ಬೆಂಗಳೂರು, ಫೆ 25: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಯಲಹಂಕ ವಲಯ ಕೊಡಿಗೇಹಳ್ಳಿ ವಾರ್ಡ್ ಕಾರ್ಯವ್ಯಾಪ್ತಿಯ ಭದ್ರಪ್ಪ ಲೇಔಟ್ ಮುಖ್ಯ ರಸ್ತೆ ಎಕ್ಕೆಲುಗಳಲ್ಲಿರುವ ಕೋಡಿಗೆಹಳ್ಳಿ ಗ್ರಾಮದ ಸರ್ವೆ ಸಂ-46 ಮತ್ತು 47 ರಲ್ಲಿ ಹಾಲಿ ಇರುವ ವಿಸ್ತೀರ್ಣಕ್ಕೆ ಹೆಚ್ಚುವರಿಯಾಗಿ 10 ಗುಂಟೆ(62,726,400 ರೂ. ಮೌಲ್ಯ) ಸರ್ಕಾರದ ಕೆರೆ ಏರಿಯ ಜಾಗವನ್ನು ಅತಿಕ್ರಮಣವಾಗಿ ಸ್ವಾಧೀನದಲ್ಲಿ ಇರುವುದಾಗಿ ಭೂದಾಖಲೆಗಳ ನಿರ್ದೇಶಕರು ಯಲಹಂಕ ರವರು ದೃಢೀಕರಿಸಿರುತ್ತಾರೆ.
ಈ ಸಂಬ0ಧ ಭೂದಾಖಲೆಗಳ ನಿರ್ದೇಶಕರು ನೀಡಿದ ನಕ್ಷೆಯಂತೆ ದಿನಾಂಕ: 25.02.2022 ರಂದು ವಲಯ ಜಂಟಿ ಆಯುಕ್ತರಾದ ಶ್ರೀಮತಿ ಪೂರ್ಣಿಮಾ ರವರ ನೇತೃತ್ವದಲ್ಲಿನ ತಂಡವು ಒತ್ತುವರಿ ತೆರವು ಕಾರ್ಯಾಚರಣೆ ಹಮ್ಮಿಕೊಂಡು ಅತಿಕ್ರಮಣ ಮಾಡಿಕೊಂಡಿಡ್ಡ ಖಾಸಗಿ ಸ್ವಾಧೀನದಲ್ಲಿ ಸರ್ಕಾರಿ ಜಾಗವನ್ನು ವಶಪಡಿಸಿಕೊಳ್ಳಲಾಗಿರುತ್ತದೆಂದು ಯಲಹಂಕವಲಯದ ಜಂಟಿ ಆಯುಕ್ತರು ರವರು ತಿಳಿಸಿದ್ದಾರೆ.
Varthajala daily, Bengaluru
0 Comments