Ticker

6/recent/ticker-posts

Ad Code

Responsive Advertisement

Flash News: ಮಂಡ್ಯದ ಮುಸ್ಕಾನ್ಗೆ ಅಲ್ಖೈದಾ ಮುಖ್ಯಸ್ಥನಿಂದ ಶಹಬ್ಬಾಸ್ಗಿರಿ!

ಬೆಂಗಳೂರು, ಏ.6: ರಾಜ್ಯದ ಹಿಜಾಬ್ ವಿವಾದಕ್ಕೆ ಅಲ್ಖೈದಾ ಉಗ್ರ ಸಂಘಟನೆ ಎಂಟ್ರಿಯಾಗಿದೆ ಎಂದರೆ ಆಶ್ಚರ್ಯ. ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಜೈಶ್ರೀರಾಮ್ ಘೋಷಣೆಗೆ ಪ್ರತಿಯಾಗಿ 'ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್.' ಎಂದು ಘೋಷಣೆ ಕೂಗಿ ಕೆಲವು ಧರ್ಮದವರಿಗೆ ಹೆಸರುವಾಸಿಯಾಗಿದ್ದ ಹಿಜಾಬ್ಧಾರಿ ವಿದ್ಯಾರ್ಥಿನಿ ಮುಸ್ಕಾನ್ನನ್ನು ಪ್ರಶಂಸಿಸಿರುವ ಅಲ್ಖೈದಾ ಮುಖ್ಯಸ್ಥ ಆಲ್ ಜವಾಹಿರಿ, 'ಮುಸ್ಕಾನ್ ಭಾರತದ ಉದಾತ್ತ ಮಹಿಳೆ. ಅವಳ ಹೋರಾಟ ನನಗೆ ಆನಂದ ಭಾಷ್ಪ ತರಿಸಿದೆ' ಎಂದಿದ್ದಾರೆ.

ಹಿಜಾಬ್ ವಿವಾದ ಮತ್ತು ಮಸ್ಕಾನ್ ಬಗ್ಗೆ ಅಲ್ಖೈದಾ ಮುಖ್ಯಸ್ಥ ಆಲ್ ಜವಾಹಿರಿ ಮಾತನಾಡಿರುವ 9 ನಿಮಿಷದ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ. 'ದಬ್ಬಾಳಿಕೆ ವಿರುದ್ಧ ಭಾರತದ ಮುಸ್ಲಿಮರು ತಿರುಗಿ ಬೀಳಬೇಕು. ಮುಸ್ಕಾನ್ಳ ಹೋರಾಟ ನನಗೆ ಆನಂದ ಭಾಷ್ಪ ತರಿಸಿದೆ. ಹಿಜಾಬ್ ಹಾಕುವುದು ನಮ್ಮ ಧರ್ಮದ ಹಕ್ಕು. ಮುಸ್ಕಾನ್ ಬಣ್ಣಿಸಿ ಒಂದು ಪದ್ಯ ಬರೆಯುತ್ತೇನೆ' ಎಂದು ಹೇಳಿದ್ದಾರೆ. ಈ ರೀತಿ ಹೇಳಿಕೆಗಳಿಂದ PÉÆÃªÀÄÄzÉéõzÀÀ ಭಾವನೆ ಉಂಟುವಾಗುತ್ತದೆ ಎಂಬುದು ಭಾರತೀಯರ ಅನಿಸಿಕೆ.

ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ಹಿಜಾಬ್ ವಿವಾದದ ಹಿಂದೆ ಟೆರರ್ ಕೈವಾಡ ಇದೆ ಎಂದಿದ್ದಾರೆ. ಈ ಬಗ್ಗೆ ನಾನು ಹಿಂದೆಯೇ ಹೇಳಿದ್ದೆ. ಹಿಜಾಬ್ ವಿವಾದದ ಹಿಂದೆ ಅಂತಾರಾಷ್ಟ್ರೀಯ ಸಂಚು ಇದೆ. ಈ ವಿವಾದವನ್ನು ನಮ್ಮ ಮಾಧ್ಯಮಗಳಿಗಿಂತ ಮೊದಲು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿದ್ದವು. ಈಗ ಉಗ್ರ ಸಂಘಟನೆಗಳು ಕೂಡ ಬೆಂಬಲ ನೀಡುತ್ತಿವೆ. ವಿವಾದದ ಬಗ್ಗೆ ಎನ್ಐಎ ತನಿಖೆ ನಡೆಯಬೇಕು. ಉಗ್ರ ಸಂಘಟನೆಗಳ ಬೆದರಿಕೆಗೆ ಬಗ್ಗುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಅಲ್ಖೈದ ಹೇಳಿಕೆಯಿಂದ ನಮಗೇನು ಆಗಬೇಕಿದೆ? ಕರ್ನಾಟಕದ ಜನ ಅದಕ್ಕೆಲ್ಲಾ ಮನ್ನಣೆ ಕೊಡಲ್ಲ. ನಮ್ಮ ಜನ ಸೌಹಾರ್ದವಾಗಿ ಬದುಕುವವರು. ಅವರ ಹೇಳಿಕೆಯಿಂದ ರಾಜ್ಯದಲ್ಲಿ ಅಂಥ ವ್ಯತ್ಯಾಸ ಆಗಲ್ಲ ಎಂದು ಮಾಜಿ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

Varthajala Daily, Malleshwaram, Bengaluru

Post a Comment

0 Comments

Ad Code

Responsive Advertisement