ಬೆಂಗಳೂರಿನ ಮಲ್ಲೇಶ್ವರದ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮ ಮಹೋತ್ಸವದ ಪ್ರಯುಕ್ತ ಏಪ್ರಿಲ್ 10, ಭಾನುವಾರ ಏರ್ಪಡಿಸಿದ್ದ "ಹರಿನಾಮ ಸಂಕೀರ್ತನೆ" ಗಾಯನ ಕಾರ್ಯಕ್ರಮದಲ್ಲಿ ಶ್ರೀಮತಿ ಚಾಂದಿನಿ ಗರ್ತಿಕೆರೆ ಅವರು ಹರಿದಾಸರ ಪದಗಳನ್ನು ಸುಶ್ರಾವ್ಯವಾಗಿ ಪ್ರಸ್ತುತ ಪಡಿಸಿದರು.
ವಾದ್ಯ ಸಹಕಾರದಲ್ಲಿ, ವಿದ್ವಾನ್ ಶ್ರೀ ಶ್ರೀನಿವಾಸ್ ಅನಂತರಾಮಯ್ಯ ಅವರು ಮೃದಂಗದಲ್ಲಿ, ವಿದುಷಿ ಶ್ರೀಮತಿ ವಾಸುಕಿ ಪರಿಮಳ ಅವರು ಪಿಟೀಲು ವಾದನದಲ್ಲಿ ಸಾಥ್ ನೀಡಿದರು.

0 Comments