೆ ಈಗಿನ ನಮ್ಮ ರಾಜ್ಯದ ಸ್ಥಿತಿ. ದಲ್ಲಾಳಿ ದಂಧೆ ಮಾಡಿಕೊಂಡೇ ಹಣ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಒಳ್ಳೆಯ ಅಧಿಕಾರಿಗಳಿಗೆ ಅವಕಾಶವೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಎಷ್ಟೋ ಜನ ಕರ್ನಾಟಕ ಬಿಟ್ಟು ಹೋಗಿದ್ದಾರೆ. ಹೊರಗೆ ಕಿತ್ತಾಡಿಕೊಳ್ಳುತ್ತಾರೆ. ಆದರೆ ಒಳಗೊಳಗೆ ಎಲ್ಲರೂ ಚನ್ನಾಗಿಯೇ ಇರುತ್ತಾರೆ. ನಾವೇನಾದರೂ ಪ್ರಶ್ನಿಸಿದರೆ ನಮ್ಮ ಮೇಲೆಯೇ ಕಣ್ಣಿಡುತ್ತಿದ್ದರು ಎಂದರು. ಕಳಪೆ ಕೆಲಸ ಮಾಡಿ ಮೋಸ ಮಾಡುತ್ತಿದ್ದಾರೆ. ರಾಜಕೀಯ ಅಧಿಕಾರ ಬೇಕಾಗಿರುವುದು ಮೋಸ ಮಾಡಲು ಅಷ್ಟೇ. ಜನರ ಸೇವೆಗಾಗಿ ಅಲ್ಲವೇ ಅಲ್ಲಾ. ಯಾರಿಂದಲಾದರೂ ಸ್ವಚ್ಛ ಆಡಳಿತ ಕೊಡಲು ಆಗಿದೆಯೇ? ಎಂದು ಅವರು ಪ್ರಶ್ನೆ ಮಾಡಿದರು.

ನಾನು ಆಗ ಪೋಲಿಸ್ ಅಧಿಕಾರಿಯಾಗಿದ್ದೆ. ಆಗ ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನ್ನಾಡಲು ಸಾಧ್ಯವೇ? ಅದೇ ಕಾರಣಕ್ಕೆ ತಮ್ಮ ವೃತ್ತಿಗೆ ರಾಜೀನಾಮೆ ನೀಡಿದ್ದೇನೆ. ಈಗ ಧೈರ್ಯವಾಗಿ ಅದನ್ನು ಹೇಳುತ್ತಿದ್ದೇನೆ ಎಂದು ಹೇಳಿದರು. ಹಿಜಾಬ್, ಹಲಾಲ್, ಆಜಾನ್, ವ್ಯಾಪಾರ ವಿವಾದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವೆಲ್ಲರೂ ಒಂದೇ ಭಾರತೀಯರು. ಬೆಲೆ ಏರಿಕೆಯಿಂದ ಜನರು ಸಾಯುತ್ತಿದ್ದಾರೆ. ಪೆಟ್ರೋಲ್-ಡೀಸಲ್ ಬೆಲ ಗಗನಕ್ಕೆ ಏರುತ್ತಿದೆ, ಅದಕ್ಕೆ ಉತ್ತರ ಕೊಡಲು ಆಗುತ್ತಿಲ್ಲ. ಅದೇ ಕಾರಣಕ್ಕೆ ವಿಷಯಾಂತರ ಮಾಡಲು ವಿವಾದಗಳು ಸೃಷ್ಟಿಯಾಗುತ್ತಿವೆ.

ಇದೆಲ್ಲಾ ಇಂದಿನ ವಿಷಯಗಳಲ್ಲ. ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಇದನ್ನ ಎಲ್ಲರೂ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳಬಹುದು. ದೇಶದ ಜನರೆಲ್ಲರದ್ದೂ ಒಂದೇ ಡಿಎನ್‌ಎ ಇದೆ ಎಂದರು. ರಾಜ್ಯದಲ್ಲಿ ಒಳ್ಳೆಯ ಅಡಳಿತ ಕೊಡಬೇಕಾದ ಪಕ್ಷದ ಅಗತ್ಯ ಇದೆ. ಅದನ್ನು ಎಎಪಿ ಮಾಡುತ್ತಿದೆ. ಎಲ್ಲಾ ರಾಜಕಾರಣಿಗಳ ಪುರಾಣ ನನಗೆ ಚೆನ್ನಾಗಿ ಗೊತ್ತಿದೆ. ಕಾಲ ಬಂದಾಗ ಅದೆಲ್ಲವನ್ನೂ ಹೇಳುತ್ತೇನೆ. ಸಿಸಿಟಿವಿ ಅಳವಡಿಕೆಗೆ ಕೇಂದ್ರ ಹಣ ಕೊಟ್ಟರೂ ಇಲ್ಲಿ ಕೊಡೋಕೆ ಹಿಂದೇಟು ಹಾಕಿದರು, ಯಾಕೆಂದರೆ ಇವರುಗಳ ಬೇಳೆಕಾಳು ಬೇಯಿಸಿಕೊಳ್ಳಬೇಕಲ್ಲ ಅದಕ್ಕೆ.

ರಾಜಕಾರಣಿಗಳಿಗೆ ಹಣವೊಂದು ಬೇಕು ಅಷ್ಟೇ, ಜನರ ಹಿತ ಅಲ್ಲ. ಈ ರಾಜ್ಯದಲ್ಲಿ ನಿಷ್ಟಾವಂತ ಅಧಿಕಾರಿಗಳಿಗೆ ಬೆಲೆಯಿಲ್ಲ. ದುಡ್ಡಲ್ಲಿ ನಮ್ಮ ಪಕ್ಷ ಬಡತನ ಇರಬಹುದು. ವಿಚಾರಗಳಲ್ಲಿ ಶ್ರೀಮಂತಿಕೆ ಇದೆ. ಬೇರೆಲ್ಲಾ ಪಕ್ಷಗಳಲ್ಲಿ ಯಾರ್ಯಾರು ಪ್ರಾಮಾಣಿಕರಿದ್ದಾರೋ ಅವರೆಲ್ಲಾ ನಮ್ಮ ಪಕ್ಷಕ್ಕೆ ಬರಲಿ ಎಂದರು. ಟಿಕೆಟ್ ಸಿಗದಿದ್ದಲ್ಲಿ ನಮ್ಮ ಪಕ್ಷದಲ್ಲಿ ಪ್ರಾಮಾಣಿಕರಿಗೆ ಅವಕಾಶ ನೀಡುತ್ತೇವೆ. ಮುಂಬರುವ ದಿನಗಳಲ್ಲಿ ನಮ್ಮ ಪಕ್ಷ ಎಲ್ಲಾ ಕಡೆ ಗೆಲ್ಲಲಿದೆ ಎಂದು ಹೇಳಿದರು.

ಪ್ರಮಾಣಿಕರಿಗೆ ಮಾತ್ರ ಪಕ್ಷಕ್ಕೆ ಆಹ್ವಾನ ಇರಲಿದೆ. ಭ್ರಷ್ಟರನ್ನ ಪಕ್ಷಕ್ಕೆ ಸೇರಿಸಿಕೊಳ್ಳೋದಿಲ್ಲ. ಯಾವುದೇ ಪಕ್ಷದಲ್ಲಿ ಪ್ರಮಾಣಿಕರಿದ್ದರೂ ಪಕ್ಷಕ್ಕೆ ಬಂದರೆ ಸ್ವಾಗತ ಸಿಗಲಿದೆ. ಚುನಾವಣೆ ಯಾವಾಗ ಬೇಕಾದರೂ ನಡೆಯಲಿ. ಅದಕ್ಕೆ ನಾವು ಸಿದ್ಧರಾಗಿದ್ದೇವೆ. ನಾನು ಬೆಂಗಳೂರಿನವನು. ಪಕ್ಷ ಎಲ್ಲಿ ಹೇಳಲಿದೆಯೋ ಅಲ್ಲಿ ಸ್ರ‍್ಪಸುತ್ತೇನೆ. ಆದರೂ ನಾನು ಮೂಲತಃ ಬೆಂಗಳೂರಿನವನು ಬಹಳ ಜನ ಪೋಲಿಸ್ ಅಧಿಕಾರಿಗಳು ನನ್ನ ಸಂಪರ್ಕದಲ್ಲಿ ಇದ್ದಾರೆ.

ಉಸಿರು ಕಟ್ಟುವ ವಾತಾವರಣದಲ್ಲಿ ಇರುವ ಪೋಲೀಸರು ಸಂಪರ್ಕದಲ್ಲಿ ಇದ್ದಾರೆ. ರಾಜಕಾರಣಿಗಳು ನಮ್ಮ ಸಂಪರ್ಕದಲ್ಲಿ ಇದ್ದಾರೆ. ಮುಂದಿನ ದಿನಗಳಲ್ಲಿ ನೋಡುತ್ತಾ ಇರಿ. ನನಗೆ ಎಲ್ಲಾ ಪಕ್ಷಗಳು ಆತ್ಮೀಯರು ಇದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲಾ ಪಕ್ಷಗಳಲ್ಲೂ ಇದ್ದಾರೆ ಎಂದು ಮಾಹಿತಿ ನೀಡಿದರು. ಸಂವಾದದಲ್ಲಿ ಎಎಪಿ ಅಧ್ಯಕ್ಷ, ರಾಜ್ಯ ಚುನಾವಣಾ ಉಸ್ತುವಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Varthajala Daily, Malleshwaram, Bengaluru

Post a Comment

0 Comments

Ad Code

Responsive Advertisement