Ticker

6/recent/ticker-posts

Ad Code

Responsive Advertisement

ವಿಕಲಚೇತನರ ಪಿಂಚಣೆ ತಡೆ;ಬಿ.ಜೆ.ಪಿ.ಸರ್ಕಾರದ ವಿರುದ್ದ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

ಕಾಂಗ್ರೆಸ್ ಭವನ ಅವರಣದಲ್ಲಿ ಯುವ ಕಾಂಗ್ರೆಸ್ ಪಕ್ಷದ ವತಿಯಿಂದ ವಿಕಲಚೇತನರಿಗೆ ಪ್ರತಿ ತಿಂಗಳು ಮಾಸಶನ(ಪಿಂಚಣೆ) ನೀಡಲಾಗುತ್ತಿತು ಅದರೆ 6ತಿಂಗಳಿಂದ ನೀಡದೇ ವಿಕಲಚೇತರಿಗೆ ಜೀವನ ಸಾಗಿಸಲು ಕಷ್ಟವಾಗಿದೆ .ಬಿ.ಜೆ.ಪಿ.ರಾಜ್ಯ ಸರ್ಕಾರ ಜನವಿರೋಧಿ ಮತ್ತು ವಿಕಲಚೇತನರ ವಿರೋಧಿ ನಡವಳಿಕೆಯನ್ನ ಖಂಡಿಸಿ  ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ್ ,ಪ್ರದೀಪ್ ಗೌಡ,ಆಶಿಕ್ ಗೌಡ,ಉಪಾಧ್ಯಕ್ಷೆ ದೀಪಿಕಾರೆಡ್ಡಿ ಮತ್ತು ಎನ್.ಎಸ್.ಯು.ಐ.ರಾಜ್ಯಾಧ್ಯಕ್ಷರಾದ ಕೀರ್ತಿಗಣೇಶ್ ರವರು ವಿದ್ಯಾರ್ಥಿಗಳು,ವಿಕಲಚೇತನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮಾನ್ಯ ಕೆ.ಪಿ.ಸಿ.ಸಿ.ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರ ಮಾರ್ಗದರ್ಶನದಲ್ಲಿ ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಬಿ.ವಿ.ಶ್ರೀನಿವಾಸ್ ರವರ ನೇತೃತ್ವದಲ್ಲಿ  ಬಿ.ಜೆ.ಪಿ.ಸರ್ಕಾರದ ವಿರುದ್ದ ಸತತ ಹೋರಾಟಕ್ಕೆ ಯುವ ಕಾಂಗ್ರೆಸ್ ಪ್ರತಿಭಟನೆಯನ್ನ ಹಮ್ಮಿಕೊಳ್ಳಲಾಗಿದೆ.ಲಾಕ್ ಡೌನ್ ಸಂದರ್ಭದಲ್ಲಿ ವಿಕಲಚೇತರಿಗೆ ಮಾಸಶನ ಕೊಟ್ಟಿಲ್ಲ ನಂತರ ಇದೀಗ ಕಳೆದ 6ತಿಂಗಳಿಂದ ಪ್ರತಿ ತಿಂಗಳು ಕೊಡುವ ಪಿಂಚಣಿ ಕೊಟ್ಟಿಲ್ಲ.ಸಮರ್ಪಕ ಉದ್ಯೋಗವಿಲ್ಲ,ಪಿಂಚಣಿ ಇಲ್ಲದೇ ವಿಕಲಚೇತನರ ಬದುಕು ಸಂಕಷ್ಟದಲ್ಲಿ ಇದ್ದಾರೆ.

ಮುಖ್ಯಮಂತ್ರಿಗಳು ಕೊಡಲೆ ಗಮನಹರಿಸಿ ವಿಕಲಚೇತನರಿಗೆ ಪ್ರತಿ ತಿಂಗಳ ಮಾಸಶನ ಸಮರ್ಪಕ ನೀಡಬೇಕು,ವಿಕಲಚೇತನರ ಪಿಂಚಣಿ ಹೆಚ್ಚಳ ಮಾಡಬೇಕು ಇಲ್ಲದೇ ಹೋದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಹೇಳಿದರು.

Post a Comment

0 Comments

Ad Code

Responsive Advertisement