Ticker

6/recent/ticker-posts

Ad Code

Responsive Advertisement

ಪಾದಚಾರಿ ವಯೋವೃದ್ಧೆ ಮೇಲೆ ಟ್ರ್ಯಾಕ್ಟರ್ ಹರಿದು ಸ್ಥಳದಲ್ಲೇ ಸಾವು,ಘಟನಾ ಸ್ಥಳಕ್ಕೆ ಸಿದ್ದಪ್ಪ ಭೇಟಿ ಪರಿಶೀಲನೆ

ಬಳ್ಳಾರಿ ಏ 25.ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಬೃಂದಾವನ ಕ್ಯಾಂಪಿನಿಂದ ಬಾಗೇವಾಡಿ ಗ್ರಾಮಕ್ಕೆ ತನ್ನ ವೃದ್ಯಾಪ್ಯ ವೇತನವನ್ನು ತರಲು ಪಾದಚಾರಿಯಾಗಿ ಬರುತ್ತಿದ್ದ ವೃದ್ಧೆ ತಾಯಮ್ಮನ ಮೇಲೆ ಹಿಂದಿನಿಂದ ಬಂದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಪಕ್ಕದ ಗದ್ದೆಯಲ್ಲಿ ಟ್ರಾಲಿ ಟ್ರ್ಯಾಕ್ಟರ್ ಮತ್ತು ವೃದ್ಧೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜರುಗಿದೆ. 

ಈ ವಿಷಯ ತಿಳಿದ ತಕ್ಷಣವೇ ಬಿಜೆಪಿ ತಾಲೂಕ ಯುವಮೋರ್ಚ ಅಧ್ಯಕ್ಷ, ಶಾಸಕ ಸೋಮಲಿಂಗಪ್ಪನವರ ಪುತ್ರ, ಜನಪ್ರಿಯ ಯುವನಾಯಕರಾದ ಸಿದ್ದಪ್ಪನವರು,ಸಿಪಿಐ,ಪಿಎಸ್‍ಐ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಟ್ರಾಕ್ಟರ್ ಡ್ರೈವರ್ ಶೀನಪ್ಪನಿಗೂ ಗಾಯಕಳಾಗಿದ್ದರಿಂದ ಸಿರುಗುಪ್ಪ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಕೊಡಿಸಲು ಕಳುಹಿಸಿಕೊಟ್ಟರು. ಅಜ್ಜಿಯ ಮೃತದೇಹವನ್ನು ಪೋಸ್ಟ್‍ಮಾರ್ಟಂಗೆ ತೆರಳಿಸಿದರು. ಅಜ್ಜಿಯ ಕುಟುಂಬ ಸದಸ್ಯರಿಗೆ ಸಿದ್ದಪ್ಪನವರು ಸಾಂತ್ವನ ಹೇಳಿದರು. ಈಸಂಧರ್ಬದಲ್ಲಿ ಗ್ರಾಮದ ಹಿರಿಯರಾದ ಅಂಗಯ್ಯ , ಶೇಕ್ಷವಲಿ,ಊರಿನ ಹಿರಿಯರು, ಕುಟುಂಬದವರ ಉಪಸ್ಥಿತರಿದ್ದರು.


Post a Comment

0 Comments

Ad Code

Responsive Advertisement