ಇಷ್ಟು ದಿನ ಜನಸಾಮಾನ್ಯರ ಏನೇ ಕೇಲಸ ಆಗಬೇಕಾದ್ರೂ ಸರ್ಕಾರಿ ಕಚೇರಿಗೆ ಅಧಿಕಾರಿಗಳೆ ಹೋಗಬೇಕಿತ್ತು ಆದ್ರೆ ಹುಕ್ಕೇರಿ ಹಾಗೂ ಸಂಕೇಶ್ವರ ಪುರಸಭೆ ವ್ಯಾಪ್ತಿಯ ಜನರ ಸಮಸ್ಯೆ ಪರಿಹಾರ ನೀಡಲು ಖುದ್ದು ಅಧಿಕಾರಿಗಳೇ ಜನರ ಬಳಿ ಬರಲಿದ್ದಾರೆ. ಇಂತಹ ಒಂದು ವಿನೂತನ ಕಾರ್ಯಕ್ರಮಕ್ಕೆ, ಅರಣ್ಯ ಮತ್ತು ಆಹಾರ ಸಚಿವರು ಹುಕ್ಕೇರಿ ಮತ್ತು ಸಂಕೇಶ್ವರ ಪಟ್ಟಣದಲ್ಲಿ ಚಾಲನೆ ನೀಡಿದರು.
ಹುಕ್ಕೇರಿ ವಿಧಾನಸಭಾ ಕ್ಷೇತ್ರದಿಂದ ಎಂಟು ಬಾರಿ ಆಯ್ಕೆ ಆಗಿ ಅತ್ಯಂತ ಹಿರಿಯ ಶಾಸಕ ಎಣಿಸಿಕೊಂಡಿರುವ ಸಚಿವ ಉಮೇಶ್ ಕತ್ತಿ, ಇಷ್ಟು ದಿನಗಳವರೆಗೆ ಇದ್ದ ವ್ಯವಸ್ಥೆಯಲ್ಲಿ ಸ್ವಲ್ಪ ಬದಲಾವಣೆ ತಂದು, ಜನರ ಸಮಸ್ಯೆಗೆ ಸರಳವಾಗಿ ಪರಿಹಾರ ನೀಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಹುಕ್ಕೇರಿ ಹಾಗೂ ಸಂಕೇಶ್ವರ ಪಟ್ಟಣದ ಪ್ರತಿ ವಾರ್ಡ್ ಗೆ ಎಸಿ, ತಹಶಿಲ್ದಾರ ಸೇರಿದಂತೆ ಎಲ್ಲ ಅಧಿಕಾರಿಗಳು ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗೆ ಸ್ಥಳದಲ್ಲೆ ಪರಿಹಾರ ನೀಡಬೇಕು, ಒಂದು ವೇಳೆ ತಾಲೂಕಾಧಿಕಾರಿಗಳ ಮಟ್ಟದಲ್ಲಿ ಆಗದೆ ಇರುವ ಕೆಲಸಗಳನ್ನು, ಖುದ್ದು ಸಚಿವರೆ ಕೈಗೆತ್ತಿಕೊಂಡು ಸಂಬಂಧಪಟ್ಟ ಅಧಿಕಾರಿ ಹಾಗೂ ಜನಪ್ರತಿನಿಧಿ ಜೊತೆ ಮಾತನಾಡಿ ಕೂಡಲೆ ಪರಿಹಾರ ನೀಡಲಿದ್ದಾರೆ.
ಇದು ಕೇವಲ ಕಾಟಾಚಾರದ ಕಾರ್ಯಕ್ರಮ ಆಗಲು ಆಸ್ಪದ ಕೊಡದ ಸಚಿವರು, ಅಧಿಕಾರಿಗಳು ಭೇಟಿ ನೀಡಿದ ವಾರ್ಡ್ ನಲ್ಲಿ ಪರಿಹಾರ ನೀಡಿದ ಸಮಸ್ಯೆಗಳೆಷ್ಟು, ಪರಿಹಾರ ನೀಡಬೇಕಿರುವ ಸಮಸ್ಯೆಗಳೆಷ್ಟು ಜನರಿಗೆ ಇನ್ಯಾವ್ ಸೌಕರ್ಯಗಳ ಅವಶ್ಯಕತೆ ಇದೆ ಎಷ್ಟು ಜನರು ಅಧಿಕಾರಿಗಳನ್ನು ಭೇಟಿ ಮಾಡಿದ್ರು ಎಂಬುವುದರ ವಿಸ್ತೃತ ಮಾಹಿತಿಯನ್ನು ಸಚಿವರು ಪ್ರತಿ ದಿನ ಸಂಜೆ ನೇರವಾಗಿ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ.
ಕೇವಲ ಅಧಿಕಾರಿಗಳನ್ನು ನಂಬಿ ಕೂಡದೆ ಈ ಬಗ್ಗೆ ಸ್ಥಳಿಯರಿಂದಲೂ ಈ ಕಾರ್ಯಕ್ರಮದ ಸಾದಕ ಭಾದಕಗಳ ಬಗ್ಗೆ ಪ್ರತಿ ನಿತ್ಯ ಫೋನ್ ಕರೆ ಮೂಲಕ ಮಾಹಿತಿ ಪಡೆದು ಈ ಕಾರ್ಯಕ್ರಮ ಯಶಸ್ಚಿ ಆಗುವ ರೀತಿಯಲ್ಲಿ ಮಾಡಲಿದ್ದಾರೆ
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಉಮೇಶ್ ಕತ್ತಿ, ಹುಕ್ಕೇರಿ ವಿಧಾನಸಭಾ ಕ್ಷೇತ್ರ ರಾಜ್ಯದಲ್ಲಿಯೇ ಮಾದರಿ ರಾಜ್ಯ ಮಾಡುವ ಗುರಿ ನನ್ನದು. ಈ ನಿಟ್ಟಿನಲ್ಲಿ ನೂರಾರು ಕೋಟಿ ರೂಪಾಯಿ ಅನುದಾನದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಇದರ ಜೊತೆಗೆ ಜನರ ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ನೀಡುವುದು ಹಾಗೂ ಕಟ್ಟಕಡೆಯ ವ್ಯಕ್ತಿಯ ಅಭಿಪ್ರಾಯವನ್ನು ಅರಿತುಕೊಳ್ಳಲು, ಪ್ರಾಯೋಗಿಕವಾಗಿ ನನ್ನ ಕ್ಷೇತ್ರದ ಹುಕ್ಕೇರಿ ಮತ್ತು ಸಂಕೇಶ್ವರ ಪುರಸಭೆ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೆವೆ.
ಈ ಕಾರ್ಯಕ್ರಮ ಕೇವಲ ಘೋಷಣೆ ಆಗಿ ಉಳಿಯದೆ ಜನೋಪಯೋಗಿ ಕಾರ್ಯಕ್ರಮ ಆಗಬೇಕೆಂಬುವುದು ನನ್ನ ಹೆಬ್ಬಯೆಕೆ, ಹಾಗಾಗಿ ಸಾರ್ವಜನಿಕರು ಈ ಯೋಜನೆಯ ಲಾಭ ಪಡೆದುಕೊಳ್ಳಬೇಕೆಂದು ಮನವಿ ಮಾಡುತ್ತೇನೆ. ಒಂದು ವೇಳೆ ಅಧಿಕಾರಿಗಳಿಂದ ಏನೆ ಲೋಪವಾದ್ರು ಸಾರ್ವಜನಿಕರು ನನ್ನನ್ನು ಸಂಪರ್ಕಿಸಬಹುದು. ಅಧಿಕಾರಿ ಮತ್ತು ಜನರ ನಡುವೆ ಒಳ್ಳೆಯ ಬಾಂಧವ್ಯ ಬೆಳೆಸಿ ಸರ್ಕಾರದ ಪ್ರತಿ ಯೋಜನೆಗಳು ನನ್ನ ಕ್ಷೇತ್ರದ ಕಟ್ಟ ಕಡೆಯ ವ್ಯಕ್ತಿಗೆ ತಲುಪಬೇಕೆಂಬುವುದು ನನ್ನ ಆಶಯ ಎಂದು ತಿಳಿಸಿದ್ದಾರೆ
.jpg)
.jpg)
0 Comments