Ticker

6/recent/ticker-posts

Ad Code

Responsive Advertisement

ಶ್ರೀಸತ್ಯಬೋಧತೀರ್ಥ ಗುರುಗಳು

 "ನೈವೇದ್ಯಗವಿಷಂ ರಾಮೇ ವೀಕ್ಷ್ಯತದ್ಭುಕ್ತಿಭಾಗ್ ಗುರುಃ/

  ಯೋದರ್ಶಯದ್ರವಿಂ ರಾತ್ರೌಸತ್ಯಬೋಧೋಸ್ತು

 ಮೇ ಮುದೇ//



                *************

ಶ್ರೀಸತ್ಯಬೋಧತೀರ್ಥ ಶ್ರೀಪಾದಂಗಳವರು ಶ್ರೀಮದುತ್ತರಾಧಿ ಮಠದ ಸಂಸ್ಥಾನದ ಪರಂಪರೆಯಲ್ಲಿ ಒಟ್ಟು 39 ವರ್ಷಗಳ ಕಾಲ ವೇದಾಂತ ಸಾಮ್ರಾಜ್ಯವನ್ನಾಳಿ ಶ್ರೀದಿಗ್ವಿಜಯಮೂಲರಾಮದೇವರ ಪೂಜೆಯನ್ನು ನೆರವೇರಿಸಿದ ಯತಿಗಳು.

ಶ್ರೀಸತ್ಯಪ್ರಿಯತೀರ್ಥರಿಂದ ಆಶ್ರಮ ಪಡೆದವರು.

ರಾರಚೂರಿನಲ್ಲಿ 1710ನೇ ಇಸವಿಯಲ್ಲಿ ಶ್ರೀಅಹೋಬಲ ನರಸಿಂಹದೇವರ ಅನುಗ್ರಹದಿಂದ ಹರಿಯಾಚಾರ್ಯ ಮತ್ತು ಅರಳಮ್ಮ ದಂಪತಿಗಳ ಮಗನಾಗಿ ರಾಮಾಚಾರ್ಯ ಎಂಬ ಹೆಸರಿನಿಂದ 

ಹುಟ್ಟಿದವರು.ತಮ್ಮ ಎಂಟನೇ ವಯಸ್ಸಿನಲ್ಲಿ ಉಪ

ನಯನ ಸಂಸ್ಕಾರವನ್ನು ಹೊಂದಿ ಉತ್ತರಾಧಿ ಮಠದ ಶ್ರೀಸತ್ಯಪ್ರಿಯತೀರ್ಥ ಗುರುಗಳಲ್ಲಿ ಶಾಸ್ತ್ರಾಧ್ಯಯನ ಮಾಡಿ ಗುರುಗಳ ಅನುಗ್ರಹಕ್ಕೆ ಪಾತ್ರರಾದರು.ವಿವಾಹಯೋಗ್ಯ ವಯಸ್ಕಾರಾದ

ಕೂಡಲೇ ಸವಣೂರಿನ  ಗಿರಿಜಾ ಎಂಬ ಸಾಧ್ವಿ

ಕನ್ಯೆಯೊಡನೆವಿವಾಹವಾಗುತ್ತದೆ.ಶ್ರೀರಾಮದೇವರ ಸೂಚನೆಯಂತೆಶ್ರೀಸತ್ಯಪ್ರಿಯತೀರ್ಥರುರಾಮಾ

ಚಾರ್ಯರಿಗೆಆಶ್ರಮಕೊಟ್ಟು"ಶ್ರೀಸತ್ಯಬೋಧ

ತೀರ್ಥ"ರೆಂದು ನಾಮಕರಣ ಮಾಡುತ್ತಾರೆ.ತಮ್ಮ ಗುರುಗಳಾದ ಶ್ರೀಸತ್ಯಪ್ರಿಯತೀರ್ಥರು ಮಾನಮಧುರೆಯಲ್ಲಿ ಬೃಂದಾವನಸ್ಥರಾಗುತ್ತಾರೆ.

ಶ್ರೀಸತ್ಯಬೋಧತೀರ್ಥರ ಮಹಿಮೆಗಳು ಅಪಾರವಾಗಿವೆ ,ಮತ್ತು ಅಗಾಧವಾಗಿವೆ.

ಮಧ್ಯರಾತ್ರಿಯಲ್ಲಿ ಸೂರ್ಯನನ್ನು ತೋರಿಸಿದ

ಮಹಾನುಭಾವರು.

ಶ್ರೀಸತ್ಯಬೋಧತೀರ್ಥರು ತಮ್ಮ ಶಿಷ್ಯರಿಗೆ ಪಾಠ

ಹೇಳುತ್ತಾ ಇರುವಾಗ ರಾತ್ರಿಯಾದದ್ದೂ ತಿಳಿಯುವುದಿಲ್ಲ.ಮತ್ತೆ ಶಿಷ್ಯರುಗಳು ಸಾಯಂಕಾಲದ ಸಂಧ್ಯಾವಂದನೆ ಮಾಡಲು ರಾತ್ರಿ

ಯಾಗಿ ಸಂಧ್ಯಾವಂದನೆಯನ್ನು ಸರಿಯಾಗಿ ನಿಯಮದ ಪ್ರಕಾರ ಮಾಡಿದಂತಾಗುವುದಿಲ್ಲ ಎಂದುತಮ್ಮತಮ್ಮಲ್ಲೇ ಗುಸುಗುಸು ಮಾತನಾಡಲು

ಪ್ರಾರಂಭಿಸುತ್ತಾರೆ.ಇದು ಗುರುಗಳ ಕಿವಿಗೂ ಬೀಳುತ್ತದೆ.ಆಗ ಗುರುಗಳು ಶಿಷ್ಯರನ್ನು ಕರೆದು ಆಕಾಶ ನೋಡಿ ಎಂದು ಹೇಳುತ್ತಾರೆ.ಮೊದಲು ಶಿಷ್ಯರಿಗೆ ಚಂದ್ರನು ಕಾಣಿಸುತ್ತಾನೆ.ಮತ್ತೆ ನೋಡಿದಾಗ ಆಕಾಶದಲ್ಲಿ ಪ್ರಕಾಶಮಾನವಾದ ಸೂರ್ಯನನ್ನು ಕಾಣುತ್ತಾರೆ.

ಶ್ರೀಗಳವರ ಕೀರ್ತಿ ದಿನೇದಿನೇ ಬೆಳೆಯುತ್ತಾ ಹೋಗುತ್ತದೆ.ಇದನ್ನು ಸಹಿಸದ ಕಿಡಿಗೇಡಿಗಳು

ರಾಮದೇವರಿಗೆ ನೈವೇದ್ಯ ಮಾಡುವ ಪಾಯಸದಲ್ಲಿ ವಿಷವನ್ನು ಬೆರೆಸಿಬಿಡುತ್ತಾರೆ.ಬೇರೆ ಎಲ್ಲಾ ಭಕ್ಷಗಳ ಜೊತೆ ಪಾಯಸವನ್ನೂ ರಾಮದೇವರಿಗೆ ನೈವೇದ್ಯವನ್ನು ಸಮರ್ಪಿಸುತ್ತಾರೆ.ರಾಮದೇವರ ಕಂಠ ಕಪ್ಪಾಗುತ್ತದೆ.ಇದು ಶ್ರೀಗಳವರಿಗೆ ತಿಳಿಯುತ್ತದೆ.ಶ್ರೀಗಳವರು ರಾಮದೇವರಿಗೆ ನೈವೇದ್ಯ ಸಮರ್ಪಿಸಿ ಮಂಗಳಾರತಿಯಾದ ನಂತರ

ಅವರು ದೇವರ ನೈವೇದ್ಯದ ಪ್ರಸಾದವನ್ನು ಸ್ವೀಕರಿಸುತ್ತಾರೆ.ಶಿಷ್ಯರುಗಳು ಶ್ರೀಗಳವರಿಗೆ ಪಾಯಸವನ್ನು ಸ್ವೀಕಾರ ಮಾಡಬಾರದಾಗಿ ಕೇಳಿಕೊಳ್ಳುತ್ತಾರೆ.ಶ್ರೀಗಳವರು ರಾಮದೇವರಿಗೆ

ಏನನ್ನು ಅರ್ಪಿಸಿದ್ದೇವೆಯೋ ಅದನ್ನು ನಾವೂ ಸ್ವೀಕರಿಸುತ್ತೇವೆ.ರಾಮದೇವರೇ ಎಲ್ಲರನ್ನು ಕಾಪಾಡುವವನು.ಪಾಯಸ ಸ್ವೀಕಾರಮಾಡಿದ ಗುರುಗಳಿಗೆ ಶ್ರೀರಾಮದೇವರ ಅನುಗ್ರಹದಿಂದ ಯಾವತೊಂದರೆಯೂ ಆಗುವುದಿಲ್ಲ.ಅವರು ತಮ್ಮ ನಿತ್ಯಕರ್ಮಾನುಷ್ಠಾನದಲ್ಲಿ ಎಂದಿನಂತೆ ತೊಡಗಿರುತ್ತಾರೆ.

ಶ್ರೀಗಳವರು ರಾಮದೇವರಲ್ಲಿ  ತಮ್ಮಿಂದಾದ ತಪ್ಪನ್ನು ಮನ್ನಿಸುವಂತೆ ಪ್ರಾರ್ಥಿಸುತ್ತಾರೆ.

ರಾಯರ ಮಠದ ಪರಂಪರೆಯಲ್ಲಿ ಪೀಠಾಧಿಪತಿಗಳಾಗಿದ್ದ ಹೊಸರಿತ್ತಿ ಕ್ಷೇತ್ರದಲ್ಲಿ ವಿರಾಜಮಾನರಾಗಿರುವ ಶ್ರೀಧೀರೇಂದ್ರತೀರ್ಥಗುರುಗಳು ಇವರ ಸಮಕಾಲೀನರು.ಇಬ್ಬರುಯತಿಗಳ ಸಂಬಂಧ ಬಹಳ ಸೌಹಾರ್ದಯುತವಾಗಿತ್ತು.

ಹರಿದಾಸರುಗಳ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದವರು.ಶ್ರೀವಿಜಯದಾಸರು,ಶ್ರೀಗೋಪಾಲದಾಸರು,ಶ್ರೀ ಜಗನ್ನಾಥದಾಸರು ಇವರ ಸಮಕಾಲೀನರು.

ಒಮ್ಮೆ ಶ್ರೀಸತ್ಯಬೋಧತೀರ್ಥರು ಅಪರೋಕ್ಷ ಜ್ಞಾನವನ್ನು ಪರೀಕ್ಷಿಸಲು ಗೋಪಾಲದಾಸರು ಮತ್ತು ಅವರ ಮೂರುಜನ ಸಹೋದರರಿಗೆ ಬೇರೆಬೇರೆ ಕೊಠಡಿಗಳಲ್ಲಿದ್ದುಕೊಂಡು ಒಂದು ಪದವನ್ನು ಪೂರ್ತಿ ಮಾಡಿರೆಂದು ಹೇಳುತ್ತಾರೆ.ಇವರೆಲ್ಲರು

"ಮಾರಮದಘನ್ನಸಮೀರಮಧ್ವಮತೋದ್ಧಾರ"

ಎಂಬ ಪದವನ್ನು ರಚಿಸುತ್ತಾರೆ.ಮೊದಲ ಮತ್ತು ಎರಡನೆಯ ನುಡಿಗಳನ್ನು ಕ್ರಮವಾಗಿ ಸೀನಪ್ಪದಾಸರೂ,ದಾಸಪ್ಪದಾಸರೂ ಬರೆದರು.ಗೋಪಾಲದಾಸರು ಪಲ್ಲವಿ ಮತ್ತು ಮೂರನೆಯ ನುಡಿಯನ್ನು ರಚಿಸುತ್ತಾರೆ.ಶ್ರೀಗಳವರಿಗೆ ಗೋಪಾಲದಾಸರು ಮತ್ತು ಸಹೋದರರಿಂದ ರಚಿತವಾದ ಪದವನ್ನು

ಕೇಳಿ ಬಹಳ ಸಂತೋಷಗೊಳ್ಳುತ್ತಾರೆ.ಅವರು ಮೂರು ಜನರಿಗೂ ಶ್ರೀಗಳವರು ಬಹುಮಾನ ಕೊಟ್ಟು ಆಶೀರ್ವದಿಸುತ್ತಾರೆ.

ಶ್ರೀಸತ್ಯಬೋಧತೀರ್ಥರಿಗೆ ಮುಸ್ಲಿಂ ಜನಾಂಗದಲ್ಲೂ ಆರಾಧಕರಿದ್ದರು.ಶ್ರೀರಂಗಪಟ್ಟಣದ ಟಿಪ್ಪುಸುಲ್ತಾನ್,ಸವಣೂರಿನ ನವಾಬರು ಇವರ ಬಗ್ಗೆಗೌರವ ಹೊಂದಿದವರಾಗಿದ್ದರು.

ಇವರು ಶ್ರೀಸತ್ಯಸಂಧತೀರ್ಥರಿಗೆಹತ್ತುವರ್ಷಗಳಷ್ಟು ಅಧಿಕ ಆಯಸ್ಸನ್ನು ಮೂಲರಾಮದೇವರನ್ನು ಸ್ತೋತ್ರಮಾಡಿ ಹೆಚ್ಚಿಸುತ್ತಾರೆ. ಶ್ರೀಸತ್ಯಸಂಧತೀರ್ಥರು ಇವರ ಆಶ್ರಮ ಶಿಷ್ಯರು.

ಶ್ರೀಸತ್ಯಬೋಧತೀರ್ಥರು ಫಾಲ್ಗುಣ ಬಹುಳ ಪ್ರತಪದದಂದು ಸವಣೂರಿನಲ್ಲಿ ಬೃಂದಾವನಸ್ಥರಾಗುತ್ತಾರೆ.ಶ್ರೀಗಳವರು ಬೃಂದಾವನಸ್ಥರಾದ ದಿನವನ್ನು ಆರಾಧನಾ ದಿನವನ್ನಾಗಿ ಆಚರಿಸುತ್ತಾರೆ.ನಾವೂ ಶ್ರೀಗಳವರ ಆರಾಧನೆಯ ಪರ್ವದಿನದಂದು ಭಕ್ತಿಯ ನಮನಗಳನ್ನು ಸಲ್ಲಿಸಿ ಅವರ ಅನುಗ್ರಹಕ್ಕೆ ಪಾತ್ರರಾಗೋಣ.

*****************************************

  ಜಯಭೀಮ್ ಜೊಯ್ಸ್.ಶಿವಮೊಗ್ಗ

******************************************

Post a Comment

0 Comments

Ad Code

Responsive Advertisement