Ticker

6/recent/ticker-posts

Ad Code

Responsive Advertisement

Review News: ಅಧಿಕಾರಿಗಳೆ, ಶಾಸಕರೆ, ಸಂಸದರೆ, ರಾಜಕಾರಣಿಗಳೆ ಇತ್ತ ಗಮನ ಹರಿಸಿ

ಬೆಂಗಳೂರು, ಮಾ.24: ಬಿಬಿಎಂಪಿ ವ್ಯಾಪಿಯಲ್ಲಿ ಬರುವ ರಿಂಗ್ ರಸ್ತೆಗಳಲಿ ಹಲವಾರು ವಾಹನಗಳ ಸಂಚಾರ ಸದಾಯಿರುತ್ತೆದೆಂಬುದು ಎಲ್ಲರಿಗು ತಿಳಿದಿರುವ ವಿಚಾರ.

ಇಂತಹ ರಸ್ತೆಗಳಲ್ಲಿ ನಿತ್ಯ ಸಂಚಾರದಟ್ಟಣೆ ನಿಯಂತ್ರಿಸಲು ಸಕಲ ರೀತಿಯ ಕಾರ್ಯಗಳನ್ನು ಪೋಲೀಸ್ ಇಲಾಖೆ ಹಾಗು ಬಿಬಿಎಂಪಿಯು ನಿರತರಾಗುತ್ತಿರುತ್ತವೆ. ರಿಂಗ್ ರಸ್ತೆಯಂದರೆ ಕೇಳಬೇಕೆ, ಸ್ಥಳೀಯ, ಅಂತರ್ ಜಿಲ್ಲಾ, ಅಂತರ್ ರಾಜ್ಯ ವಾಹನಗಳ ಓಡಾಟ ಸರ್ವೆಸಾಮಾನ್ಯ. ಅದೇ ರೀತಿಯಾಗಿ ಇಂತಹ ವಾಹನದಟ್ಟಣೆಯಿರುವ ರಸ್ತೆಗಳಲ್ಲಿ ಜನರು ರಸ್ತೆ ದಾಟುವುದು ಕೂಡ ಸಾಮಾನ್ಯವಾಗಿ ಕಂಡುಬರುತ್ತದೆ. “ಎಲ್ಲೊ ಒಂದು ಕಡೆ ಪರಲೋಕಕ್ಕೆ ಹೋಗಲು ಆಹ್ವಾನ ಮಾಡಿದಂತೆ.” ಅದೇ ರೀತಿಯಾಗಿ ಬಿಬಿಎಂಪಿ ವ್ಯಾಪಿಯಲ್ಲಿ ಬರುವ ರಿಂಗ್ ರಸ್ತೆಗಳಲ್ಲಿ ಬೆಳಗ್ಗೆ-ಮಧ್ಯಾಹ್ನ-ಸಂಜೆಯನ್ನದೇ ಮಹಿಳೆಯರು, ಮಕ್ಕಳು ಮತ್ತಿತರರು ರಸ್ತೆ ದಾಟುವುದು ಸರ್ವೆಸಾಮಾನ್ಯವಾಗಿದೆ.

ರಿಂಗ್ ರಸ್ತೆ ದಾಟಲು ಜನರು ತಮ್ಮ ಜೀವ ಕೈಯಲ್ಲಿಟ್ಟುಕೊಂಡು ದಾಟಬೇಕಾಗಿರುವ ಪರಿಸ್ಥಿತಿ ನಿರ್ಮಾಣವಾಗಿರುವುದು ಗೊತ್ತಿರುವ ವಿಚಾರ. ಕೆಲವು ರಿಂಗ್ ರಸ್ತೆಗಳಲ್ಲಿ ಸ್ಕೈವಾಕ್-ಕೆಳಸೇತುವೆ ಇರುವುದು ಕಂಡು ಬರುತ್ತದೆ. ಇನ್ನೂ ಕೆಲವು ಕಡೆ ಸ್ಕೈವಾಕ್-ಕೆಳಸೇತುವೆ ಇಲ್ಲದಿರುವುದು ಸಹ ಕಂಡುಬುರುತ್ತದೆ. ಅದರ ಪೈಕಿ ಗೊರಗೊಂಟೆಪಾಳ್ಯದಿ0ದ-ಬಿಇಎಲ್ ಸರ್ಕಲ್‌ಗೆ ಹೋಗುವ ರಿಂಗ್ ರಸ್ತೆ “ಎಮ್ ಇ ಎಸ್ ರಿಂಗ್ ರಸ್ತೆ” ಎಂಬ ಈ ಭಾಗದಲ್ಲಿ ವಾಹನಗಳ ಹಾಗು ಜನರ ದಟ್ಟಣೆೆಯಿರುತ್ತದೆಂದರೆ ತಪ್ಪಾಗಲಾರುದು. “ಎಮ್ ಇ ಎಸ್ ರಿಂಗ್ ರಸ್ತೆಯ” ಅಕ್ಕಪಕ್ಕ ಸಿಗುವ ಜಾಲಹಳ್ಳಿ, ಬಾಹುಬಲಿನಗರ, ಮುತ್ಯಾಲಮ್ಮನಗರ, ಜೆಪಿಪಾರ್ಕ್ನ ನಾಗರೀಕರು ಹಾಗು ಇನ್ನಿತರೆ ನಾಗರೀಕರು ಈ ರಿಂಗ್ ರಸ್ತೆ ಅವಲಂಬಿತರೆ0ದರೆ ತಪ್ಪಾಗಲಾರದು. ಜಾಲಹಳ್ಳಿಯಲ್ಲಿ ಹಲವು ಕೈಗಾರಿಕೆಗಳು, ಶಾಲೆಗಳು ಮತ್ತು ವಾಣಿಜ್ಯೋಧಮ ಚೆಟುವಟಿಗಳು ನಡದೆಯುವುದರಿಂದ ಈ ಭಾಗದಿಂದ ಆ ಭಾಗಕ್ಕೆ (ಮುತ್ಯಾಲಮ್ಮನಗರ, ಜೆ.ಪಿ.ಪಾರ್ಕ್) ಆ ಭಾಗದಿಂದ ಈ ಭಾಗಕ್ಕೆ ನಾಗರೀಕರ, ಶಾಲ ಮಕ್ಕಳ ಓಡಾಟ ದಿನನಿತ್ಯವಿರುತ್ತದೆ. “ಎಮ್ ಇ ಎಸ್ ರಿಂಗ್ ರಸ್ತೆ” ದಾಟಲು ಶಾಲಮಕ್ಕಳನ್ನು ಕರೆದುಕೊಂಡು ಹೋಗುವು ಪೋಷಕರು ಪಾಡು ಭಗವಂತನಿಗೆ ಪ್ರೀತಿ.

ಟ್ರಾಫಿಕ್ ಪೋಲೀಸರು ಇದ್ದರು ಸಹ ವಾಹನಗಳ ಹಾಗು ಜನರ ಓಡಾಟ ನಿಭಾಯಿಸಲು ಕಷ್ಟ ಎಂಬುದು ಎಲ್ಲರಿಗು ತಿಳಿದಿರುವ ವಿಚಾರ. ಹೆಬ್ಬಾಳದಲ್ಲಾದ ದುರ್ಘಟನೆ ಇಲ್ಲಾಗುವ ಮುಂಚೆ ಅಧಿಕಾರಿಗಳು, ಶಾಸಕರು, ಸಂಸದರು, ರಾಜಕೀಯ ನಾಯಕರು ಮತ್ತು ಸಮಾಜಸೇವಕರು ಇತ್ತ ಗಮನಹರಿಸಿದರೆ ಒಳಿತು. ಹಾಗಾಗಿ ಈ ಭಾಗದ ಬಿಬಿಎಂಪಿ ಅಧಿಕಾರಿಗಳು, ಶಾಸಕರು ಹಾಗು ಸಂಸದರು ಈ “ಎಮ್ ಇ ಎಸ್ ರಿಂಗ್ ರಸ್ತೆ” ಸ್ಕೈವಾಕ್ ಅಳವಡಿಸಿದರೆ ಸಾರ್ವಜನಿಕರಿಗೆ ಉಪಯೋಗವಾಗುವುದಲ್ಲದೇ ಜನರು ಕೆಲವೊಮ್ಮೆ ಅಪಘಾತಕ್ಕೆ ಒಳಗಾಗುವುದನ್ನು ತಡೆಯಬಹದು ಎಂಬುದು ಇಲ್ಲಿನ ಸ್ಥಳೀಯ ನಾಗರಿಕರಭಿಪ್ರಾಯ. ಜಾಲಹಳ್ಳಿ, ಬಾಹುಬಲಿನಗರ, ಮುತ್ಯಾಲಮ್ಮನಗರ, ಜೆಪಿಪಾರ್ಕ್ನ ನಾಗರೀಕರಿಗು ಹಾಗು ಇನ್ನಿತರೆ ನಾಗರೀಕರಿಗು ಉಪಯೋಗವಾಗುವುದರಲ್ಲಿ ಸಂದೇಹವಿಲ್ಲ.

ಮುಖ್ಯವಾಗಿ ಶಾಲಾಮಕ್ಕಳಿಗೆ ಅನುಕೂಲವಾಗುವುದರಲ್ಲಿ ಸಂಶಯವೇ ಬೇಡ. ಹಾಗಾಗಿ ಕೂಡಲೆ ಈ ಭಾಗದ ಬಿಬಿಎಂಪಿ ಅಧಿಕಾರಿಗಳು, ಶಾಸಕರು ಹಾಗು ಸಂಸದರು ಈ “ಎಮ್ ಇ ಎಸ್ ರಿಂಗ್ ರಸ್ತೆ” ಸ್ಕೈವಾಕ್ ಬಗ್ಗೆ ಗಮನಹರಿಸಿದರೆ ಒಳತೆಂಬುದು ಇಲ್ಲಿನ ನಾಗರೀಕರಭಿಪ್ರಾಯ. ಈ ವಿಚಾರವಾಗಿ ನಮ್ಮ ಪತ್ರಿಕೆಯ ವರದಿಗಾರರು ಸ್ಥಳೀಯರನ್ನು ಸಂಪರ್ಕಿಸಿದಾಗ ಸ್ಥಳೀಯ ನಾಗರೀಕರು ತಮ್ಮ ಅಳಲನ್ನು ತೋಡಿಕೊಂಡದ್ದನ್ನು ಮನಗಂಡು ನಮ್ಮ ವಾರ್ತಜಾಲ ಪತ್ರಿಕೆ ಸಂಸ್ಥೆಯಿ0ದ ನಾಗರೀಕರ ಪರವಾಗಿ; ಕೂಡಲೆ ಸ್ಕೈವಾಕ್ ಮಾಡುವ ವಿಚಾರವಾಗಿ ಸರಕಾರ, ಅಧಿಕಾರಿಗಳು, ಶಾಸಕರು ಹಾಗು ಸಂಸದರು ಗಮನಹರಿಸಿದರೆ ಜನರ ಹಾಗು ವಾಹನಗಳ ಸುಗಮ ಓಡಾಟಕ್ಕೆ ಅನುವಾಗಲಿದೆ.

-Shiva prasad, Varthajala, Bengaluru

Post a Comment

0 Comments

Ad Code

Responsive Advertisement