Ticker

6/recent/ticker-posts

Ad Code

Responsive Advertisement

Breaking News: ರಾಜ್ಯ ಸರ್ಕಾರದಿಂದ ಕಡತ ವಿಲೇವಾರಿಗೆ ʼವಿಶೇಷ ಕಾರ್ಯಕ್ರಮʼ: ಅಶೋಕ್

ಉಡುಪಿ, ಫೆ 19: ಸರಕಾರದ ವತಿಯಿಂದ ಕಡತ ವಿಲೇವಾರಿಗೂ ವಿಶೇಷ ಕಾರ್ಯಕ್ರಮ ಹಾಕಿಕೊಳ್ತೇವೆ. ಕರ್ನಾಟಕದಾದ್ಯಂತ ಬಾಕಿ ಉಳಿದಿರುವ ಕಡತಗಳ ವಿಲೇವಾರಿಗೆ ಸೂಚನೆ ನೀಡಲಾಗಿದ್ದು, ದಶಕಗಳಿಂದ ಬಾಕಿಯುಳಿದ ಕಡತಗಳಿಗೆ ಮುಕ್ತಿ ನೀಡುತ್ತೇವೆ ಎಂದು ಕಂದಾಯ ಸಚಿವ ಅಶೋಕ್ ಹೇಳಿದ್ದಾರೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಗ್ರಾಮ ಮಾತನಾಡಿದ ಸಚಿವ ಅಶೋಕ್, 'ಕಡತ ವಿಲೇವಾರಿಗೂ ವಿಶೇಷ ಕಾರ್ಯಕ್ರಮ ಹಾಕಿಕೊಳ್ತೇವೆ. ಕರ್ನಾಟಕದಾದ್ಯಂತ ಬಾಕಿ ಕಡತಗಳ ವಿಲೇವಾರಿಗೆ ಸೂಚನೆ ನೀಡಲಾಗಿದ್ದು, ದಶಕಗಳಿಂದ ಬಾಕಿಯುಳಿದ ಕಡತಗಳಿಗೆ ಮುಕ್ತಿ ನೀಡುತ್ತೇವೆ. ಗ್ರಾಮ ವಾಸ್ತವ್ಯ ಬಂದ ಸಿದ್ದ ಹೋದ ಸಿದ್ದ ಕಾರ್ಯಕ್ರಮವಲ್ಲ. ಇದು ನಿಮ್ಮ ಮನೆ ಬಾಗಿಲಿಗೆ ಜನರ ಕಷ್ಟಗಳಿಗೆ ಸ್ಪಂಧಿಸುವ ಹಾಗು ಬರುವ ಸರ್ಕಾರ. ಹಿಂದುಳಿದ ಜನರ ಕೇರಿಗೆ ಹೋಗಿ ಸಮಸ್ಯೆ ಆಲಿಸುತ್ತೇನೆ' ಎಂದರು. ಮಾನ್ಯ ಮುಖ್ಯಮಂತ್ರಿಗಳ ಸಹಕಾರದೊಂದಿಗೆ ಇನ್ನು ಹೆಚ್ಚು ಕೆಲಸ ಮಾಡತ್ತೇವೆ ಎಂದರು.

Varthajala daily, Bengaluru

Post a Comment

0 Comments

Ad Code

Responsive Advertisement