Ticker

6/recent/ticker-posts

Ad Code

Responsive Advertisement

BREAKING : ಗನ್ ತೋರಿಸಿ, ಸುಲಿಗೆ ಮಾಡಿದ್ದ 3 ಜನ ಅಂತಾರಾಜ್ಯ ಕಳ್ಳರ ಬಂಧನ

15-03-2022 ರಂದು ಯಶವಂತಪುರದ ರಾಜೇಶ್ವರಿ ಸ್ಕೂಲ್ ಹತ್ತಿರವಿರುವ ತಮ್ಮ ಮನೆಯಲ್ಲಿ ತಾನು, ತನ್ನ ತಾಯಿ ಮತ್ತು ಅಜ್ಜಿ ರವರುಗಳೊಂದಿಗೆ ಮನೆಯಲ್ಲಿದ್ದಾಗ ಮಧ್ಯಾಹ್ನ ಸುಮಾರು 1-20 ಗಂಟೆಯ ಸಮಯದಲ್ಲಿ ಯಾರೋ ಮನೆಯ ಬಾಗಿಲು ಬಡಿದರು. ಯಾರೆಂದು ನೋಡಲು ಬಾಗಿಲ ಬೀಗ ತೆಗೆದು ಸ್ವಲ್ಪ ತೆರೆದಾಗ 3 ಜನ ಅಪರಿಚಿತರು ಬಾಗಿಲ ಮುಂದೆ ಇದ್ದು ಏಕಾಏಕಿ ಬಾಗಿಲನ್ನು ನೂಕಿ ಒಳಗೆ ನುಗ್ಗಿ ಬಂದು ಅವರಲ್ಲಿ ಒಬ್ಬನು ನಮಗೆ ಪಿಸ್ತೂಲನ್ನು ತೋರಿಸಿ ಹಿಂದಿ ಭಾಷೆಯಲ್ಲಿ ಕೂಗಾಡಿದರೆ ಶೂಟ್ ಮಾಡುತ್ತೇವೆಂದು ಹೆದರಿಸಿ, ತನಗೆ ಕೆಳಗೆ ಕೂರಿಸಿ ತನ್ನ ಬಳಿ ಪಿಸ್ತೂಲ್ ತೋರಿಸಿಕೊಂಡಿದ್ದು, ಮತ್ತಿಬ್ಬರು ತÀನ್ನ ತಾಯಿಗೆ ಮನೆಯಲ್ಲಿರುವ ಚಿನ್ನದ ಒಡವೆ, ಹಣವನ್ನು ಕೊಡುವಂತೆ ಇಲ್ಲದಿದ್ದರೆ ನಿಮ್ಮನ್ನೆಲ್ಲಾ ಸಾಯಿಸುತ್ತೇವೆಂದು ಹೆದÀರಿಸಿದ್ದರಿಂದ ಅವರು ಸುಮಾರು 15 ಗ್ರಾಂ ಚಿನ್ನಾಭರಣಗಳನ್ನು ನೀಡಿದ್ದು, ನಂತರ ಅಜ್ಜಿಯ ಬಳಿಯಿದ್ದ ಮೊಬೈಲ್‌ಅನ್ನು ಕಿತ್ತುಕೊಳ್ಳಲು ಹೋದರು. ಆಗ ತಾನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ತನಗೆ ಹಲ್ಲೆ ಮಾಡಿದರು. ತಕ್ಷಣ ತನ್ನ ತಾಯಿ ಮತ್ತು ಅಜ್ಜಿಯವರು ಜೋರಾಗಿ ಕೂಗಿಕೊಂಡಾಗ ಆರೋಪಿಗಳು ಓಡಿ ಹೋದರು. ಸದರಿ ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಂದು ನೀಡಿದ ದೂರಿನ ಮೇರೆಗೆ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 


ಸ್ಥಳವನ್ನು ಪರಿಶೀಲಿಸಿದ ಉಪ ಪೊಲೀಸ್ ಆಯುಕ್ತರು, ಉತ್ತರ ವಿಭಾಗ ರವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಯಶವಂತಪುರ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಪಿಎಸ್‌ಐ ಹಾಗೂ ಅಪರಾಧ ಸಿಬ್ಬಂದಿಗಳ ಒಂದು ವಿಶೇಷ ತಂಡವನ್ನು ರಚಿಸಿದ್ದು, ಈ ತಂಡವು ತನಿಖೆಯನ್ನು ಕೈಗೊಂಡಾಗ ಕೃತ್ಯ ನಡೆದ ಸ್ಥಳದಲ್ಲಿ ವಿಳಾಸವಿದ್ದ ಚೀಟಿಯು ದೊರೆತಿದ್ದು, ಅದರಲ್ಲಿನ ಮಾಹಿತಿಯನ್ನಾಧರಿಸಿ 3 ಜನ ಆರೋಪಿಗಳನ್ನು ದಸ್ತಗಿರಿ ಮಾಡಿರುತ್ತಾರೆ. ಸದರಿ ಆರೋಪಿಗಳ ವಶದಿಂದ 1-ಚಿನ್ನದ ಕಿವಿ ಓಲೆ ಮತ್ತು ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ 1-ನಕಲಿ ಪಿಸ್ತೂಲ್ ವಶಪಡಿಸಿಕೊಳ್ಳುವಲ್ಲಿ ಯಶವಂತಪುರ ಪೊಲೀಸರು ಯಶಸ್ವಿಯಾಗಿರುತ್ತಾರೆ. 

ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಮೂಲತಃ ಉತ್ತರ ಪ್ರದೇಶ ರಾಜ್ಯದವನಾಗಿದ್ದು, 15 ದಿನಗಳ ಹಿಂದೆ ಬೆಂಗಳೂರಿಗೆ ಬಂದು ಸ್ನೇಹಿತರಾದ ಆರೋಪಿಗಳ ಜೊತೆಯಲ್ಲಿರುತ್ತಾನೆ. ಆರೋಪಿಗಳು ಮೂಲತಃ ರಾಜಸ್ಥಾನ ರಾಜ್ಯದ ಜಾಲೂರು ಜಿಲ್ಲೆಯವರಾಗಿದ್ದು, ಬೆಂಗಳೂರಿನ ಎಲೆಕ್ಟಾçನಿಕ್ ಸಿಟಿಯಲ್ಲಿರುವ ಹಾರ್ಡ್ವೇರ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ಆರೋಪಿಗಳು ಕೃತ್ಯಕ್ಕೂ ಮುಂಚೆ ಈ ಪ್ರದೇಶಕ್ಕೆ ಬಂದು ಸುತ್ತಾಡಿ ಈ ಪ್ರದೇಶದ ಬಗ್ಗೆ ತಿಳಿದುಕೊಂಡು ಹೋಗಿ, ನಂತರ ಬಂದು ಕೃತ್ಯವೆಸಗಿರುವುದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ. 

ಆರೋಪಿಯು 2019 ನೇ ಸಾಲಿನಲ್ಲಿ ಗುಜರಾತ್ ರಾಜ್ಯದ ವ್ಯಾರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇಲ್ಕಂಡ ರೀತಿಯ ಡಕಾಯಿತಿ ಪ್ರಕರಣದಲ್ಲಿ ದಸ್ತಗಿರಿಯಾಗಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿರುತ್ತಾನೆ. ಈ ಪ್ರಕರಣವು ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ವಿಚಾರಣೆ ಸಮಯದಲ್ಲಿ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ಆರೋಪಿಯ ವಿರುದ್ಧ ಮಾನ್ಯ ನ್ಯಾಯಾಲಯವು ವಾರೆಂಟ್ ಹೊರಡಿಸಿರುತ್ತದೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯೊಬ್ಬ ತಲೆಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ಪ್ರಗತಿಯಲ್ಲಿದೆ. 

ಆರೋಪಿಗಳ ಬಂಧನದಿAದ ಯಶವಂತಪುರ ಪೊಲೀಸ್ ಠಾಣೆಯ 1-ಡಕಾಯಿತಿ ಪ್ರಕರಣ ಪತ್ತೆಯಾಗಿರುತ್ತದೆ. 

ಪ್ರಕರಣದಲ್ಲಿ ಅರುಣ್ ನಾಗೇಗೌಡ, ಎಸಿಪಿ, ಯಶವಂತಪುರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಸುರೇಶ್ ಕೆ., ಪೊಲೀಸ್ ಇನ್ಸ್ಪೆಕ್ಟರ್, ಯಶವಂತಪುರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಪಿಎಸ್‌ಐ ನಾರಾಯಣ, ರಾಜು ಸಿ ಹಾಗೂ ಸಿಬ್ಬಂದಿಯವರಾದ ಮುತ್ತಪ್ಪ ಭಜಂತ್ರಿ ರಾಚಪ್ಪ ಹಕ್ಕಿ, ದತ್ತಾತ್ರೇಯ ಬಡಿಗೆರ ಪಿಸಿ, ಶ್ರೀ ಲೊಕೇಶ ಸನಾದಿ, ಮೊಟ್ಲಾ ನಾಯಕ್ ರವರುಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

Post a Comment

0 Comments

Ad Code

Responsive Advertisement