ರಸ್ತೆ ಗುಂಡಿಗೆ ಶಿಕ್ಷಕಿ ಶರ್ಮಿಳಾ ಬಲಿಯಾಗಿದ್ದಕ್ಕೆ ಸಂಬಂಧಿಸಿ ಶಾಸಕ ಎಸ್.ಟಿ.ಸೋಮಶೇಖರ್‌ರವರನ್ನು ಪ್ರಶ್ನಿಸಿದ ನಾಗರಿಕನ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ, ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದರು. ಬ್ಯಾಡರಹಳ್ಳಿ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ ಕಾರ್ಯಕರ್ತರು ಶಾಸಕರಿಗೆ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳುವ ಮೂಲಕ ಶಾಸಕರ ಹಾಗೂ ಪೊಲೀಸರ ಕ್ರಮಕ್ಕೆ ಸಡ್ಡು ಹೊಡೆದರು.
ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಎಎಪಿಯ ಬೆಂಗಳೂರು ನಗರ ಉಪಾಧ್ಯಕ್ಷ ಬಿ.ಟಿ.ನಾಗಣ್ಣ, “ಸರ್ಕಾರಿ ಕಾಮಗಾರಿಗಳಿಗೆ ಸಂಬಂಧಿಸಿ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಸಂಪೂರ್ಣ ಹಕ್ಕು ನಾಗರಿಕರಿಗೆ ಇದೆ. ನಾಗರಬಾವಿಯ ಸಂತೋಷ್ ಗೌಡ ಎಂಬುವವರು ಕೂಡ ಇದನ್ನೇ ಮಾಡಿದ್ದಾರೆ. ತಮ್ಮ ಶಾಸಕರನ್ನು ಪ್ರಶ್ನಿಸಿದ್ದನ್ನೇ ಮಹಾಪರಾಧ ಎಂಬಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದು ಸರಿಯಲ್ಲ. ಸಂತೋಷ್ ವಿರುದ್ಧದ ಪ್ರಕರಣವನ್ನು ಶೀಘ್ರವೇ ರದ್ದುಪಡಿಸಬೇಕು” ಎಂದು ಆಗ್ರಹಿಸಿದರು.
ಆಮ್ ಆದ್ಮಿ ಪಾರ್ಟಿಯ ಯಶವಂತಪುರ ವಿಧಾನಸಭಾ ಕ್ಷೇತ್ರದ ಯಶವಂತಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಡಾಕ್ಟರ್ ಸತೀಶ್ ಕುಮಾರ್ ಡಾ. ಸತೀಶ್ ಕುಮಾರ್ ಮಾತನಾಡಿ, “ರಸ್ತೆ ದುರಸ್ತಿಗೆಂದು ಬಿಡುಗಡೆಯಾದ ಜನರ ತೆರಿಗೆ ಹಣವನ್ನು ಲೂಟಿ ಮಾಡಿದ ಆರೋಪದಲ್ಲಿ, ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನಾವು ದೂರು ನೀಡಿದ್ದೆವು. ದೂರು ಸ್ವೀಕರಿಸಲು ಪೊಲೀಸರು ಮೀನಮೇಷ ಎಣಿಸಿ, ಕೊನೆಗೂ ಪ್ರಕರಣ ದಾಖಲಿಸಿಕೊಂಡರು. ಆದರೆ ಈವರೆಗೂ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಮತ್ತೊಂದೆಡೆ, ಶಾಸಕರನ್ನು ಪ್ರಶ್ನಿಸಿದ ಆರೋಪದಲ್ಲಿ ಸಂತೋಷ್ ಗೌಡ ವಿರುದ್ಧ ತಕ್ಷಣವೇ ಮೊಕದ್ದಮೆ ದಾಖಲಿಸಿಕೊಂಡು ವಿಚಾರಣೆಗೆ ಮುಂದಾಗಿದ್ದಾರೆ. ರಾಜ್ಯದಲ್ಲಿ ಸಾಮಾನ್ಯ ಜನರಿಗೇ ಒಂದು ಕಾನೂನು, ಎಸ್.ಟಿ.ಸೋಮಶೇಖರ್‌ರವರಿಗೆ ಮತ್ತೊಂದು ಕಾನೂನು ಇದೆಯೇ ಎಂಬ ಅನುಮಾನ ಮೂಡುತ್ತಿದೆ” ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿಯ ಮುಖಂಡರಾದ ಜಗದೀಶ್ ವಿ ಸದಂ, ಚನ್ನಪ್ಪಗೌಡ ಚನ್ನಪ್ಪಗೌಡ ,ಸುಹಾಸಿನಿ, ಶಶಿ ಕುಮಾರ್ ಆರಾಧ್ಯ, ಶಾಂಪ್ರಕಾಶ್ ಮನಂ, ಸೀತಾರಾಂ ಗುಂಡಪ್ಪ, ಡಾ. ರಮೇಶ್ ಬೆಲ್ಲಂಕೊಂಡ, ಡಾ. ಶ್ರೀನಿವಾಸ, ಇನ್ನಿತರೆ ಮುಖಂಡರು, ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
.jpeg)

0 Comments