Ticker

6/recent/ticker-posts

Ad Code

Responsive Advertisement

ಸರ್ಜಾಪುರದಿಂದ ಟಿನ್‌ಫ್ಯಾಕ್ಟರಿ ಬಸ್‌ನಿಲ್ದಾಣಕ್ಕೆ ನೂತನವಾಗಿ ಸಾರಿಗೆ ಸೇವೆ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ.

ಸಾರ್ವಜನಿಕ ಪ್ರಯಾಣಿಕರ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಅನುಕೂಲಕ್ಕಾಗಿ, ಬೆಂ.ಮ.ಸಾ.ಸಂಸ್ಥೆಯಿಂದ ದಿನಾಂಕ 06-04-2022 ರಿಂದ ಜಾರಿಗೆ ಬರುವಂತೆ ಹೊಸ ಮಾರ್ಗ ಸಂಖ್ಯೆ 500-ಸಿಹೆಚ್‌ ಅನ್ನು ಪರಿಚಯಿಸಲಾಗಿದೆ.

ಸದರಿ ಮಾರ್ಗವನ್ನು ಸರ್ಜಾಪುರದಿಂದ ದೊಮ್ಮಸಂದ್ರ, ಕೊಡತಿ, ದೊಡ್ಡಕನ್ನಲ್ಲಿ, ಕೈಕೊಂಡ್ರಹಳ್ಳಿ, ಬೆಳ್ಳಂದೂರು, ಮಾರತ್ಹಳ್ಳಿ ಬ್ರಿಡ್ಜ್‌ಮೂಲಕ ವರ್ತುಲ ರಸ್ತೆಯ ಮಾರ್ಗವಾಗಿ ಟಿನ್‌ಫ್ಯಾಕ್ಟರಿ ಬಸ್‌ನಿಲ್ದಾಣಕ್ಕೆ 17 ಸಾರಿಗೆಗಳಲ್ಲಿ, 92 ಏಕಮುಖ ಸುತ್ತುವಳಿಗಳನ್ನು (ಸಂಚಾರ ದಟ್ಟಣೆ ವೇಳೆಗಳಲ್ಲಿ 10 ನಿಮಿಷ ಅಂತರದಲ್ಲಿ ಮತ್ತು ವಿರಳ ಸಂಚಾರ ದಟ್ಟಣೆ ವೇಳೆಗಳಲ್ಲಿ 20 ನಿಮಿಷಗಳ ಅಂತರದಲ್ಲಿ) ಕಾರ್ಯಾಚರಿಸಲಾಗುತ್ತಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.


Post a Comment

0 Comments

Ad Code

Responsive Advertisement