ಬಳ್ಳಾರಿ ಏ 25.ಬಳ್ಳಾರಿ ನಗರದ ಎಪಿಎಂಸಿ ಆವರಣದಲ್ಲಿ ಇರುವ ರೈತಣ್ಣನ ಊಟದ ಹಾಲ್ ನಲ್ಲಿ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಡಾ ರಾಜಕುಮಾರ್ ಅವರ 93ನೇ ಹುಟ್ಟು ಹಬ್ಬದ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕೇಕ್ ಕತ್ತರಿಸುವ ಮೂಲಕ ರೈತರಿಗೆ ಸಿಹಿ ಊಟ ವಿತರಣೆ ಮಾಡಿ ಮಾತನಾಡಿದ ಚೇಂಬರ್ ಅಧ್ಯಕ್ಷರಾದ ಸಿ ಶ್ರೀನಿವಾಸರಾವ್ ರಾಜಣ್ಣ ಆದರ್ಶಗಳೆ ನಮಗೆ ದಾರಿ ದೀಪ, ಅವರ ಚಿತ್ರಗಳು ಸಮಾಜದ ಕೈಗನ್ನಡಿಯಾಗಿದವು, ಅವರ ಬಂಗಾರದ ಮನುಷ್ಯ ಚಿತ್ರವು ಕೃಷಿ ಚಟುವಟಿಕೆಗಳಿಗೆ ಹೊಸ ಆಯಾಮ ನೀಡಿತು ಅಲ್ಲದೆ ಕನ್ನಡಕ್ಕೆ ಧಕ್ಕೆಯಾಗದಂತೆ ತಡೆಯುವ ಶಕ್ತಿ ಅವರಿಗಿತ್ತು ಎಂದರು.
ಈ ಸಂದರ್ಭದಲ್ಲಿ ರೈತನಣ್ಣ ಊಟದ ಉಸ್ತುವಾರಿ ಕೆ ಸಿ ಸುರೇಶ ಬಾಬು, ಟಿ ಶ್ರೀನಿವಾಸ ರಾವ್, ವಿ ರಾಮಚಂದ್ರ ,ಎನ್ ನಾಗರಾಜ, ಡಿ ವೀರೇಶ, ನಟರಾಜ್, ರವಿ, ತಿಮ್ಮಪ್ಪ ,ಚೌಧರಿ, ಸನ್ಮಾರ್ಗ ಗೆಳೆಯರ ಬಳಗದ ಕಪ್ಪಗಲ್ಲು ಬಿ ಚಂದ್ರಶೇಖರ ಆಚಾರ್ ,ಅಪ್ಪು ಸೇವಾ ಸಮಿತಿ ಜೆ ಪಿ ಮಂಜುನಾಥ, ಎಂ ಗುರು ಸ್ವಾಮಿ, ಜಿ ವೆಂಕಟೇಶಲು, ಎಂ ಶೇಷರೆಡ್ಡಿ ಇತರರು ಇದ್ದರು.
.jpg)
0 Comments