Ticker

6/recent/ticker-posts

Ad Code

Responsive Advertisement

ಗೌರವಾನ್ವಿತ ರಾಜ್ಯಪಾಲರನ್ನು ಭೇಟಿ ಮಾಡಿದ ಎನ್ ಡಿಸಿ ನಿಯೋಗ

ಬೆಂಗಳೂರು ಮಾರ್ಚ್ 23.03.2022: ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರನ್ನು 17 ಹಿರಿಯ ಅಧಿಕಾರಿಗಳನ್ನೊಳಗೊಂಡ ರಾಷ್ಟ್ರೀಯ ರಕ್ಷಣಾ ಕಾಲೇಜು(ಎನ್ ಡಿಸಿ) ನಿಯೋಗವು ಬುಧವಾರ ರಾಜಭವನದಲ್ಲಿ ಭೇಟಿ ಮಾಡಿತು.


ಭಾರತ ಮತ್ತು ಆರ್ಥಿಕ ಭದ್ರತಾ ಅಧ್ಯಯನ ಸಂಬಂಧ ಮಾರ್ಚ್ 21 ರಿಂದ 26ರ ವರೆಗೆ ಕರ್ನಾಟಕ  ರಾಜ್ಯ ಪ್ರವಾಸ ಕೈಗೊಂಡಿದ್ದು, ಇಂದು  ಎಸ್ ಡಿಎಸ್, ಜಂಟಿ ಕಾರ್ಯದರ್ಶಿ ಬೀರೇಂದರ್ ಸಿಂಗ್ ಯಾದವ್ ನೇತೃತ್ವದ 17 ಹಿರಿಯ ಅಧಿಕಾರಿಗಳ ತಂಡ ನಿಯೋಗ ಇಂದು ರಾಜಭವನದಲ್ಲಿ ಗೌರವಾನ್ವಿತ ರಾಜ್ಯಪಾಲರನ್ನು ಭೇಟಿ ಮಾಡಿ, ಚರ್ಚಿಸಿದರು.

ಕರ್ನಾಟಕ ರಾಜ್ಯವು ನೈಸರ್ಗಿಕವಾಗಿ ಸಮೃದ್ಧವಾಗಿದ್ದು, ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಮುಂಚೂಣಿಯಲ್ಲಿದೆ. ಶಿಕ್ಷಣ, ತಂತ್ರಜ್ಞಾನ, ವಿಜ್ಞಾನ, ಆಡಳಿತ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ತನ್ನದೇ ಆದ ಛಾಪನ್ನು ಮೂಡಿಸಿದ್ದು, ಇಡೀ ಭಾರತದಲ್ಲೇ ಹೆಸರುವಾಸಿಯಾಗಿದೆ. ಇಲ್ಲಿನ ಜನತೆ ಹೃದಯ ಶ್ರೀಮಂತಿಕೆ ಬೆಳೆಸಿಕೊಂಡಿದ್ದಾರೆ. ಯಾವುದೇ ರಾಜ್ಯದ ಅಥವಾ ದೇಶದ ನಾಗರಿಕರೊಂದಿಗೆ ಉತ್ತಮವಾಗಿ ಸ್ಪಂದಿಸುತ್ತಾ, ಅತಿಥಿ ಸತ್ಕಾರ ಮಾಡುತ್ತಾರೆ. ಅಲ್ಲದೇ, ಸಾಮಾಜಿಕವಾಗಿ, ಆರ್ಥಿಕವಾಗಿ ಈ ರಾಜ್ಯವು ಅಭಿವೃದ್ಧಿ ಪಥದತ್ತಾ ಸಾಗುತ್ತಿದೆ. ಜಗತ್ತಿನ ಹಲವು ದೇಶಗಳಲ್ಲಿ ಡಿಜಿಟಲ್, ಐಟಿ, ಮಾಹಿತಿ-ತಂತ್ರಜ್ಞಾನದ ಬೆಳವಣಿಗೆಯಲ್ಲಿ ಕರ್ನಾಟಕದ ಯುವ ಸಮುದಾಯದ ಕೊಡುಗೆ ದೊಡ್ಡದಾಗಿದೆ ಎಂದು ಮಾಹಿತಿ ನೀಡಿದರು.

ಭಾರತ ಯುವ ದೇಶ. ದೇಶವನ್ನು ಸಫಲವಾಗಿ ಕಟ್ಟಲು ಯುವಪೀಳಿಗೆ ಮುಂದಾಗುವಂತೆ ಪ್ರೇರಣೆ ನೀಡಬೇಕು. ಈಗಾಗಲೇ ಯುವಪೀಳಿಗೆ ಹಲವಾರು ಕ್ಷೇತ್ರಗಳಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ದೇಶಕ್ಕಾಗಿ ಹೋರಾಡುವುದು ನಿಜವಾದ ಸಾರ್ಥಕತೆ. ಯುವಪೀಳಿಗೆಯಲ್ಲಿ ರಾಷ್ಟ್ರಪ್ರೇಮ ಬೆಳೆಸಿ, ಸೇನೆಗೆ ಸೇರ್ಪಡೆಯಾಗಲು ಉತ್ತೇಜಿಸಬೇಕು. ದೇಶದ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಅರಿವು ಮೂಡಿಸಬೇಕು ಎಂದು ಹೇಳಿದರು.


ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕಾನೂನು ಮತ್ತು ಸುವ್ಯವಸ್ಥೆ, ಮಹಿಳಾ ಆರೋಗ್ಯದ ಸಬಲೀಕರಣದಂತಹ ಸಾಮಾಜಿಕ ಅಭಿವೃದ್ಧಿಗಾಗಿ ವಿವಿಧ ರಾಜ್ಯ ಪ್ರಾಯೋಜಿತ ಕಾರ್ಯಕ್ರಮಗಳು ಸೇರಿದಂತೆ ಕೇಂದ್ರ ಸರ್ಕಾರ ಯೋಜನೆಗಳ ಜಾರಿ ಕುರಿತು ಹಾಗೂ ಕೃಷಿ/ ಶಿಕ್ಷಣ/ ಇಂಧನ ಕ್ಷೇತ್ರ ಮತ್ತು ಸರ್ಕಾರೇತರ ಸಂಸ್ಥೆಗಳ (NGO) ಕಾರ್ಯಚಟುವಟಿಕೆ ಇತ್ಯಾದಿಗಳ ಬಗ್ಗೆ ಅಧ್ಯಯನ ನಡೆಸಲಾಗಿದೆ ಎಂದು ಎಸ್ ಡಿಎಸ್, ಜಂಟಿ ಕಾರ್ಯದರ್ಶಿ ಬೀರೇಂದರ್ ಸಿಂಗ್ ಯಾದವ್ ಮಾಹಿತಿ ನೀಡಿದರು.

Post a Comment

0 Comments

Ad Code

Responsive Advertisement