Ticker

6/recent/ticker-posts

Ad Code

Responsive Advertisement

Flash News: ಸಚಿವ ಆರ್. ಅಶೋಕ್ ವಿರುದ್ಧ ಸಚಿವ ಅಶ್ವತ್ಥ ನಾರಾಯಣ ಪರೋಕ್ಷ ವಾಗ್ದಾಳಿ

ಬೆಂಗಳೂರು, ಮಾ.18: ಸ್ವಪಕ್ಷದವರು ಸಹೋದರರ ರೀತಿ ಇರಬೇಕು, ಪ್ರತಿಷ್ಠೆ ಬಿಟ್ಟು ಒಗ್ಗಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು, ಮಾಗಡಿ ತಹಶೀಲ್ದಾರ್ ವರ್ಗಾವಣೆ ವಿಚಾರಕ್ಕೆ ಸಂಬ0ಧಿಸಿದ0ತೆ ಕಂದಾಯ ಸಚಿವ ಆರ್. ಅಶೋಕ್ ಹಾಗೂ ಜಿಲ್ಲಾ ಉಸ್ತುವಾರಿ, ವೈದ್ಯಕೀಯ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ನಡುವೆ ಕೋಲ್ಡ್ ವಾರ್ ಆರಂಭವಾಗಿದ್ದು, ಪರೋಕ್ಷ ವಾಗ್ದಾಳಿಗೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು.

ತಹಶೀಲ್ದಾರ್ ವರ್ಗಾವಣೆ ವಿಚಾರವಾಗಿ ರಾಮನಗರ, ಮಾಗಡಿ ಪೋಸ್ಟಿಂಗ್ ಬಗ್ಗೆ ಕೋರಿಕೆ ಇತ್ತು. ಅಶೋಕ್ ಅವರು ಈ ಬಗ್ಗೆ ಪರಿಶೀಲನೆ ಮಾಡುತ್ತೇನೆ ಎಂದಿದ್ದಾರೆ, ಅದು ಅವರ ಇಲಾಖೆಗೆ ಬಿಟ್ಟದ್ದು ಎಂದು ಅಶ್ವತ್ಥ ನಾರಾಯಣ ಅಳಲು ತೋಡಿಕೊಂಡರು. ಆಯಾ ಇಲಾಖೆಯಲ್ಲಿ, ನಮ್ಮ ನಮ್ಮ ವ್ಯಾಪ್ತಿಯಲ್ಲಿ ಈ ರೀತಿ ಬದಲಾವಣೆಯಾಗಬೇಕು ಎಂಬುದರ ಬಗ್ಗೆ ನಮಗೆ ಒತ್ತಡಗಳು ಇರುತ್ತವೆ. 

ಹಾಗಾಗಿ ಅದಕ್ಕೆ ಸಂಬ0ಧ ಪಟ್ಟ ಇಲಾಖೆ ಸಚಿವರಿಗೆ ನಾವು ತಿಳಿಸುತ್ತೇವೆ. ಸಾಧ್ಯವಾದರೆ ಅವರು ಸಹಾಯ ಮಾಡಬೇಕು ಇಲ್ಲವಾದಲ್ಲಿ ಇಲ್ಲ ಎನ್ನಬೇಕು, ಈ ವಿಚಾರದಲ್ಲಿ ಒತ್ತಾಯವಿಲ್ಲ ಎಂದರು. 

ಇಬ್ಬರೂ ಒಂದೇ ಪಕ್ಷದ ಸಚಿವರು. ಇಬ್ಬರಲ್ಲಿ ಒಗ್ಗಟ್ಟು ಇರಬೇಕು ಹೊರತು ಪ್ರತಿಷ್ಠೆ ಮುಂದಿಟ್ಟು ಮಾತನಾಡುವುದು ಸರಿಯಲ್ಲ ಎಂದು ಸಚಿವ ಅಶ್ವತ್ಥ ನಾರಾಯಣ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ನಾವಿಬ್ಬರೂ ಒಂದೇ ಪಕ್ಷದ ಸಚಿವರು. ಮನಸ್ತಾಪ ಬಂದರೂ ಕೂಡ ಅದನ್ನು ಅಲ್ಲಿಯೇ ಬಿಟ್ಟು ಸಹೋದರರಂತೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಬದಲಾಗಿ ನಮ್ಮ ನಮ್ಮ ಪ್ರತಿಷ್ಠೆಗಳನ್ನು ಹೆಚ್ಚಿಸಿಕೊಳ್ಳುತ್ತಾ ಹೋದರೆ ಅಭಿವೃದ್ಧಿಗೆ ಪೂರಕವಾಗಲ್ಲ. ಭಿನ್ನಾಭಿಪ್ರಾಯ ಬರುತ್ತೆ ಹೋಗುತ್ತೆ ಆದರೆ ಅದಕ್ಕೆ ಹೆಚ್ಚು ಒತ್ತು ಕೊಡಬೇಕಾಗಿಲ್ಲ. ಒಂದಾಗಿ ಗೌರವದಿಂದ ಕೆಲಸ ಮಾಡಬೇಕು ಎಂದು ಹೇಳಿದರು.

Varthajala, Daily, Bengaluru

Post a Comment

0 Comments

Ad Code

Responsive Advertisement