Ticker

6/recent/ticker-posts

Ad Code

Responsive Advertisement

ಸಮಾಜ ಸೇವೆಗಾಗಿ ಚನ್ನಕೇಶವರವರಿಗೆ ಪ್ರಶಸ್ತಿ ಪ್ರಧಾನ


ಬೆಂಗಳೂರು : ಶ್ರೀ ಸತ್ಯಸಾಯಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರ ಹಾಗೂ ವಿ.ಎಸ್.ಆರ್. ಚಾರಿಟೀಸ್  ರವರ ಸಹಯೋಗದೊಂದಿಗೆ ಮಲ್ಲೇಶ್ವರದ ಸೇವಾ ಸದನದಲ್ಲಿ ನಡೆದ 11 ನೇ ವರ್ಷದ ರಾಜ್ಯ ಮಟ್ಟದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರಿಗೆ ಸಿದ್ದಗಂಗಾ ಶ್ರೀ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಮುಖಂಡರಾದ ಡಾ. ಆರ್. ಎಸ್. ರಾಜುರವರು  ಸಮಾಜ ಸೇವಾ ಕ್ಷೇತ್ರದಿಂದ ಬಿ.ಸಿ.ಯು. ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿರುವ ಎಂ. ಚನ್ನಕೇಶವರವರಿಗೆ ಪ್ರಶಸ್ತಿಯನ್ನು ಪ್ರಧಾನ ಮಾಡಿದರು. ಈ ವೇಳೆ ಕಲಾರಂಗದಲ್ಲಿ ಹಿರಿಯ ಸಾಧಕರಾದ  ಡಾ. ಕೆಂಚನೂರು ಶಂಕರ್, ಕೆಂಪೇಗೌಡ ಪ್ರಶಸ್ತಿ ಪುರಸ್ಕೃತೆ ಡಾ. ವಿಮಲ ಸುಬ್ರಹ್ಮಣ್ಯಂ, ಸಾಂಸ್ಕೃತಿಕ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಹೆಚ್.ಎ. ಸತ್ಯ ಮುಂತಾದವರು ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement