Ticker

6/recent/ticker-posts

Ad Code

Responsive Advertisement

ಪ್ರಜಾಕೀಯ ಮುಖಂಡ ಸಿ.ಮುರಳಿಧರ್‌ ಎಎಪಿ ಸೇರ್ಪಡೆ

ಪ್ರಜಾಕೀಯ ಪಕ್ಷದ ಮುಖಂಡರು ಹಾಗೂ ರಾಜ್ಯ ಗಂಗಾಮತಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಮುರಳಿಧರ್‌ರವರು ಆಮ್‌ ಆದ್ಮಿ ಪಾರ್ಟಿಗೆ ಸೇರ್ಪಡೆಯಾದರು.



ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಿ.ಮುರಳಿಧರ್‌ರವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಬೆಂಗಳೂರು ಎಎಪಿ ಅಧ್ಯಕ್ಷ ಮೋಹನ್‌ ದಾಸರಿ, “ಇತ್ತೀಚಿನ ದಿನಗಳಲ್ಲಿ ವಿವಿಧ ಪಕ್ಷಗಳ, ವಿವಿಧ ಸಮುದಾಯಗಳ, ವಿವಿಧ ವೃತ್ತಿಯ ಪ್ರಾಮಾಣಿಕ ವ್ಯಕ್ತಿತ್ವದವರು ಆಮ್‌ ಆದ್ಮಿ ಪಾರ್ಟಿ ಸೇರುತ್ತಿದ್ದಾರೆ. ಇದರಿಂದಾಗಿ ಪಕ್ಷದ ಮುಖಂಡರು, ಕಾರ್ಯಕರ್ತರ ಉತ್ಸಾಹ ಹೆಚ್ಚಾಗುತ್ತಿದೆ. ಮುಂಬರುವ ಚುನಾವಣೆಗಳ ಮೇಲೆ ಇದು ಉತ್ತಮ ಪರಿಣಾಮ ಬೀರಲಿದೆ” ಎಂದು ಹೇಳಿದರು.

“ಸಿ.ಮುರಳಿಧರ್‌ರವರು ಸ್ವರಾಜ್ಯ ಮಾತೃಭೂಮಿ ಎಂಬ ಸಂಘವನ್ನು ಸ್ಥಾಪಿಸಿ, ಸರ್ಕಾರಿ ಶಾಲೆಗಳನ್ನು ದತ್ತುಪಡೆದು ಮಾದರಿಯನ್ನಾಗಿ ಮಾಡಿದ್ದಾರೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗಾಗಿ ಅನೇಕ ಹೋರಾಟಗಳನ್ನು ಮಾಡಿದ್ದಾರೆ. ಗಂಗಾಮತಸ್ಥ ಸಮುದಾಯ ಸೇರಿದಂತೆ ಪ್ರವರ್ಗ 1ರ ಸಮುದಾಯಗಳ ಏಳಿಗಾಗಿ ಶ್ರಮಿಸಿದ ಅನುಭವ ಹೊಂದಿದ್ದಾರೆ. ಆಮ್‌ ಆದ್ಮಿ ಪಾರ್ಟಿಯ ತತ್ತ್ವ ಸಿದ್ಧಾಂತಗಳು ಹಾಗೂ ದೆಹಲಿಯಲ್ಲಿ ಕೇಜ್ರಿವಾಲ್‌ ಸರ್ಕಾರ ನೀಡುತ್ತಿರುವ ಪಾರದರ್ಶಕ ಹಾಗೂ ಜನಪರ ಆಡಳಿತಕ್ಕೆ ಆಕರ್ಷಿತರಾಗಿ ಇಂತಹ ಅನೇಕರು ಪಕ್ಷ ಸೇರುತ್ತಿರುವುದು ಸಂತಸ ತಂದಿದೆ” ಎಂದು ಮೋಹನ್‌ ದಾಸರಿ ಹೇಳಿದರು.

  ಪಕ್ಷದ ಸಿದ್ಧಾಂತಗಳನ್ನು ಜನಪರ ಕೆಲಸಗಳನ್ನು ಮೆಚ್ಚಿ ಜಿಕೆವಿಕೆ ರೇಷ್ಮೆ ಕೃಷಿ ವಿಭಾಗದ ಮಾಜಿ ಪ್ರಾಧ್ಯಾಪಕ ಮುಖ್ಯಸ್ಥ ಪ್ರೊ.ಕೆ.ಪಿ.ಚಿನ್ನಸ್ವಾಮಿ, ಯಲಹಂಕ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ಸಿನ ಮಾಜಿ  ಕಾರ್ಯದರ್ಶಿಗಳು ಆದಂತಹ ಹೆಚ್ ಎಂ ಭಾನುಪ್ರಕಾಶ , ಸಮಾಜ ಕಲ್ಯಾಣ ಇಲಾಖೆಯ ಮಾಜಿ ಜಂಟಿ ನಿರ್ದೇಶಕ ಮತ್ತು ಸಾಮಾಜಿಕ ಹೋರಾಟಗಾರರಾದ ಕೆ ವೈ ಕೊಪ್ಪೂರಕರ್ ಪಕ್ಷಕ್ಕೆ ಸೇರ್ಪಡೆಯಾದರು.

ಸಿ.ಮುರಳಿಧರ್‌ರವರು ಮಾತನಾಡಿ, “ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡುವ ಏಕೈಕ ಪಕ್ಷವೆಂದರೆ ಆಮ್‌ ಆದ್ಮಿ ಪಾರ್ಟಿ. ಇದನ್ನು ದೆಹಲಿಯಲ್ಲಿ ಕೇಜ್ರಿವಾಲ್‌ರವರು ಸಾಧಿಸಿ ತೋರಿಸಿದ್ದಾರೆ. ಕರ್ನಾಟಕದ ಸರ್ಕಾರಿ ಶಾಲೆಗಳು ಕೂಡ ಅದೇ ಮಾದರಿಯಲ್ಲಿ ಅಭಿವೃದ್ಧಿ ಕಾರಣಬೇಕೆಂದರೆ, ಇಲ್ಲಿ ಆಮ್‌ ಆದ್ಮಿ ಪಾರ್ಟಿಯ ಸರ್ಕಾರ ರಚನೆಯಾಗಬೇಕು. ಈ ನಿಟ್ಟಿನಲ್ಲಿ ಪಕ್ಷ ಸಂಘಟಿಸಲು ನಾನು ಶ್ರಮಿಸುತ್ತೇನೆ. ಆಮ್‌ ಆದ್ಮಿ ಪಾರ್ಟಿಯು ತಳ ಸಮುದಾಯಗಳನ್ನೂ ಸಮಾನವಾಗಿ ಗೌರವಿಸುವ ನಿಲುವು ಹೊಂದಿದ್ದು, ಇದರಿಂದ ಮಾತ್ರ ನಮ್ಮ ಗಂಗಾಮತಸ್ಥ ಸೇರಿದಂತೆ ಪ್ರವರ್ಗ 1ರ ಸಮುದಾಯಗಳ ಜನರು ಏಳಿಗೆ ಕಾಣಬಹುದಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಿಜಯ ಶಾಸ್ತ್ರಿಮಠ, ಫಣಿರಾಜ್, ಸುಹಾಸಿನಿ ,ನಿತಿನ್ ರೆಡ್ಡಿ ,ಉಷಾ ಮೋಹನ್‌ ಹಾಗೂ ಮುರಳಿಧರ್‌ರವರ ಅನೇಕ ಬೆಂಗಲಿಗರು, ಹಿತೈಷಿಗಳು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


Post a Comment

0 Comments

Ad Code

Responsive Advertisement