ಮಧುಗಿರಿ: ಮಾ.29 ರಂದು ಬೃಹತ್ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತುಮುಲ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ತಿಳಿಸಿದರು.
ಪಟ್ಟಣದ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ ತುಮಕೂರು ಹಾಲು ಒಕ್ಕೂಟ ತುಮುಲ್, ರೈತ ಹಾಗೂ ನೌಕರರ ಕಲ್ಯಾಣ ಟ್ರಸ್ಟ್, ಮತ್ತು ಕೊಂಡವಾಡಿ ಚಂದ್ರಶೇಖರ್ ಅಭಿಮಾನಿಗಳ ಬಳಗದ ವತಿಯಿಂದ ಹಿಂದೂಪುರ ರಸ್ತೆಯ ಶಿಥಲೀಕರಣ ಕೇಂದ್ರದ ಆವರಣದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದ್ದು ಖ್ಯಾತ ಆಸ್ಪತ್ರೆಗಳ ತಜ್ಞ ವೈದ್ಯರು ಈ ಶಿಬಿರದಲ್ಲಿ ಭಾಗವಹಿಸುತ್ತಾರೆ. ಹೃದಯ, ಕಣ್ಣು, ಕಿವಿ, ದಂತ, ಮೂಗು, ಗಂಟಲು , ಮೂಳೆ, ನರರೋಗಗಳ ತಪಾಸಣೆ ಮಾಡಲಾಗುತ್ತದೆ.ಅಗತ್ಯವಿದ್ದವರಿಗೆ ರಿಯಾಯಿತಿ ದರದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗುವುದು. ರೋಗಿಗಳಿಗೆ ಉಚಿತ ಔಷಧಿ, ಕನ್ನಡಕಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ 35 ಜನ ಮರಣ ಹೊಂದಿದ ಹೈನುಗಾರರ ಕುಟುಂಬಗಳಿಗೆ ತಲಾ 50 ಸಾವಿರ, ಹಾಗೂ ಮರಣ ಹೊಂದಿದ 55 ರಾಸುಗಳ ಮಾಲೀಕರಿಗೆ ತಲಾ 60ಸಾವಿರ , 32 ಪಡ್ಡೆ ರಾಸುಗಳು ಮೃತಪಟ್ಟಿದ್ದು ಹೈನುಗಾರರಿಗೆ ತಲಾ 10 ಸಾವಿರ ರೂಗಳ ಪರಿಹಾರದ ಧನದ ಚೆಕ್ ಹಾಗೂ 5 ಹಾಲು ಉತ್ಪಾದಕ ಸಂಘದ ಕಟ್ಟಡಗಳ ನಿರ್ಮಾಣಕ್ಕೆ ತಲಾ 2 ಲಕ್ಷ ರೂ ಸಹಾಯಧನ ಸೇರಿದಂತೆ ಹೈನುಗಾರರ ಮಕ್ಕಳು ಉನ್ನತ ವ್ಯಾಸಂಗ ಮಾಡುತ್ತಿದ್ದು ಅವರಿಗೂ ಸಹಾಯಧನ ವಿತರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ವಿಸ್ತರಣಾಧಿಕಾರಿಗಳಾದ ಕೆ.ಎ ಶಂಕರನಾಗ್, ಡಾ.ಎಲ್. ಡಿ.ದೀಕ್ಷಿತ್, ಆರ್.ಟಿ.ಧರ್ಮವೀರ್ ಉಪಸ್ಥಿತರಿದ್ದರು.
.jpeg)
0 Comments