ಬೆ0ಗಳೂರು, ಮಾ.24: ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಆರ್ ಆರ್ ಆರ್ ಶುಕ್ರವಾರ ಮಾರ್ಚ್ 25 ರಂದು ಬಿಡುಗಡೆಯಾಗಲಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.
ಈ ಚಿತ್ರದಲ್ಲಿ ಜೂನಿಯರ್ ಎನ್ ಟಿ ಆರ್, ರಾಮ್ ಚರಣ್, ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಒಳಗೊಂಡ0ತೆ ದೊಡ್ಡ ತಾರಾಬಳಗವೆ ಇದೆ. ಆರ್ಆರ್ಆರ್ ಟಿಕೆಟ್ ಗಳು ಈಗಾಗಲೇ ಸೋಲ್ಡ್ ಔಟ್ ಆಗಿವೆ. ಆದರೆ, ದೆಹಲಿ ಎನ್ಸಿಆರ್ ನಲ್ಲಿ ಪ್ರತಿ ಟಿಕೆಟ್ 2,100 ರೂ.ಗೆ ಮಾರಾಟ ಮಾಡಲಾಗುತ್ತಿದೆ ಎಂಬ ವಿಚಾರ ಬೆಚ್ಚಿಬೀಳಿಸಿದೆ!
ಈಗಾಗಲೇ ಟಿಕೆಟ್ ಬುಕಿಂಗ್ ಪ್ರಾರಂಭವಾಗಿದೆ. ಈಗಾಗಲೇ ಸಿನಿಮಾ ಹಾಲ್ಗಳನ್ನು ಹೌಸ್ಫುಲ್ ಎಂದು ಘೋಷಿಸಲಾಗಿದೆ. ನಾವು ದಕ್ಷಿಣ ಮತ್ತು ಉತ್ತರ ರಾಜ್ಯಗಳ ನಡುವೆ ಟಿಕೆಟ್ ಹೋಲಿಕೆ ಮಾಡಿದರೆ, ಅನ್ಯ ರಾಜ್ಯಗಳಲ್ಲಿ ಟಿಕೆಟ್ ಬೆಲೆಗಳು ಗಗನಕ್ಕೇರಿವೆ. ದೆಹಲಿ ಎನ್ ಸಿಆರ್ ನಲ್ಲಿ ಆರ್ ಆರ್ ಆರ್ ಟಿಕೆಟ್ ಗಳು ಸಿನಿಮಾ ಬುಕಿಂಗ್ ಅಪ್ಲಿಕೇಶನ್ ಬುಕ್ ಮೈ ಶೋನಲ್ಲಿ ತೆರಿಗೆಗಳಿಲ್ಲದೆ 2100 ರೂ.ಗಳಷ್ಟು ದುಬಾರಿಯಾಗಿದೆ.
ಬೆಂಗಳೂರಿನಲ್ಲಿ ಕೂಡ ಇದೆ ಸ್ಥಿತಿ ನಿರ್ಮಾಣವಾಗಿದೆ. ಎಸ್ಎಸ್ ರಾಜಮೌಳಿ ನಿರ್ದೇಶನದ ಆರ್ಆರ್ಆರ್ ತೆಲುಗು ಸ್ವಾತಂತ್ರ‍್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಅವರ ಜೀವನವನ್ನು ಆಧರಿಸಿದ ಕಾಲ್ಪನಿಕ ಕಥೆಯಾಗಿದೆ. ರಾಮ್ ಚರಣ್ ಮತ್ತು ಜೂನಿಯರ್ ಎನ್ ಟಿ ಆರ್ ನಾಯಕರಾಗಿ ನಟಿಸಿದ್ದಾರೆ. ಆರ್ ಆರ್ ಆರ್ ಸಿನಿಮಾವನ್ನು ಡಿವಿವಿ ದಾನಯ್ಯ ನಿರ್ಮಿಸಿದ್ದಾರೆ. ಆಲಿಯಾ ಭಟ್, ಅಜಯ್ ದೇವಗನ್, ಶ್ರಿಯಾ ಶರಣ್, ಸಮುದ್ರಕನಿ, ರೇ ಸ್ಟೀವನ್ಸನ್, ಒಲಿವಿಯಾ ಮೋರಿಸ್ ಮತ್ತು ಅಲಿಸನ್ ಡೂಡಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Varthajala Daily, Bengaluru
0 Comments