Ticker

6/recent/ticker-posts

Ad Code

Responsive Advertisement

ವಿದ್ಯುತ್ ಬಿಲ್ಲುಗಳನ್ನು ಪಡೆದು ಬಲ್ಪುಗಳ ಮಾರಾಟ ....!

 ಮಧುಗಿರಿ:ತಾಲೂಕಿನ ಪುರವರ ಹೋಬಳಿಯ ಪುರವರ ಗ್ರಾಮದಲ್ಲಿ ಕಾರಿನಲ್ಲಿ ಬಂದಂತಹ ವ್ಯಾಪಾರಿಗಳು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವತಿಯಿಂದ ಅನುಮತಿ ಪಡೆದು ಬಲ್ಬುಗಳನ್ನು ಮಾರುತ್ತಿರುವುದಾಗಿ ಜನರನ್ನು ಯಾಮಾರಿಸಿ ಅವರ ಹತ್ತಿರ ವಿದ್ಯುತ್ ಬಿಲ್ಲುಗಳನ್ನು ಪಡೆದು ನೂರು ರೂಪಾಯಿಗಳಿಗೆ 4 ಬಲ್ಪುಗಳನ್ನು ನೀಡುತ್ತಿದ್ದರು.  ಆಗ ಕೆಲವರು ಅವರನ್ನು ಪ್ರಶ್ನಿಸಿದರು, ನಂತರ ಇದರ ಅನುಮತಿ ಪತ್ರ ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು . ಹಾಗೆ ಇದರ  ಸಂಬಂಧಪಟ್ಟ ತಾಲೂಕು ವಿದ್ಯುತ್ ಅಧಿಕಾರಿಗಳಾದ  ಪಂಪ ರಾಜ್ ರವರಿಗೆ ಫೋನ್ ಕರೆ ಮೂಲಕ  ಸಂಪರ್ಕಿಸಿದಾಗ ನಮ್ಮ ಸಂಸ್ಥೆಯಿಂದ ಯಾವುದೇ ರೀತಿಯ ಅನುಮತಿಯನ್ನು ನೀಡಿಲ್ಲ ನಮಗೆ ಯಾವುದೇ ರೀತಿ ಮಾಹಿತಿ ಕೂಡ ಇಲ್ಲ ನಮ್ಮ ಅಲ್ಲಿನ ಅಧಿಕಾರಿಯನ್ನು ಸ್ಥಳಕ್ಕೆ ಕಳಿಸಿಕೊಡುತ್ತೇನೆ ಎಂದು ಹೇಳಿದರು.


ನಂತರ ಅಧಿಕಾರಿಯೊಬ್ಬರು ಸ್ಥಳಕ್ಕೆ ಬಂದು ಮೊದಲು ನೀವು ಮಾರಾಟ ಮಾಡುವುದಾದರೆ ಅಲ್ಲಿನ ಎಇಇ ಗೆ ಮಾಹಿತಿ ನೀಡಿ ಅನುಮತಿ ಪಡೆದು ನಂತರ ಹೋಬಳಿಯ ಶಾಖಾ ಅಧಿಕಾರಿಗಳಿಗೆ ಮಾಹಿತಿ ನೀಡಿ ಬಂದು ಮಾರುವುದಾಗಿ ತಿಳಿಸಿದರು.

ನಂತರ ಕೆಲವು ಸಾರ್ವಜನಿಕರು ಮಾತನಾಡಿ ಈ ರೀತಿಯಾಗಿ ಜನರನ್ನು ಯಾಮಾರಿಸುವ  ಕೆಲವರು ಬೇರೆ ಬೇರೆ ಹೆಸರುಗಳಿಂದ ಮೋಸ ಮಾಡುತ್ತಿರುವುದು ಕಂಡುಬರುತ್ತಿದು ಆದ್ದರಿಂದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಅಲ್ಲಿನ ಕೆಲವು ಸಾರ್ವಜನಿಕರು ತಿಳಿಸಿದ್ದಾರೆ.

Post a Comment

0 Comments

Ad Code

Responsive Advertisement