ಬಳ್ಳಾರಿ,ಏ.23: ಆರೋಗ್ಯಕರ ಭಾರತ ಹಾಗೂ ಕರ್ನಾಟಕ ನಿರ್ಮಾಣಕ್ಕೆ ಇಂತಹ ಆರೋಗ್ಯ ಮೇಳಗಳು ಪ್ರಮುಖವಾಗಿದ್ದು ಜನರು ಇಂತಹ ಮೇಳಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವುದರ ಮೂಲಕ ತಮ್ಮ ಆರೋಗ್ಯವನ್ನು ಭದ್ರಪಡಿಸಿಕೊಳ್ಳುವುದರಲ್ಲಿ ಇದೊಂದು ಉತ್ತಮ ಹೆಜ್ಜೆ ಎಂದು ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀ ರಾಮುಲು ಅವರು ಹೇಳಿದರು.ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ 75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಆಯು ಷ್ಮನ್ ಭಾರತ್-ಆರೋಗ್ಯ ಕರ್ನಾಟಕ ತಾಲೂಕು ಮಟ್ಟದ ಉಚಿತ ಆರೋಗ್ಯ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇವತ್ತು ನವಭಾರತ ನಿರ್ಮಾಣ ನಮ್ಮ ಕನಸಾಗಿದ್ದು, ಅದು ನಿಜ ಅಗಬೇಕೆಂದರೆ ಮೊದಲು ಸದೃಢ ಭಾರತದ ನಿರ್ಮಾಣ ಅಗಬೇಕು. ಸದೃಢ ಭಾರತ ನಿರ್ಮಾಣ ಅಗಬೇಕೆಂದರೆ ಮೊದಲು ಆಯುಷ್ಮನ್ ಭಾರತ, ಆರೋಗ್ಯಕರ ಕರ್ನಾಟಕ ನಿರ್ಮಾಣ ಬಹುಮುಖ್ಯ ಹೊಂದುತ್ತದೆ.ಇದು ನಮ್ಮ ಪ್ರಧಾನಿಯವರ ನಂಬಿಕೆಯಾದ್ದರಿಂದ ಆರೋಗ್ಯ ವಲಯಕ್ಕೆ ಹಿಂದೆಂದೂ ನೀಡದ ಮಹತ್ವ ನಮ್ಮ ಸರ್ಕಾರ ನೀಡುತ್ತಲಿದೆ ಎಂದು ಹೇಳಿದರು.ಕೈಗೆಟಕುವ ದರದಲ್ಲಿ ಗುಣಮಟ್ಟ ಆರೋಗ್ಯ ಸೇವೆ ಒದಗಿಸುವಲ್ಲಿ ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರಮುಖ ಗುರಿ ಆಗಿದ್ದು, ಆ ನಿಟ್ಟಿನಲ್ಲಿ ಜವಾಬ್ದಾರಿ ನಿರ್ವಹಿಸುತ್ತಿವೆ ಎಂದರು.ಒಬ್ಬ ಮನುಷ್ಯನಿಗೆ ಜೀವನದಲ್ಲಿ ಎರಡು ಅಂಶಗಳು ಅತಿ ಅವಶ್ಯಕ ಒಂದು ಆಹಾರ ಮತ್ತೊಂದು ಆರೋಗ್ಯವಾಗಿದ್ದು ಆಹಾರದಲ್ಲಿ ಏನೇ ವ್ಯತ್ಯಾಸ ಆದರೂ ಆರೋಗ್ಯ ಕುಂಠಿತಗೊಳ್ಳುತ್ತದೆ ಅದ್ದರಿಂದ ಆಹಾರ ಭದ್ರತೆ ಮೂಲಕ ದುಡಿಯುವ ಕೈಗಳಿಗೆ ಶಕ್ತಿ ತುಂಬಿಸೋ ಕೆಲಸ ನಮ್ಮ ಸರ್ಕಾರ ಮಾಡಿದೆ ಎಂದರು.ವಾಸ್ತವದಲ್ಲಿ ದೊಡ್ಡ ಸವಾಲು ಎಂದರೆ ಶ್ರೀಮಂತರು ಆರೋಗ್ಯ ಸರಿಇಲ್ಲದಿದ್ದಲ್ಲಿ ದೊಡ್ಡ ದೊಡ್ಡ ಆಸ್ಪತ್ರೆಗೆ ಹೋಗಿ ಉತ್ತಮ ಚಿಕಿತ್ಸೆಯನ್ನು ಪಡೆಯುತ್ತಾರೆ, ಆದರೆ ಬಡವರು ದೊಡ್ಡ ಆಸ್ಪತ್ರೆಗೆ ಹೋಗಿ ಬರುವುದೇ ಒಂದು ದೊಡ್ಡ ಸವಾಲಾಗಿದ್ದು ಅದರೆ ಇವತ್ತಿನ ಪರಿಸ್ಥಿತಿ ಬದಲಾಗಿದೆ.ಕೈಗೆಟಕುವ ದರದಲ್ಲಿ ಗುಣಮಟ್ಟ ಆರೋಗ್ಯ ಸೇವೆಗಳನ್ನ ಒದಗಿಸುವ ಕೆಲಸ ನಮ್ಮ ಸರಕಾರಗಳು ಮಾಡುತ್ತಿವೆ ಎಂದರು.ಆಯುಷ್ಮನ್ ಭಾರತ್, ಜನೌಷಧಿ ಮಳಿಗೆಗಳು - ಇವೆಲ್ಲದರ ಗುರಿ - ಉತ್ತಮ ಆರೋಗ್ಯ ಸೇವೆ ಹಾಗೂ ಕೈಗೆಟುಕುವ ದರಗಳಲ್ಲಿ ಲಭ್ಯ.
ಇವತ್ತು ವಿಶ್ವದ ಅತಿದೊಡ್ಡ ಆರೋಗ್ಯ ಯೋಜನೆ - ಆಯುಷ್ಮನ್ ಭಾರತ್ ಆಗಿದ್ದು - ಇದರಡಿ ದೇಶದ ಸುಮಾರು 10.74 ಕೋಟಿ ಕುಟುಂಬಗಳ ಸುಮಾರು 50 ಕೋಟಿ ಜನರಿಗೆ - ಉಚಿತ ಆರೋಗ್ಯ ಸೇವೆಗಳನ್ನ (medical coverage up to 5 lakh) ಒದಗಿಸಲಾಗುತ್ತಿದೆ. ಹಾಗೆಯೇ ಜನ್ ಔಷಧಿ ಕೇಂದ್ರಗಳ ಮೂಲಕ ಪ್ರತಿಯೊಬ್ಬರಿಗೂ ಅಗ್ಗದ ದರದಲ್ಲಿ ಉತ್ತಮ ಔಷಧಿಗಳನ್ನ ದೊರಕಿಸಿಕೊಡುವ ಕೆಲಸ ನಮ್ಮ ಸರ್ಕಾರದಿಂದ ಅಗಿದೆ ಎಂದು ವಿವರಿಸಿದರು. ಇವತ್ತು ಉತ್ತಮ ವೈದ್ಯಕೀಯ ಸೌಲಭ್ಯಗಳನ್ನ ಸಿಟಿಗಳಾಚೆ, ಹಳ್ಳಿಯ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಯೋಜನೆಗಳನ್ನ ರೂಪಿಸಲಾಗುತ್ತಿದ್ದು, One India One Health ಯೋಜನೆ ಅಡಿ 2030ರ ವೇಳೆಗೆ ದೇಶದ ಆರೋಗ್ಯ ವಲಯದಲ್ಲಿ ಮಹತ್ತರ ಬದಲಾವಣೆ ತರುವ ಉದ್ದೇಶ ಇದೆ. ಹೀಗೆ ಕೇಂದ್ರದ ಹತ್ತು ಹಲವು ಯೋಜನೆಗಳ ಜೊತೆ ರಾಜ್ಯ ಸರ್ಕಾರವೂ ಉತ್ತಮ ಯೋಜನೆಗಳನ್ನ ರೂಪಿಸಲಾಗುತ್ತಿದೆ ಎಂದು ಹೇಳಿದ ಅವರು, 100 ಹಿಂದುಳಿದ ತಾಲೂಕುಗಳ ಸಮಗ್ರ ಅಭಿವೃದ್ಧಿ ಯೋಜನೆ ಅಡಿ 100 ಅತಿ ಹೆಚ್ಚು ಒತ್ತಡ ಇರುವ primary health centre 25 bedded model primary health centreಗಳಾಗಿ 2 ವರ್ಷಗಳಲ್ಲಿ 1000 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಯೋಜನೆ ಘೋಷಣೆ ಆಗಿದೆ ಎಂದರು.ಮಹಿಳೆಯರಿಗೆ 300 ಮಹಿಳಾ ಸ್ವಾಸ್ಥ್ಯ ಕೇಂದ್ರ ಆರಂಭಿಸುವ ಘೋಷಣೆ ಮಾಡಲಾಗಿದೆ. 438 ನಮ್ಮ ಕ್ಲಿನಿಕ್ ಗಳು, 11 ಕೋಟಿ ವೆಚ್ಚದಲ್ಲಿ ಮೊಬೈಲ್ ಕ್ಲಿನಿಕ್ ಗಳು ಹಾಗೂ 100 ಹೈಟೆಕ್ ಕ್ಲಿನಿಕ್ ಗಳನ್ನ ಅಗತ್ಯವಾರು ರಾಜ್ಯದ ವಿವಿದೆಡೆ ಸ್ಥಾಪಿಸುವ ಘೋಷಣೆ ಮಾಡಲಾಗಿದೆ. ಹೀಗೆ ಉತ್ತಮ ವೈದ್ಯಕೀಯ ವ್ಯವಸ್ಥೆ ಹಾಗೂ ಆರೋಗ್ಯ ಸೇವೆಗಳಿಂದ ಆರೋಗ್ಯಕರ ಸದೃಢ ಭಾರತ ನಿರ್ಮಾಣ ನಿರ್ಮಾಣಕ್ಕಾಗಿ ಹೆಜ್ಜೆಗಳನ್ನ ಇಡಲಾಗುತ್ತಿದೆ ಎಂದರು.ಈ ವ್ಯವಸ್ಥೆಗಳ ಸಂಪೂರ್ಣ ಬಳಕೆ ಮಾಡಿಕೊಂಡು ಆರೋಗ್ಯಕರ ಭಾರತ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸೋಣ ಎಂದು ಹೇಳಿದರು.ಈ ಸಂದರ್ಭದಲ್ಲಿ ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ವಸ್ತು ಪ್ರದರ್ಶನ ಮಳಿಗೆಗಳನ್ನು ವೀಕ್ಷಿಸಿದರು.ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರ ರೆಡ್ಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಆರೋಗ್ಯ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನಿರ್ಮಾಣಕ್ಕೆ ಚರ್ಚಿಸಲಾಗುತ್ತಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಹೆಚ್.ಹನುಮಂತಪ್ಪ, ಎಪಿಎಂಸಿ ಅಧ್ಯಕ್ಷರಾದ ಉಮೇಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ನಿರ್ದೇಶಕಿ ಡಾ.ಇಂದುಮತಿ, ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ, ಜಿಲ್ಲಾ ಪಂಚಾಯತ್ ಸಿಇಒ ಜೆ.ಲಿಂಗಮೂರ್ತಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಲ್ ಜನಾರ್ದನ್, ವಿಮ್ಸ್ ನಿರ್ದೇಶಕರಾದ ಡಾ.ಟಿ ಗಂಗಧಾರಗೌಡ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಎನ್.ಬಸರೆಡ್ಡಿ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಮೋಹನ್ ಕುಮಾರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್ ಸೇರಿದಂತೆ ಮಹಾನಗರ ಪಾಲಿಕೆಯ ಸದ್ಯಸರು ಹಾಗು ಆಸ್ಪತ್ರೆಯ ಸಿಬ್ಬಂದಿ ಮತ್ತಿತರರು ಇದ್ದರು.

0 Comments