Ticker

6/recent/ticker-posts

Ad Code

Responsive Advertisement

Flash News: ಬೆಂಗಳೂರು ನಗರಕ್ಕೆ ವಿಶೇಷ ರೋಡ್ ಕೋಡ್: ಸಿಎಂ ಬೊಮ್ಮಾಯಿ ಘೋಷಣೆ

ಬೆಂಗಳೂರು, ಮಾ.24: ಬೆಂಗಳೂರು ನಗರದ ಸಮಗ್ರ ರಸ್ತೆ ಸುಧಾರಣೆ ಮತ್ತು ನಿರ್ವಹಣೆಗಾಗಿ ವಿಶೇಷ ರಸ್ತೆ ಕೋಡ್ ಜಾರಿ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.

ವಿಧಾನ ಪರಿಷತ್ ನಲ್ಲಿ ಇಂದು ಎಸ್ ರವಿ ಪ್ರಶ್ನೆಗೆ ಉತ್ತರಿಸಿದ ಸಿಎಂ, 'ನಗರದ ರಸ್ತೆಗಳಿಗೆ ಸಂಬ0ಧಿಸಿದ0ತೆ ಪರಿಹಾರ ಕಂಡುಕೊಳ್ಳುವುದು, ಅದರ ದುರಸ್ತಿ, ಹೊಸ ರಸ್ತೆ ನಿರ್ಮಾಣ, ತ್ಯಾಪೆ, ಎಲ್ಲೆಲ್ಲಿ ವೈಟ್ಟಾಪಿಂಗ್ ಅಗತ್ಯವಿದೆ ಎನ್ನುವುದೂ ಸೇರಿದಂತೆ ಹಲವು ವಿಷಯಗಳ ಸಾಧಕ-ಬಾಧಕಗಳನ್ನು ಪರಿಶೀಲಿಸಿ ರಸ್ತೆ ಸುಧಾರಣೆಗೆ ಒತ್ತು ನೀಡಲು ರಸ್ತೆ ಕೋಡ್ ಕೈಗೆತ್ತಿಕೊಳ್ಳಲಾಗುವುದು. ವೈಟ್ಟಾಪಿಂಗ್ ರಸ್ತೆ ನಿರ್ಮಾಣ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಅದರ ಬಗ್ಗೆ ಮರು ಚಿಂತನೆ ಮಾಡಲಾಗುತ್ತಿದೆ. ವೈಟ್ಟಾಪಿಂಗ್ ರಸ್ತೆಯನ್ನು ಅಗತ್ಯವಿರುವ ಕಡೆ ಮಾತ್ರ ಮಾಡಲು ನಿರ್ಧರಿಸಲಾಗಿದೆ. ವೈಟ್ಟಾಪಿಂಗ್ನಿ0ದಾಗಿ ಹೆಚ್ಚು ಹಣ ವ್ಯರ್ಥವಾಗುತ್ತಿದೆ ಎಂದು ಸಹ ಹೇಳಿದರು.

ಬಿಬಿಎಂಪಿ ಮತ್ತು ಕೆಆರ್ಐಡಿಎಲ್ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ರಸ್ತೆ ಕಾಮಗಾರಿಗಳ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. ಕೆಆರ್ಐಡಿಎಲ್ಗೆ ಕಾಮಗಾರಿ ವಹಿಸಲು ಯಾರು ಕಾರಣ, ಸಂಸ್ಥೆ ಕೈಗೆತ್ತಿಕೊಂಡ ಕೆಲಸದ ಪ್ರಗತಿ ಸೇರಿದಂತೆ ವಿವಿಧ ಮಾಹಿತಿಗಳನ್ನು ಕಲೆ ಹಾಕಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು, ಈ ವಿಚಾರದಲ್ಲಿ ಯಾರನ್ನೂ ರಕ್ಷಿಸುವ ಉದ್ದೇಶವಿಲ್ಲ ಎಂದು ಸಹ ಸಿಎಂ ಹೇಳಿದರು.

ಕಳೆದ 5 ವರ್ಷಗಳಲ್ಲಿ ವೈಟ್ಟಾಪಿಂಗ್ ರಸ್ತೆ ಕಾಮಗಾರಿ ಹೊರತುಪಡಿಸಿ 1,11.14 ಕಿ.ಮೀ ಉದ್ದದ ರಸ್ತೆ ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ 1,449.63 ಕೋಟಿ ವೆಚ್ಚವಾಗಿದೆ. ಪ್ರತಿ ರಸ್ತೆಯ ತಾಂತ್ರಿಕ ವಿನ್ಯಾಸ, ಅಗಲ, ರಸ್ತೆ ಪ್ರಾಮುಖ್ಯತೆ ಆಧಾರದ ಮೇಲೆ ರಸ್ತೆ ವೆಚ್ಚ ಬೇರೆ ಬೇರೆಯಾಗಿದೆ ಎಂದರು. ಕಳೆದ 5 ವರ್ಷಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 100.60 ಕಿ.ಮೀ ಉದ್ದದ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇದಕ್ಕಾಗಿ 1014.30 ಕೋಟಿ ವೆಚ್ಚ ಮಾಡಲಾಗಿದೆ. ಜತೆಗೆ ಕಳೆದ 5 ವರ್ಷಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 6,36,3.42 ಕಿ.ಮೀ ಉದ್ದದ ರಸ್ತೆಗಳ ನಿರ್ವಹಣೆ, ಮರು ಡಾಂಬರೀಕರಣ, ಚರಂಡಿ, ಪಾದಚಾರಿ ಮಾರ್ಗ ನಿರ್ಮಾಣ ಮಾಡಲಾಗಿದ್ದು, ಇದಕ್ಕಾಗಿ 4,110.05 ಕೋಟಿ ವೆಚ್ಚ ಮಾಡಲಾಗಿದೆ. ಬಿಬಿಎಂಪಿಯಲ್ಲಿ 3 ವರ್ಷಗಳ ಅವಧಿಯಲ್ಲಿ 6.371.26 ಉದ್ದದ ರಸ್ತೆಗಳಲ್ಲಿ ಗುಂಡಿ ಮತ್ತು ಹಾಳಾದ ರಸ್ತೆ ಗುರುತಿಸಲಾಗಿದ್ದು, 6343.05 ಕಿ.ಮೀ ಉದ್ದದ ರಸ್ತೆಯನ್ನು ದುರಸ್ಥಿಪಡಿಸಲಾಗಿದೆ ಎಂದು ಹೇಳಿದರು.

Varthajala Daily, Bengaluru

Post a Comment

0 Comments

Ad Code

Responsive Advertisement