Ticker

6/recent/ticker-posts

Ad Code

Responsive Advertisement

ಚೆನ್ನವೀರ ಕಣವಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಕೆ

ಮಧುಗಿರಿ :  ಕನ್ನಡ ಸಾಹಿತ್ಯ ಪರಿಷತ್  ತಾಲೂಕು ಘಟಕದಿಂದ ಪಟ್ಟಣದ ಕನ್ನಡ ಭವನದಲ್ಲಿ ಗುರುವಾರದಂದು ದಿವಂಗತ ಕವಿ ಚನ್ನವೀರ ಕಣವಿ ಅವರ ಶ್ರದ್ದಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮ ಜರುಗಿತು.


ತಾಲ್ಲೂಕು ಕನ್ನಡ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಿವಂಗತ ಚನ್ನವೀರ ಕಣವಿ ಅವರ ಭಾವಚಿತ್ರಕ್ಕೆ ವಿವಿದ ಗಣ್ಯರಿಂದ ಪುಷ್ಪಾರ್ಚನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

 ಶಿಕ್ಷಕ ಡಾ :ಅಮರಾವತಿ ದ್ರೇಹಾಚಾರ್ ಮಾತನಾಡಿ. ಭಾವನೆ ಬಸಿರಾದಾಗ ಕಾವ್ಯದ ಸುಕೃತ ಹೆರಿಗೆ ಪ್ರತಿಯೊಬ್ಬ ಮನುಷ್ಯನಿಗೂ ಭಾವನೆ ಇರುತ್ತದೆ. ಬಾವ ವೆಂಬುದು ಬಸಿರಾದಾಗ ಕಾವ್ಯದ ಸುಕೃತಿ ಹೆರಿಗೆ ಯಾಗುತ್ತದೆ. ಹೂವಿನ ಕವಿ ಚೆನ್ನವೀರ ಕಣವಿಯವರು ಕಾವ್ಯ ಸಜ್ಜನ ಯ ಮೂಲಕ ಮನುಕುಲದ ಅಂತರಂಗವನ್ನು ಮುಟ್ಟಿದ. ದಿಟ್ಟತನ ನಾಡಿನ ಉದ್ದಗಲಕ್ಕೂ ಪಸರಿಸಿದರು. ಮಾನವನಲ್ಲಿ ಬಯಕೆ ಸಹಜ ಸ್ಥಿರ ಹಾಗೂ ಸೂಕ್ಷ್ಮತೆ ಇದ್ದಾಗ ಭಾವರಸ ಜಿನುಗುತ್ತದೆ. ಆಗ ಕಾವ್ಯದ ಕೂಸು ಸುಕೃತಿ ಹೆರಿಗೆ ಒಂದಿಗೆ ಸಮಾಜದಲ್ಲಿ ಶಕ್ತಿಯಾಗಿ ಗೋಚರಿಸುತ್ತದೆ ಬುದನ್ನು ಕಣವಿ ಕಟ್ಟಿಕೊಟ್ಟಿದ್ದಾರೆoದು ಅಧ್ಯಾತ್ಮ ಚಿಂತಕ ಡಾ. ಅಮರಾವತಿ  ದ್ರೇಹಾಚಾರ್ ತಿಳಿಸಿದ್ದಾರೆ.

600ಕ್ಕೂ ಹೆಚ್ಚು ಕವಿತೆಗಳನ್ನು ರಚಿಸಿದ ಸುನೀತಗಳು ಸಾಮ್ರಾಟ ಕಣವಿ ಅವರ ಜ್ಞಾನ ದಾರೆ ಕಾವ್ಯ ಧಾರಿಯಾಗಿ ಜೇನಾಗಿದೆ. ಇಂಥಾ ಕಾವ್ಯ ಕನ್ನಿಕೆಯ ಸೊಬಗನ್ನು ಹೆಚ್ಚಿಸಿದೆ ಕಣವಿಯವರು ಶಾರೀಕವಾಗಿ ನಮ್ಮಂದಿಗೆ ಇಲ್ಲದಿರಬಹುದು ಆದರೆ ಅವರ ದೂರದೃಷ್ಟಿಯ ಚಿಂತನಾಶೀಲ. ಸಮಾಜ ಕಟ್ಟುವ ಬರಹ ಯಾವತ್ತಿಗೂ ನಮ್ಮನ್ನು ಅರಿವಿನ ದಾರಿಯಲ್ಲಿ ನಡೆಸುತ್ತದೆ.

 ಕಣವಿ ಕವಿತೆಯಲ್ಲಿ ವತ್ಸಲೇ ಭಾವವಿದೆ. ಪ್ರಕೃತಿಯ ಪ್ರೇಮವಿದೆ ಅದರಿಂದಲೇ ಇವರನ್ನು ಹೂವಿನ ಕವಿ ಎಂದು ಕರೆಯಲಾಯಿತು.

 ಹೂಗಳೆಂದರೆ ಇವರಿಗೆ ಪಂಚಪ್ರಾಣ ಹೂದೋಟದಲ್ಲಿ ಕಾಲ ಕಳೆಯುವ ಹವ್ಯಾಸವಿತ್ತು.

 ಅಲ್ಲಿ ಕಾವ್ಯ ಗಂಗೆ ಚುಮ್ಮುತಿತ್ತು. ಕುವೆಂಪು ಸೂರ್ಯೋದಯ ಕವಿ. ಬೇಂದ್ರೆ ಶ್ರಾವಣದ ಕವಿಯಾದರೆ  ಕಣವಿ ಮಳೆಗಾಲದ ಕವಿ.  

 ಸೋನೆ ಮಳೆಯ ಶೃತಿಯನ್ನು ಕಾವ್ಯದಲ್ಲಿ ಹಿಡಿದಿಟ್ಟ ದಿವ್ಯ ಕವಿಗಳಲ್ಲಿ ಕಣವಿ ಶ್ರೇಷ್ಠರು . ತಾನಾಯಿತು ತನ್ನ ಬದುಕಾಯಿತು

ಎಂಬಂತೆ ಅಜಾತಶತ್ರುವಾಗಿ ಬಾಳಿಬದುಕಿದ ಚೆಂಬೆಳಕಿನ ಕವಿ ಕಣವಿ ಅನ್ಯಾಯದ ವಿರುದ್ಧ ಮುಂಚೂಣಿಯಲ್ಲಿದ್ದಾರೆoದು ಹೇಳುವಲ್ಲಿ ಅನೇಕ ಚಳುವಳಿಯಲ್ಲಿ ಮುಂದಾಳಾಗಿ ಕಾಣಿಸಿಕೊಂಡಿರುವುದು ಸಂಖ್ಯೆ ಆಗಿದೆಂದರು.

 ನೆರಳಿಲ್ಲದ ವರಿಗೆ ನೆರಳಾಗಿ ದ್ದಾರೆ ಯಲ್ಲದೆ  ಮಾನವ ಬದುಕಿನ ತೃಪ್ತಿಯ ದೀಪ್ತಿಯನ್ನು ಇವರ ಕಾವ್ಯ ದಾರಿ ದೇವಟಿಯಾಗಿ ತೋರಿಸುವೆ. ಮುಂದಿನ ಪೀಳಿಗೆಗೆ ಇವರ ಕಾವ್ಯ ರಸಗಳನ್ನು ಪರಿಚಯಿಸುವ ಕೆಲಸವಾಗಬೇಕಿದೆ. ಸಾಹಿತಿಗಳ ನಾಡು ನುಡಿಯ ಸ್ಥಿರತೆಯ ಸಂಕೇತವೆಂದು ದ್ರೇಹಚಾರ್ ತಿಳಿಸಿದರು.

ಈ ಸಂದರ್ಭದಲ್ಲಿ ಕಸಾಪ ತಾಲೂಕು ಅಧ್ಯಕ್ಷೆ ಸಹನಾ ನಾಗೇಶ್, ಕಾರ್ಯದರ್ಶಿ ಎಂ.ಎಸ್ .ಶಂಕರನಾರಾಯಣ (ಜಗ್ಗಿ) ಪದಾಧಿಕಾರಿಗಳಾದ ಜಗದೀಶ್. ಅಶ್ವತಪ್ಪ. ಮೂಡಲ ಗಿರೀಶ್. ರಂಗಧಾಮಯ್ಯ. ರುದ್ರರಾಧ್ಯ, ವೀಣಾ ಶ್ರೀನಿವಾಸ್. ಆರಾಧ್ಯ. ವೆಂಕಟೇಶ್ ಪ್ರಸಾದ್. ಇನ್ನು ಮುಂತಾದವರು ಇದ್ದರು.

Post a Comment

0 Comments

Ad Code

Responsive Advertisement