ಮಧುಗಿರಿ : ಪಟ್ಟಣದಲ್ಲಿರುವ ಡಿಡಿಪಿಐ ಕಚೇರಿಯಲ್ಲಿ ಶುಕ್ರವಾರದಂದು ಶೈಕ್ಷಣಿಕ ಜಿಲ್ಲಾ ಮಟ್ಟದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪೋನ್ ಇನ್ ಕಾರ್ಯಕ್ರಮದಲ್ಲಿ 607 ವಿದ್ಯಾರ್ಥಿಗಳು ಪಾಲ್ಗೊಂಡು ಪ್ರಶ್ರೋತ್ತರದಲ್ಲಿ ಯಶಸ್ವಿಯಾದರು.
ಈ ಕಾರ್ಯಕ್ರಮವನ್ನು ಡಿಡಿಪಿಐ ಎಂ.ರೇವಣ್ಣ ಸಿದ್ದಪ್ಪ ಮತ್ತು ತಂಡ ನೇತೃತ್ವ ವಹಿಸಿ ಕನ್ನಡ, ಇಂಗ್ಲೀಷ್, ಹಿಂದಿ, ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಭೋದನೆ ಮಾಡುವಂತಹ ಅನುಭವಿ, ನುರಿತ ಹಾಗೂ ಸಮರ್ಥ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಕ್ರಮವನ್ನು ಆಯೋಜಿಸಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಪ್ರೀತಿ ಮತ್ತು ಸೌಹಾರ್ದಯುತವಾಗಿ ಉತ್ತರಿಸಲಾಯಿತು.
ಪ್ರಥಮ ಭಾಷೆ ಕನ್ನಡ – 112, ದ್ವಿತೀಯ ಭಾಷೆ ಇಂಗ್ಲೀಷ್ – 105, ತೃತೀಯ ಭಾಷೆ - ಹಿಂದಿ - 42, ಗಣಿತ – 111, ವಿಜ್ಞಾನ – 109, ಸಮಾಜ ವಿಜ್ಞಾನ – 128, ಮತ್ತು ಶಿಕ್ಷಣಾಧಿಕಾರಿಗಳಿಂದ -11 ಪ್ರಶ್ನೆಗಳನ್ನು ಕೇಳಲಾಯಿತು.
ಶಿರಾ ತಾಲ್ಲೂಕಿನ ಮಾದೇನಹಳ್ಳಿ ವಿದ್ಯಾರ್ಥಿನಿ ಸ್ನೇಹ ಮಾತನಾಡಿ ವಿಷಯವಾರು ಪರೀಕ್ಷೆಯ ಸಮಯ 3 ಗಂಟೆ ಇರುತ್ತದೆ. ಅಂಕಗಳು 80 ಮಾತ್ರ ಅದೇ ಕನ್ನಡ ಭಾಷೆ ಪರೀಕ್ಷೆಗೆ 3 ಗಂಟೆ ಅವದಿ ಇರುತ್ತದೆ. ಅಂಕಗಳು 100 ಇರುತ್ತದೆ. ನಮಗೆ ಸಮಯ ಪ್ರಬಂಧ ಮತ್ತು ಪತ್ರ ಲೇಖನ ಬರೆಯಲು ಸಾಕಾಗುತ್ತಿಲ್ಲ. ಈ ತಾರತಮ್ಯವನ್ನು ಹೋಗಲಾಡಿಸುವಂತೆ ಕೇಳಿಕೊಂಡರು.
ಬಹುತೇಕ ಪ್ರಶ್ನೆಗಳು : 3-4 ಅಂಕಗಳ ಪ್ರಶ್ನೆಗಳಿಗೆ ಉತ್ತರಿಸುವ ಬಗ್ಗೆ, ಕೋವಿಡ್ ಹಿನ್ನೆಲೆಯಲ್ಲಿ ಪ್ರಶ್ನೆ ಪತ್ರಿಕೆಯ ಕಠಿಣತೆಯ ಮಟ್ಟ ಕಡಿಮೆ ಇರುತ್ತದೆಯೇ, ಅತಿ ಹೆಚ್ಚು ಅಂಕ ಗಳಿಸುವ ಬಗ್ಗೆ, ಅನ್ವಯದ ಪ್ರಶ್ನೆಗಳನ್ನು ಯಾವ ಘಟಕದಿಂದ ಕೇಳುವರು, ಸೂಕ್ತ ಪ್ರಮೇಯಗಳನ್ನು ಜ್ಞಾಪಕದಲ್ಲಿ ಹೇಗೆ ಇಟ್ಟುಕೊಳ್ಳುವುದು, ಪ್ರಶ್ನೆ ಪತ್ರಿಕೆಯ ವಿನ್ಯಾಸ, ಮಾದರಿ ಪ್ರಶ್ನೆ ಪತ್ರಿಕೆಗಳು ಹಾಗೂ ಪೂರ್ವ ಸಿದ್ದತಾ ಪ್ರಶ್ನೆ ಪತ್ರಿಕೆಯಲ್ಲಿ ಅನುಸರಿಸಿರುವ ನೀಲ ನಕಾಶೆ ಯಂತೆಯೇ ವಾರ್ಷಿಕ ಪ್ರಶ್ನೆ ಪತ್ರಿಕೆ ಇರುತ್ತದೆಯೇ, ವಿಜ್ಞಾನ ವಿಷಯದಲ್ಲಿ ಅನುವಂಶೀಯತೆ ಹಾಗೂ ಜೀವ ವಿಕಾಸ ಬೆಳಕು ಪ್ರತಿಫಲನ ಹಾಗೂ ವಕ್ರೀ ಭವನ, ಲೋಹಗಳು ಮತ್ತು ಅಲೋಹಗಳು ಘಟಕಗಳಿಂದ ಹೆಚ್ಚು ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಕೇಳಿದರು.
ಗಣಿತ ವಿಷಯದಲ್ಲಿ ತ್ರಿಕೋನ ಮಿತಿಯ ಅನ್ವಯಗಳು ಮತ್ತು ವರ್ಗ ಸಮೀಕರಣದ ಅನ್ವಯಿಕ ಸಮಸ್ಯೆಗಳು ಮೇಲ್ವೈಲಕ್ಷಣಗಳು ಹಾಗೂ ಘನ ಫಲಗಳು ಕುರಿತಾದ ಪ್ರಶ್ನೆಗಳು ಕೇಳಲಾಯಿತು.
ಡಿಡಿಪಿಐ ಎಂ ರೇವಣ್ಣ ಸಿದ್ದಪ್ಪನವರು 2019-20 ನೇ ಸಾಲಿನಲ್ಲಿ ಇಂತಹ ಪ್ರಯತ್ನ ಮಾಡಿದ್ದರ ಫಲ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಎಸ್ ಎಸ್‍ಎಲ್‍ಸಿಯ ಫಲಿತಾಂಶ ರಾಜ್ಯದಲ್ಲಿ 3 ನೇ ಸ್ಥಾನ ಪಡೆದು ಸಾದನೆ ಮಾಡಿತ್ತು ಕಳೆದ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ ಎಲ್ಲರನ್ನು ಉತ್ತೀರ್ಣ ಮಾಡಲಾಯಿತು.
ಈ ಪೋನ್ ಇನ್ ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ನೋಡಲ್ ಅಧಿಕಾರಿಯಾಗಿರುವ ಎಸ್ ಸಿದ್ದೇಶರ್, ವಿಷಯ ಪರಿವೀಕ್ಷಕರುಗಳಾದ ಕೆ.ಎಸ್.ಮೋಹನ್ ಕುಮಾರ್, ಹೆಚ್.ಚಿತ್ತಯ್ಯ, ಗುರುಪ್ರಸಾದ್, ಚನ್ನಿಗರಾಮಯ್ಯ, ನಾಯಕ್ ಕಮಲಾ ನಾರಾಯಣ್, ಗೋವಿಂದರಾಜು, ಸಹ ಶಿಕ್ಷಕರುಗಳಾದ ಸಚ್ಚಿದಾನಂದ, ಆ.ಮು.ತಿಪ್ಪೇಸ್ವಾಮಿ, ಜಿ.ಕೆ.ರಾಜಣ್ಣ, ರಾಘವೇಂದ್ರ, ನರಸರೆಡ್ಡಿ, ಇ ನಾಗೇಂದ್ರ, ರೇಣುಕಯ್ಯ, ಯಶೋಧ, ತ್ರಿವೇಣಿ, ಕೆ.ಆರ್.ರಾಮಚಂದ್ರಪ್ಪ, ಮಂಜುನಾಥ ಹರಾವ್, ಸಲ್ಮನಾಜ್, ಡಿ.ಜೆ.ಲೋಕೇಶ್, ಕೆ.ಆರ್.ಗೋವಿಂದರಾಜು, ದಿವ್ಯ, ರಮೇಶ್, ರವಿ, ಸತ್ಯ ನಾರಾಯಣ ರೆಡ್ಡಿ, ಹಾಗೂ ಎಲ್ ಕೃಷ್ಣಪ್ಪ ಪಾಲ್ಗೊಂಡಿದ್ದರು.
ವರದಿ:ನಾಗೇಶ್ ಜೀವಾ ಮಧುಗಿರಿ
0 Comments