ಶಿವಮೊಗ್ಗ, ಫೆ 19: ಹಿಜಾಬ್- ಕೇಸರಿ ಶಾಲು ಸಂಘರ್ಷದಿ0ದ ಆರಂಭವಾದ ವಿವಾದ ಇದೀಗ ರಾಜಕೀಯ ನಾಯಕರ ವಾಕ್ಸಮರಕ್ಕೆ ಕಾರಣವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಜಾತಿವಾದಿ ಸಿದ್ದರಾಮಯ್ಯ, ಗೂಂಡಾ ಡಿ.ಕೆ.ಶಿವಕುಮಾರ್ ಎಂದು ವಾಗ್ದಾಳಿ ಮಾಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ, ನಮ್ಮನ್ನು ಬಿಟ್ಟು ಇನ್ಯಾರೂ ಮುನ್ನುಗ್ಗೋಕೆ ಸಾಧ್ಯವಿಲ್ಲ, ಮುಂಬರುವ ಚುನಾವಣೆಯಲ್ಲಿಯೂ ನಾವೇ ಗೆದ್ದು ವಿಧಾನಸೌಧಕ್ಕೆ ಹೋಗುತ್ತೇವೆ, ಮುಂದಿನ ಸಲವೂ ನಮ್ಮದೇ ಸರಕಾರ, ಬಿಜೆಪಿ ಗೆಲುವು ನಿಶ್ಚಿತ ಎಂದರು.
ವಿಧಾನಸಭೆಗೆ ಗೂಂಡಾ ಡಿ.ಕೆ.ಶಿವಕುಮಾರ್ ಬರ್ತಾರಾ? ಇಲ್ಲ ಜಾತಿವಾದಿ ಸಿದ್ದರಾಮಯ್ಯ ಬರ್ತಾರಾ? ಎಂದು ವ್ಯಂಗ್ಯ ಮಾಡುತ್ತ ಡಿಕೆಶಿ ಹಾಗೂ ಸಿದ್ದರಾಮಯ್ಯ ಬಡಿದಾಡಿಕೊಳ್ಳುತ್ತಿದ್ದಾರೆ ಎಂದರು. ಆ ಗೂಂಡಾ ಹಾಗೂ ಈ ಜಾತಿವಾದಿಗಳನ್ನು ಪಕ್ಕಕ್ಕೆ ಸರಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ಭದ್ರಾವತಿಯಲ್ಲಿಯೂ ಬಿಜೆಪಿ ಅಭ್ಯರ್ಥಿಯನ್ನೇ ಗೆಲ್ಲಿಸಬೇಕು. ಮುಂದಿನ ಬಾರಿಯೂ ರಾಜ್ಯದಲ್ಲಿ ಬಿಜೆಪಿಯೇ ಗೆಲುವು ಸಾಧಿಸಿ ನಮ್ಮ ಸರಕಾರವೇ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Varthajala daily, Bengaluru
0 Comments