ಬಳ್ಳಾರಿ ಏ 25. ಇಲ್ಲಿನ ಕಲಾಕೃತಿಗಳನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು ಒಬ್ಬನೇ ಒಬ್ಬ ವ್ಯಕ್ತಿ ಯಾವುದೇ ತರಹದ ಫಲಾಪೇಕ್ಷೆಯೆ ಇಲ್ಲದೇ ನನ್ನ ಕಲಾಕೃತಿಗಳನ್ನು ಎಲ್ಲರೂ ನೋಡಬೇಕು ಅವುಗಳ ಪರಮಾರ್ಥಗಳನ್ನು ಅಥವಾ ಸಂದೇಶಗಳನ್ನು ತಿಳಿದುಕೊಳ್ಳಬೇಕು ಎನ್ನುವ ದೃಷ್ಟಿಯಿಂದ ಕಲಾಕೃತಿಗಳನ್ನು ರಚಿಸುತ್ತಾರೆ. ಆದುದರಿಂದ ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಸ್ವ ಆಸಕ್ತಿಯಿಂದ ವಿದ್ಯಾರ್ಥಿಗಳು ಇದನ್ನೆಲ್ಲ ಮಾಡುತ್ತಿರುವುದು ಖುಷಿ ಸಂಗತಿ ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಸ.ಚಿ.ರಮೇಶ ಅವರು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ವಿಶ್ವವಿದ್ಯಾಲಯದ ಕಲಾ ಗ್ಯಾಲರಿ ದೃಶ್ಯಕಲಾ ವಿಭಾಗದಲ್ಲಿ ದಿನಾಂಕ 22.4.2022ರಂದು ಹನುಮಂತು ಅವರ ಏಕವ್ಯಕ್ತಿ ಕಲಾ ಪ್ರದರ್ಶನವನ್ನು ಚಿತ್ರ ಬಿಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ವಿಮರ್ಶಕರು ಅಥವಾ ಪ್ರೇಕ್ಷಕರು ಬೇರೆ ಬೇರೆ ದೃಷ್ಟಿಕೋನಗಳಿಂದ ನೋಡಿ ಆನಂದ ಪಡುತ್ತಾನೆ. ನೋಡುಗನ ದೃಷ್ಟಿ ಮತ್ತು ಭಾವನೆಯನ್ನು ಕಲಾಕೃತಿಗಳು ಅರ್ಥೈಸುತ್ತವೆ. ವಿಭಾಗದ ವಿದ್ಯಾರ್ಥಿನಿ ವೆಂಕಟಲಕ್ಷ್ಮಮ್ಮ ಅವರ ಒಂದು ಕಲಾಕೃತಿಯನ್ನು ಬಗ್ಗೆ ವಿವರಿಸುತ್ತಾ ರೆಕ್ಕೆಗಳಿಗೆ ಶಕ್ತಿ ಇದೆ ಆದರೆ ದೇವರು ಶಕ್ತಿ ರೆಕ್ಕೆಗಳಿಗೆ ನೀಡಿರುತ್ತಾನೆ. ಹೀಗೆ ಹನುಮಂತನ ಕಲಾಕೃತಿಗಳನ್ನು ಮಾದರಿಯಾಗಿಟ್ಟುಕೊಂಡು ಮತ್ತು ಅನೇಕ ಸಮಾಜದಲ್ಲಿ ನಡೆಯುವ ಘಟನೆಗಳನ್ನು ಆದರಿಸಿ ಸಂದೇಶಗಳನ್ನು ತೋರಿಸುತ್ತಾನೆ.
ಹಾಗೆಯೇ ನನಗೆ ತಿಳಿದ ವಿಷಯವೆಂದರೆಯಯ ಆರೋಗ್ಯ ಮತ್ತು ನೆಮ್ಮದಿಯನ್ನು ತೋರಿಸುವ ಸಂದೇಶ ಹಾಗೆ ಮನುಷ್ಯ ಆರೋಗ್ಯ ಮತ್ತು ನೆಮ್ಮದಿ ಇಲ್ಲದಿದ್ದರೆ ಅವನು ನಾಗರಿಕನಾಗುತ್ತಾನೆ. ಇಲ್ಲಿ ಮನುಷ್ಯ ಜೀವಿಯು ಅತ್ಯುತ್ತಮ ಆಗಿದ್ದಾನೆ ಮನುಷ್ಯ ಎನ್ನುವುದು ಪ್ರಾಣಿಗಳಲ್ಲಿ ಬೇರ್ಪಡಿಸಿ ನೋಡುವುದೆ ನಾಗರಿಕತೆಯಾಗಿದೆ. ಹಾಗೆಯೇ ಇವರ ಆನೆ ಸಮಾಜಕ್ಕೆ ಬೇರೆ ಬೇರೆ ರೀತಿಯ ಸಂದೇಶಗಳನ್ನು ನೀಡುತ್ತಾ ಸ್ಪಷ್ಟವಾದ ಸಮಾಜವನ್ನು ನಿರ್ಮಾಣ ಮಾಡುವುದರ ಜೊತೆಗೆ ಗಿಡಗಳ ಜೊತೆ ಮನುಷ್ಯ ಬದುಕಲು ಸಾಧ್ಯವಾಗುತ್ತದೆ ಎಂದರು.ಕುಲಸಚಿವರು ಎ. ಸುಬ್ಬಣ್ಣ ರೈ ಅವರು ಮಾತನಾಡಿ ಜಗತ್ತಲ್ಲಿ ಮನುಷ್ಯ ಮಾತನಾಡುವುದಲ್ಲದೆ ಇಲ್ಲಿ ಕಲಾಕೃತಿಗಳು ಮಾತನಾಡುತ್ತವೆ. ಇಂತಹ ಕಲಾಕೃತಿಗಳು ಮುಂದಿನ ದಿನಮಾನಗಳಲ್ಲಿ ಒಳ್ಳೆಯದಾಗುತ್ತದೆ ಎನ್ನುವ ಭರವಸೆ ಮತ್ತು ಕಲಾಕೃತಿಗಳು ಮಾರಾಟವಾಗುತ್ತದೆ. ಅದರ ಸದುಪಯೋಗವನ್ನು ಕಲಾವಿದರು ಪಡೆದುಕೊಳ್ಳಬೇಕು ಮತ್ತು ಹನುಮಂತ ಅವರ ಚಿತ್ರಕಲಾ ಪ್ರದರ್ಶನವು ಯಶಸ್ವಿಯಾಗಿ ನಡೆಯಲಿ.ಕುಲಪತಿಗಳಾದ ಡಾ. ಸ.ಚಿ ರಮೇಶ, ಕುಲಸಚಿವರು ಡಾ. ಎ. ಸುಬ್ಬಣ್ಣ ರೈ, ಲಲಿತಕಲಾ ನಿಕಾಯದ ಡೀನ್‍ರಾದ ಡಾ.ಕೆ. ರವೀಂದ್ರನಾಥ, ದೃಶ್ಯಕಲಾ ವಿಭಾಗದ ಮುಖ್ಯಸ್ಥರಾದ ಡಾ. ಮೋಹನ್‍ರಾವ್ ಬಿ.ಪಂಚಾಳ ಹಾಗೂ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಪ್ರದರ್ಶಿಸಿದ ಹನುಮಂತು ಅವರು ಮತ್ತು ವೇದಿಕೆ ಮುಂಭಾಗದಲ್ಲಿ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ಕೆಲವು ಗಣ್ಯವ್ಯಕ್ತಿಗಳು ಹಾಜರಾಗಿದ್ದರು.

0 Comments