Ticker

6/recent/ticker-posts

Ad Code

Responsive Advertisement

15 - 20 ವರ್ಷಗಳಿಂದ ಪ್ರಾಣಿಗಳಿಗೆ ಆಹಾರ ನೀಡುತ್ತಿರುವ ವೃದ್ಧೆ

 ಮಧುಗಿರಿ: ತಾಲೂಕಿನ ಪುರವರ ಹೋಬಳಿಯ ಕೊಡಗದಲ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಮುಂಭಾಗ ಸುಮಾರು 15 ರಿಂದ 20 ವರ್ಷಗಳಿಂದ ಪ್ರಾಣಿಗಳಿಗೆ ರುಕ್ಮಿಣಿ ಎಂಬ ವೃದ್ಧೆ ಯು ಆಹಾರವನ್ನು ನೀಡುತ್ತಿದ್ದು ಪಕ್ಕದ ನಾಗಮ್ಮನ ಪಾಳ್ಯದ ರುಕ್ಮಿಣಮ್ಮ ಎಂಬ ವೃದ್ಧೆ ಯು ಸುಮಾರು 10 ರಿಂದ 15 ಕಿಲೋಮೀಟರ್ ದೂರವಿರುವ ಮಧುಗಿರಿ ಗೆ ಹೋಗಿ ಅಲ್ಲಿಂದ ನಾನಾತರದ ಹಣ್ಣುಗಳು, ತರಕಾರಿಗಳು ಪ್ರತಿದಿನ ತಂದು ಸಂಜೆ  5 ಗಂಟೆಯಿಂದ  ಪ್ರಾಣಿಗಳಿಗೆ ಆಹಾರವನ್ನು ನೀಡಿ ತನ್ನ ಕುಟುಂಬದವರಂತೆ ಕಾಣುತ್ತಿದ್ದಾರೆ.



 ವೃದ್ಧೆ ರುಕ್ಮಿಣಮ್ಮ ಮಾತನಾಡಿ ನಾನು ಇಲ್ಲೇ ಪಕ್ಕದ ಗ್ರಾಮದ ವಾಸಿಯಾಗಿದ್ದು ಪ್ರತಿದಿನದ ಕೂಡ ನಮ್ಮ ಮನೆಯ ಬಾಗಿಲಿಗೆ ಪ್ರಾಣಿಗಳು ಬರುತ್ತಿದ್ದವು ಆಗ ಪ್ರತಿದಿನವೂ ಕೂಡ ಮನೆ ಹತ್ತಿರಾನೆ ಇವುಗಳಿಗೆ ಆಹಾರವನ್ನು ಹಾಕುತ್ತಿದ್ದು  ಮಳೆಗಾಲದಲ್ಲಿ ಬೆಳೆಗಳು ಇದ್ದು ಈ ಪ್ರಾಣಿಗಳು ಬೆಳೆಗಳನ್ನು ನಾಶಪಡಿಸುತ್ತವೆ ಎಂದು ಸಾರ್ವಜನಿಕರು ಅವುಗಳನ್ನು ಓಡಿಸುತ್ತಿದ್ದರು ಆದರಿಂದ ಸ್ವತಃ ನಾನೇ ಸುಮಾರು ಹತ್ತು ರಿಂದ ಹನ್ನೆರಡು ವರ್ಷಗಳಿಂದ ಪ್ರತಿದಿನವೂ ಈ ಶಾಲೆಯ ಮುಂದೆಯೇ ಬಂದು ಇವುಗಳಿಗೆ ಆಹಾರ ನೀಡುತ್ತಿದ್ದೇನೆ ಎಂದರು.

ನಂತರ ಗ್ರಾಮಸ್ಥರಾದ ಲಕ್ಷ್ಮಿಕಾಂತ್ ಮಾತನಾಡಿ ಇವರು ನಮ್ಮ ತಾಯಿಗಳು ಇದ್ದ ಹಾಗೆ ಇವರು ನಮ್ಮ ಗುರುಗಳಾದ ನಿವೃತ್ತ ಶಿಕ್ಷಕರಾದ ಎನ್ ಎಚ್ ಸುಬ್ಬಣ್ಣನವರ ಧರ್ಮಪತ್ನಿ ಆದ ತಾಯಿ ರುಕ್ಮಿಣಮ್ಮ ನವರು ಸುಮಾರು ನಾವು ಕಂಡ ಹಾಗೆ  ಸುಮಾರು 20 ರಿಂದ 25 ವರ್ಷಗಳಿಂದ ದಿನನಿತ್ಯವೂ ಈ ಕೋತಿಗಳಿಗೆ ಆಹಾರವನ್ನು ನೀಡುತ್ತಿದ್ದು ಮೊದಲು ಮನೆ ಹತ್ತಿರಾನೆ ತುಂಬಾ ಹೋಗುತ್ತಿದ್ದು ಅಕ್ಕ-ಪಕ್ಕ ಜನ ಮನೆ ಹತ್ತಿರ ಜಾಸ್ತಿ ಬರುತ್ತವೆ ಎಂದು ಹೇಳಿದಾಗ ಸ್ವತಃ ಅವರೇ ಕೋತಿಗಳು ಎಲ್ಲಿ ಇರುತ್ತವೂ ಅಲ್ಲಿಗೆ ಹೋಗಿ ಪ್ರತಿದಿನವೂ ಅವುಗಳಿಗೆ ತರ ತರಹದ ಆಹಾರವನ್ನು ನೀಡುತ್ತಿದ್ದು ಮಳೆಗಾಲದಲ್ಲಿ ಸಮೇತ ಛತ್ರಿಯನ್ನು ಹಿಡಿದುಕೊಂಡು ಹೋಗಿ ಆಹಾರವನ್ನು ನೀಡುತ್ತಾರೆ ಈಗಲೂ ಸಹ ಅವರಿಗೆ ಆ ಚೈತನ್ಯ ಇರುವುದು ತುಂಬಾ ಅವರ ಒಳ್ಳೆತನ. ಹಾಗೆ ಅವರೇ ಸ್ವತಹ ಪ್ರತಿದಿನ ಆಟೋದಲ್ಲಿ ಒಬ್ಬ ಹುಡುಗನನ್ನು ಕರೆದುಕೊಂಡು ಹೋಗಿ ಆಹಾರ ತಂದು ಇವುಗಳಿಗೆ ನೀಡುತ್ತಾರೆ ನಿಜಕ್ಕೂ ಆ ದೇವರು ಅವರಿಗೆ ಆಯಸ್ಸು ಆರೋಗ್ಯ ಕೊಡಲಿ ಎಂದು ಈ ಸಂದರ್ಭದಲ್ಲಿ ಆಶಿಸುತ್ತೇವೆ ಎಂದರು.

ವರದಿ: ನಾಗೇಶ್ ಜೀವಾ

Post a Comment

0 Comments

Ad Code

Responsive Advertisement