ಮಧುಗಿರಿ - ಸಮುದಾಯದ ಪಾಲ್ಗೊಳ್ಳುವಿಕೆ ಹೆಚ್ಚಿಸುವುದು ತರಬೇತಿ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಪುರಸಭಾ ಮುಖ್ಯಾಧಿಕಾರಿ ಶ್ರೀಮತಿ ನಜ್ಮಾ ತಿಳಿಸಿದರು.
ಪಟ್ಟಣದ ಪುರಸಭಾ ಕಚೇರಿಯಲ್ಲಿ ಕೌಶಲ್ಯ ಅಭಿವೃದ್ಧಿ ಇಲಾಖೆ ತುಮಕೂರು ಮತ್ತು ಪುರಸಭೆ ಮಧುಗಿರಿ ವತಿಯಿಂದ ನಡೆದ ಸ್ವಸಾಯ ಸಂಘಗಳ ಮತ್ತು ಒಕ್ಕೂಟದ ಸದಸ್ಯರುಗಳಿಗೆ ಏರ್ಪಡಿಸಿದ್ದ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತ ಕಾರ್ಯಾಗಾರವು ಕೌಶಲ್ಯಾಭಿವೃದ್ಧಿ ತರಬೇತಿ ಮತ್ತು ಉದ್ಯೋಗ ಕಂಡುಕೊಳ್ಳಲು ಹಾಗೂ ಸದಸ್ಯರ ಜವಬ್ದಾರಿ ತಿಳಿದುಕೊಳ್ಳಲು ಸಮಾಜದ ವ್ಯವಸ್ಥೆಯಲ್ಲಿ ಆರ್ಥಿಕವಾಗಿ ಸದೃಢರಾಗಲು ಒಕ್ಕೂಟದ ಸಂರಕ್ಷಣೆ ಸಂಘಗಳ ನಿರ್ವಹಣೆ ದಾಖಲಾತಿಗಳ ನಿರ್ವಹಣೆ ತಿಳಿದುಕೊಳ್ಳಲು ಸಹಾಯಕಾರಿಯಾಗಲಿದೆ ಎಂದು ತಿಳಿಸಿದರು.
ಸಮುದಾಯ ಸಂಘಟಕರಾದ ಬಿಆರ್ ವರಲಕ್ಷ್ಮಿ ಮಾತನಾಡಿ ಕಾರ್ಯಾಗಾರದಿಂದ ಉಳಿತಾಯ ಮಾಡುವ ಪರಿಕಲ್ಪನೆ ಸಮಾಜದಲ್ಲಿ ಸ್ತ್ರೀಯರು. ಆರ್ಥಿಕವಾಗಿ ಬೆಳವಣಿಗೆ ಒಂದನ್ನು ಸಾಕ್ಷರತೆ ಸಾಧಿಸಲು ಬೀದಿಬದಿ ವ್ಯಾಪಾರಿಗಳ ಸ್ವಯಂ ಉದ್ಯೋಗ ನಿರ್ವಹಣೆಗೆ ಆರ್ಥಿಕ ಸ್ವಾವಲಂಬನೆಗೆ ಸ್ತ್ರೀಶಕ್ತಿ ಸಂಘಗಳು ಸಹಾಯಕಾರಿ ಆಗಲಿವೆ ಎಂದರು
ಕಾರ್ಯಗಾರದಲ್ಲಿ ತುಮಕೂರು ಕೌಶಲ್ಯ ಅಭಿವೃದ್ಧಿ ಇಲಾಖೆ ಅಭಿಯಾನ ವ್ಯವಸ್ಥಾಪಕ ದೊಡ್ಡವಲ್ಲಪ್ಪ ಹಾಗೂ ಮಂತಾದವರು ಭಾಗವಹಿಸಿದ್ದರು.
0 Comments