ಬಳ್ಳಾರಿ,ಏ.23-ಕನ್ನಡದ ವರನಟ ಡಾ.ರಾಜಕುಮಾರ್ ಅವರ ಜನ್ಮದಿನಾಚರಣೆ ಪ್ರಯುಕ್ತ ಹೊಸಪೇಟೆಯ ನವರಂಗ್ ಮೆಲೋಡಿಸ್ ಅವರು ನಾಳೆ ಏ.24ರಂದು ಸಾಯಂಕಾಲ ಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜೂನಿಯರ್ ಪುನೀತ್ ರಾಜಕುಮಾರ್ ಅವರು ಆಗಮಿಸಲಿದ್ದಾರೆ.ಡಾ.ರಾಜಕುಮಾರ್ ರಸ್ತೆಯ ರಾಘವ ಕಲಾಮಂದಿರದಲ್ಲಿ ಸಂಜೆ 6-15ಕ್ಕೆ ಈ ಕಾರ್ಯಕ್ರಮ ಜರುಗಲಿದೆ. ನವರಂಗ್ ಮೆಲೋಡೀಸ್‍ನ ವ್ಯವಸ್ಥಾಪಕರಾದ ಹಲೋ ಜೋಶಿ ಇವರು ಕಲಾವಿದರ ಸಹಾಯಾರ್ಥವಾಗಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮಕ್ಕೆ ಮುಖ್ಯ ಉದ್ಘಾಟಕರಾಗಿ ನಾರಾ ಭರತ್ ರೆಡ್ಡಿ ಆಗಮಿಸಲಿದ್ದಾರೆ.
ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗುರುನಾಥ್ ಮುತ್ತೂರು, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿಎಸ್‍ಪಿ ಸರ್ದಾರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಎಂ.ಶಿವಾಜಿರಾವ್, ಪ್ರಧಾನ ಕಾರ್ಯದರ್ಶಿ ಡಿ.ರಾಮಕೃಷ್ಣ ಇನ್ನಿತರರು ಭಾಗವಹಿಸಲಿದ್ದಾರೆ. ವಿಶೇಷ ಆಕರ್ಷಣೆಯಾಗಿ ಜೂನಿಯರ್ ಗುರುಕಿರಣ್, ಅಪರೂಪದ ಗಾಯಕ ಸೋಮಶೇಖರ್, ಗಾಯಕಿ ನಿಶಾ ಜೋಷಿ ಸೇರಿದಂತೆ ಉದಯ ಟಿವಿ ವಾಹಿನಿಯಲ್ಲಿ ಗಮನ ಸೆಳೆದಂತಹ ಹಲವು ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ, ಡಾ.ರಾಜಕುಮಾರ್ ಅವರ ಜನಪ್ರಿಯ ಗೀತೆಗಳನ್ನು ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

0 Comments