Ticker

6/recent/ticker-posts

Ad Code

Responsive Advertisement

Breaking News: ಭಾನುವಾರ ಮೆಜೆಸ್ಟಿಕ್ ಸುತ್ತ ಟ್ರಾಫಿಕ್ ಜಾಮ್ .....?

ಬೆಂಗಳೂರು, ಫೆ.19: ದಲಿತ ಸಂಘಟನೆಗಳು ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಿಂದ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿರುವ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ಬೆಂಗಳೂರಿನ ಮಧ್ಯಭಾಗದ ಮೆಜೆಸ್ಟಿಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಲಿದೆ.

ಬೆಂಗಳೂರಿಗೆ ಹೊರ ಭಾಗಗಳಿಂದ ಆಗಮಿಸುವ ವಾಹನಗಳಿಗೆ ಅರಮನೆ ಮೈದಾನದಲ್ಲಿ ಗೇಟ್ 2 ಮತ್ತು 3ರ ಮೂಲಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು.

ಪ್ರತಿಭಟನಾ ಮೆರವಣಿಗೆಯು ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಲಿದೆ ಮತ್ತು ರೈಲ್ವೇ ನಿಲ್ದಾಣ ಮತ್ತು ಸ್ವಾತಂತ್ರ‍್ಯ ಉದ್ಯಾನದ ನಡುವೆ ಇರುವ ಟ್ರಾಫಿಕ್ ಜಂಕ್ಷನ್‌ಗಳನ್ನು ಹಾದುಹೋಗುತ್ತದೆ.

ಕರ್ನಾಟಕದ ವಿವಿಧ ಭಾಗಗಳಿಂದ ಜನರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಬೆಂಗಳೂರಿಗೆ ಹೊರಭಾಗದಿಂದ ಆಗಮಿಸುವ ಹಾಗು ಕರೆದೊಯ್ಯುವ ವಾಹನಗಳಿಗೆ ಅರಮನೆ ಮೈದಾನದಲ್ಲಿ ಗೇಟ್ 2 ಮತ್ತು 3 ಮೂಲಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು.

ಪರ್ಯಾಯ ರಸ್ತೆಗಳು:

ಶೇಷಾದ್ರಿ ರಸ್ತೆಯಲ್ಲಿನ ಗ್ರಿಡ್‌ಲಾಕ್/ವಾಹನಸಂದನೆಯನ್ನು ತಪ್ಪಿಸಲು ಪರ್ಯಾಯ ಮಾರ್ಗಗಳನ್ನು ತೆಗೆದುಕೊಳ್ಳುವಂತೆ ಬೆಂಗಳೂರು ಸಂಚಾರ ಪೊಲೀಸರು ಸಾರ್ವಜನಿಕರಿಗೆ ತಿಳಿಸಿದ್ದಾರೆ.

Varthajala daily, Bengaluru

Post a Comment

0 Comments

Ad Code

Responsive Advertisement