ಬಳ್ಳಾರಿ ಏ 25. ಬಳ್ಳಾರಿ ಮಹಾನಗರ ಪಾಲಿಕೆಯ ಮಹಾ ಪೌರರಾದ ಶ್ರೀಮತಿ ರಾಜೇಶ್ವರಿಯವರು ಅಧಿಕಾರ ಸ್ವೀಕರಿಸಿದಾಗಿನಿಂದಲೂ ಈ ವರೆಗೂ ವಾರ್ಡು ವಾರ್ಡುಗಳು ಸಂಚರಿಸಿ ಯಾವ ವಾರ್ಡಿನಲ್ಲಿ ಏನೇನು ಸಮಸ್ಯೆಗಳಿದ್ದಾವೆಂದು ಕೆಳಿ ತಿಳಿದುಕೊಂಡು ಸಮಸ್ಯೆಗಳಿಗೆ ಪರಿಷ್ಕಾರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಾನಗರ ಪಾಲಿಕೆಯ ಆಯುಕ್ತರು ಪ್ರೀತಿ ಗೆಹ್ಲೋಟ್ ಅವರೊಂದಿಗೆ 34 ನೇ ವಾರ್ಡಿಗೆ ತೆರಳಿ ಅಲ್ಲಿರುವ ಜನರ ಸಮಸ್ಯೆಗಳನ್ನು ಆಲಿಸಿದರು. ಬೀದಿ ದೀಪಗಳು, ಕುಡಿಯುವ ನೀರು,ರಸ್ತೆ,ಚರಂಡಿಗಳ ತೊಂದರೆ ಇದೆಯೆಂದು ಸ್ಥಾನಿಕರು ಸಮಸ್ಯೆಗಳನ್ನು ಹೆಳಿಕೊಂಡರು. ಸಮಸ್ಯೆಗಳಿಗೆ ಸ್ಪಂದಿಸಿದ ಅವರು ಶೀಘ್ರದಲ್ಲಿ ನಿಮ್ಮ ಸಮಸ್ಯೆಗಳನ್ನು ಇಥ್ಯರ್ತಗೊಳಿಸುತ್ತೇವೆ ಎಂದು ಭರವಸೆ ನೀಡಿದರು. ಈಸಂಧರ್ಬದಲ್ಲಿ ಮಾಜಿ ಮೇಯರ್ ರಮಣ,ವಾರ್ಡುಗಳ ಸದಸ್ಯರು,ಪಾಲಿಕೆಯ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.

0 Comments