Ticker

6/recent/ticker-posts

Ad Code

Responsive Advertisement

ಆರ್ಥಿಕ ಸಮಸ್ಯೆ ನಿವಾರಿಸುವಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ದೊಡ್ಡದು

 ಮಧುಗಿರಿ - ಸಹಕಾರ ರಂಗವು ದೇಶದ ಆರ್ಥಿಕತೆಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದ್ದು ಜನಸಾಮಾನ್ಯರ ಆರ್ಥಿಕ ಸಮಸ್ಯೆ ನಿವಾರಿಸುವಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ದೊಡ್ಡದು ಎಂದು ಶ್ರೀ ವಾಸವಿ ವಿವಿದೋದ್ದೇಶ ಸಹಕಾರ ಸಂಘ ನಿಯಮಿತ ಅಧ್ಯಕ್ಷ ಎ.ರಮೇಶ್ ಆಶಯ ವ್ಯಕ್ತಪಡಿಸಿದರು.

ಪಟ್ಟಣದ  ಶ್ರೀ ವಾಸವಿ ವಿವಿದೋದ್ದೇಶ ಸಹಕಾರ ಸಂಘ ನಿಯಮಿತ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಸಂಸ್ಥೆಗಳ ಬೆಳವಣಿಗೆಯಲ್ಲಿ ಗ್ರಾಹಕರ ಸಹಭಾಗಿತ್ವ ಮುಖ್ಯ. ಇಂದಿನ ಕಾಲದಲ್ಲಿ ಅನೇಕ ಸಂಘ-ಸಂಸ್ಥೆಗಳು ಸ್ವಹಿತಾಸಕ್ತಿಗಳಿಗೆ ಬಳಕೆಯಾಗುತ್ತಿವೆ. ವಾಸವಿ ವಿವಿದೋದ್ದೇಶ ಸಹಕಾರ ಸಂಘ ನಿಯಮಿತ ಕಳೆದ ಎಂಟು ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ. ಕಾರಣ ಇಲ್ಲಿಯ ಆಡಳಿತ ಮಂಡಳಿಯ ನಿಸ್ವಾರ್ಥ ಸೇವೆ, ಸಿಬ್ಬಂದಿಯ ಪರಿಶ್ರಮ, ಗ್ರಾಹಕರ ಪ್ರಾಮಾಣಿಕತೆಯು ಸಂಘವು ಪ್ರಗತಿ ಹೊಂದಲು ಸಾಧ್ಯವಾಗಿದೆ ಎಂದರು. ಪ್ರತಿ ವರ್ಷ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಧನ ಸಹಾಯದೊಂದಿಗೆ ಗೌರವಿಸುವ ಸಂಘದ ಕಾರ್ಯವು ಶ್ಲಾಘನೀಯವಾದುದು. ಜೊತೆಗೆ ಈ ಕಾರ್ಯವು ವಿದ್ಯಾರ್ಥಿಗಳಿಗೆ ಸ್ಫೂರ್ತಿಯನ್ನು ತುಂಬುತ್ತಿದೆ. ವಿದ್ಯಾರ್ಥಿಗಳು ಉದಾತ್ತ ಚಿಂತನೆ, ಉತ್ತಮ ಆಲೋಚನೆ ಮತ್ತು ಶಿಸ್ತುಬದ್ಧ ಜೀವನಶೈಲಿಗಳಿಂದ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು.

ಸಂಘದ ಉಪಾಧ್ಯಕ್ಷ ಕೆ.ಎಂ.ವಿಕ್ರಂ ಮಾತನಾಡಿ, ವಾಸವಿ ವಿವಿದೋದ್ದೇಶ ಸಹಕಾರ ಸಂಘ ನಿಯಮಿತ ಆರಂಭದಿಂದಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾ, 'ಎ' ವರ್ಗವನ್ನು ಪಡೆದು ಪ್ರತಿಯೊಂದು ವ್ಯವಹಾರದ ಮಾಹಿತಿಯು ಗ್ರಾಹಕರಿಗೆ ರವಾನಿಸುವುದರ ಮೂಲಕ ಪಾರದರ್ಶಕತೆಗೆ ಹೆಚ್ಚು ಗಮನಹರಿಸುತ್ತಿದೆ. ಕರೋನ ಸಂಕಷ್ಟದ ಕಾಲದಲ್ಲಿಯೂ ಸಂಘವು ಲಾಭದತ್ತ ಸಾಗುತ್ತಿರುವುದಕ್ಕೆ ಸಂಘದ ಸದಸ್ಯರು ಕಾರಣವೆಂದರು. ವಿದ್ಯಾರ್ಥಿಗಳಲ್ಲಿ ದೌರ್ಬಲ್ಯ ಮತ್ತು ಶಕ್ತಿ ಎರಡು ಇರುತ್ತವೆ, ತನ್ನ ದೌರ್ಬಲ್ಯವನ್ನು ಶಕ್ತಿಯನ್ನಾಗಿ ಪರಿವರ್ತಿಸಿಕೊಂಡು ವಿದ್ಯಾರ್ಥಿಗಳು ಸಾಧಕರಾಗಿ ಹೊರಹೊಮ್ಮಬೇಕು ಎಂದರು.

ಈ ಸಂದರ್ಭದಲ್ಲಿ ಹಿರಿಯ ನಿರ್ದೇಶಕರಾದ ಎಂ.ಕೆ.ನಾಗರಾಜ್. ಟಿ.ಎನ್.ಪಾರ್ಥಸಾರಥಿ. ಅಬಾಕಸ್ ಅಶ್ವತ್ ನಾರಾಯಣ್. ಎಸ್.ವೆಂಕಟಾಚಲಪತಿ. ಅನುμÁ ಬದ್ರಿನಾಥ್. ರೂಪಾ ರವಿ, ವಾಸವಿ ಕೃಷ್ಣ.ಕೆ ಎನ್.ಮಂಜುನಾಥ್. ಕುಮಾರಿ ಪಲ್ಲವಿ. ರಾಧಿಕಾ ಗೋಪಾಲಕೃಷ್ಣ. ಸಿಬ್ಬಂದಿಗಳಾದ ರಂಗನಾಥ್, ಸದಾಶಿವ, ಮಾನಸ ಹಾಗೂ ಮುಂತಾದವರು ಇದ್ದರು.

ವರದಿ:ನಾಗೇಶ್ ಜೀವಾ ಮಧುಗಿರಿ

Post a Comment

0 Comments

Ad Code

Responsive Advertisement