Ticker

6/recent/ticker-posts

Ad Code

Responsive Advertisement

BBMP News: ಘನತ್ಯಾಜ್ಯ ನಿರ್ವಹಣೆ ಹೋರಾಟ, ಜಂಟಿ ಕ್ರಿಯಾ ಸಮಿತಿ ಜೊತೆ ಚರ್ಚಿಸಿ ಸಮಸ್ಯೆ ಇತ್ಯರ್ಥ

ಬೆಂಗಳೂರು, ಫೆ 19: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಸಂಬ0ಧಿಸಿದ0ತೆ ದಿನಾಂಕ: 18-02-2022 ರಿಂದು ಕಸ ಸಂಗ್ರಹಣೆ/ಸಾಗಣೆ ಮಾಡುವ ಗುತ್ತಿಗೆದಾರರ ಸಂಘ/ಜ0ಟಿ ಕ್ರಿಯಾ ಸಮಿತಿಯು ಪಾಲಿಕೆಯಿಂದ ನಿಗದಿತ ಸಮಯದಲ್ಲಿ ಹಣ ಬಿಡುಗಡೆಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸಾಂಕೇತಿಕ ಹೋರಾಟ/ಪ್ರತಿಭಟನೆ ಮಾಡಿದ್ದು, ನಗರದ ಕೆಲವು ಭಾಗಗಳಲ್ಲಿ ಕಸ ಸಂಗ್ರಹಣೆ ಮಾಡುವುದನ್ನು ಸ್ಥಗಿತಗೊಳಿಸಿದ್ದರು.

ಇದಕ್ಕೆ ಸಂಬ0ಧಿಸಿದ0ತೆ, ಇಂದು ದಿನಾಂಕ: 19-02-2022ರ ಬೆಳಗ್ಗೆ ಜಂಟಿ ಕ್ರಿಯಾ ಸಮತಿಯ ಸ್ವಚ್ಛತಾ ಗುತ್ತಿಗೆದಾರರು ಮತ್ತು ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳ ಜೊತೆ ಪಾಲಿಕೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಗುತ್ತಿಗೆದಾರರ ಸಂಘದವರ ಮನವಿಯನ್ನು ಪರಿಗಣಿಸಿ ಸಮಸ್ಯೆ ಕೂಡಲೆ ಬಗೆಹರಿಸಲು ಕ್ರಮವಹಿಸವುದಾಗಿ ತಿಳಿಯಪಡಿಸಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿಯು ದೈನಂದಿನ ಕೆಲಸವಾಗಿದ್ದು, ಇದನ್ನು ವ್ಯವಸ್ಥಿತವಾಗಿ ನಡೆಸಲು ಅನುವಾಗುವಂತೆ ಮಾಸಿಕ ನಿಗದಿತ ಸೇವಾ ಶುಲ್ಕವನ್ನು ಸಮಯಬದ್ಧವಾಗಿ ಪಾವತಿಸಲು ಸೂಚನೆ ನೀಡಲಾಗಿರುತ್ತದೆ. ಜೊತೆಗೆ ಗುತ್ತಿಗೆದಾರರು ಅನುಭವಿಸುತ್ತಿರುವ ಕೆಲವು ತೊಡಕುಗಳನ್ನು ನಿವಾರಿಸಲು ಸಂಬ0ಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಪಾಲಿಕೆಯ ಕೋರಿಕೆಯನ್ನು ಪರಿಗಣಿಸಿ ಗುತ್ತಿಗೆದಾರರ ಸಂಘವು ಸಾರ್ವಜನಿಕರ ಹಿತದೃಷ್ಠಿಯಿಂದ ಪ್ರತಿಭಟನೆನ್ನು ಹಿಂಪಡೆದಿದ್ದು, ಇಂದು ಅಪರಾಹ್ನದಿಂದಲೇ ಯಾವುದೇ ತೊಡಕಿಲ್ಲದೆ ತ್ಯಾಜ್ಯವನ್ನು ತೆಗೆಯದೆ ಸ್ಥಗಿತಗೊಳಿಸಿದ್ದ ಸ್ಥಳಗಳಲ್ಲಿ ಕಸ ಸಂಗ್ರಹಣೆ ಕಾರ್ಯವನ್ನು ಪುನರಾರಂಭಿಸಲಾಗಿರುತ್ತದೆ.

Varthajala daily, Bengaluru

Post a Comment

0 Comments

Ad Code

Responsive Advertisement