ಬೆಂಗಳೂರು, ಮಾ.18: ರಾಜ್ಯಾದ್ಯಂತ ಮಾರ್ಚ್ 28 ರಿಂದ ಏಪ್ರಿಲ್ 11ರ ವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಉಚಿತ ಪ್ರಯಾಣದ ಸೌಲಭ್ಯವನ್ನು ನೀಡುತ್ತಿದೆ.
ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳು ಕೆ.ಎಸ್.ಆರ್.ಟಿ.ಸಿ ಹಾಗೂ ಬಿ.ಎಮ್.ಟಿ.ಸಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಪರೀಕ್ಷಾ ಕೇಂದ್ರಗಳಿಗೆ ತಲುಪಲು ವಿದ್ಯಾರ್ಥಿಗಳು ಪರದಾಡಬೇಕಿಲ್ಲ. ಹಾಲ್ ಟಿಕೆಟ್/ಪರೀಕ್ಷ ಚೀಟಿ ತೋರಿಸಿ ಬಸ್ನಲ್ಲಿ ಫ್ರೀಯಾಗಿ/ಉಚಿತವಾಗಿ ಹೋಗಿ ಪರೀಕ್ಷೆ ಬರೆದು ವಾಪಸ್ ಬರಬಹುದು. ಸಾರಿಗೆ ಬಸ್ಸುಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣದ ಬಗ್ಗೆ ರಾಜ್ಯ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ರಾಜ್ಯ ಸಾರಿಗೆ ಸಾಮಾನ್ಯ ಹಾಗೂ ಎಕ್ಸ್ಪ್ರೆಸ್ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ರಾಜ್ಯದಲ್ಲಿ ಹಲವು ಕಡೆ ಮಕ್ಕಳು ದೂರದ ಹಳ್ಳಿಗಳಿಂದ ಪಟ್ಟಣ ಪ್ರದೇಶಕ್ಕೆ ಬಂದು ವಿದ್ಯಾಭ್ಯಾಸ ಮಾಡ್ತಾರೆ. ಪರೀಕ್ಷೆ ಬರೆಯಲು ಈಗಲೂ ಕಿಲೋ ಮೀಟರ್ ಗಟ್ಟಲೆ ನಡೆದುಕೊಂಡು ಬರ್ತಾರೆ. ಇನ್ನು ಪರೀಕ್ಷಾ ಕೇಂದ್ರಗಳನ್ನ ತಲುಪೋದು ಕಷ್ಟವಾಗಿರುತ್ತೆ. ಇಂಥಾ ಹಲವು ವಿದ್ಯಾರ್ಥಿಗಳಿಗೆ ಸಾರಿಗೆ ಇಲಾಖೆಯ ಈ ಆದೇಶದಿಂದ ಅನುಕೂಲವಾಗಲಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಹೋಗಿ ವಾಪಸ್ ಬರಲು ಕೆ.ಎಸ್.ಆರ್.ಟಿ.ಸಿ ಸಾಮಾನ್ಯ ಹಾಗೂ ಎಕ್ಸ್ಪ್ರೆಸ್ ಬಸ್ಗಳಲ್ಲೂ ಉಚಿತವಾಗಿ ಸಂಚರಿಸಬಹುದು.
ಹಾಲ್ ಟಿಕೆಟ್ ತೋರಿಸಿದ್ರೆ ಸಾಕು: ರಾಜ್ಯ ಸಾರಿಗೆ ಬಸ್ನಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಉಚಿತವಾಗಿ ಪ್ರಯಾಣಿಸಲು ಹಾಲ್ ಟಿಕೆಟ್ ತೋರಿಸೋದು ಕಡ್ಡಾಯವಾಗಿದೆ. ಬಸ್ ಕಂಡೆಕ್ಟರ್ಗೆ ಹಾಲ್ ಟಿಕೆಟ್ ತೋರಿಸಿದ್ರೆ ಸಾಕು ಪರೀಕ್ಷಾ ಕೇಂದ್ರವಿರೋ ಸ್ಥಳಕ್ಕೆ ಉಚಿತವಾಗಿ ಪ್ರಯಾಣಿಸಬಹುದು ಎಂದು ಇಲಾಖೆ ತಿಳಿಸಿದೆ.
ಕೋರಿಕೆ ನಿಲುಗಡೆಗೂ ಸಹ ಸೂಚನೆ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಬಸ್ನಲ್ಲಿ ಪರೀಕ್ಷೆಗೆಂದು ಬಸ್ನಲ್ಲಿ ಪ್ರಯಾಣಿಸುವಾಗ ಪರೀಕ್ಷಾ ಕೇಂದ್ರಗಳ ಬಳಿ ಸ್ಟಾಪ್ ಕೇಳಿದ್ರೆ ಕೊಡುವಂತೆ ನಿರ್ವಾಹಕರಿಗೆ ಆದೇಶ ಮಾಡಲಾಗಿದೆ. ಕೆಲವೆಡೆ ಪರೀಕ್ಷಾ ಕೇಂದ್ರಗಳು ಬಸ್ ನಿಲ್ದಾಣಗಳಿಂದ ದೂರವಿರುತ್ತೆ ಹೀಗಾಗಿ ವಿದ್ಯಾರ್ಥಿಗಳು ಕೇಳಿದ ಕಡೆ ಸ್ಟಾಪ್ ಕೊಡುವಂತೆ ಸೂಚಿಸಲಾಗಿದೆ.
ಕಳೆದ ವರ್ಷ ಕೂಡ ಶಿಕ್ಷಣ ಸಚಿವರು ಸಾರಿಗೆ ಇಲಾಖೆಗೆ ಪತ್ರ ಬರೆದಿದ್ದ ಹಿನ್ನೆಲೆ ಪರೀಕ್ಷೆ ಬರೆಯೋ SSಐಅ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ ಸಾರಿಗೆ ಇಲಾಖೆಯೇ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಉಚಿತ ಪ್ರಯಾಣದ ಆದೇಶ ಹೊರಡಿಸಿದ್ದು, ದೂರದೂರುಗಳಿಂದ ಪರೀಕ್ಷೆ ಬರೆಯಲು ಬರೋ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
Varthajala, Daily, Bengaluru

0 Comments