Ticker

6/recent/ticker-posts

Ad Code

Responsive Advertisement

ಮತ್ತೀಕೆರೆ ಚೌಡೇಶ್ವರಿ ದೇವಸ್ಥಾನದ ವಾರ್ಷಿಕೋತ್ಸವ - ರಥೋತ್ಸವ

ಬೆಂಗಳೂರು  : ಮತ್ತಿಕೆರೆಯಲ್ಲಿರುವ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ 34 ನೇ ವರ್ಷದ ವಾರ್ಷಿಕೋತ್ಸವದ ಸಮಾರಂಭವನ್ನು ಧರ್ಮದರ್ಶಿಗಳು ಹಾಗೂ ಪ್ರಧಾನ ವ್ಯವಸ್ಥಾಪಕರಾದ ಅನಂತರಾಮನ್ ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. 

ಇದೇ ಸಂದರ್ಭದಲ್ಲಿ 29 ನೇ ವರ್ಷದ  ಶ್ರೀ ಚೌಡೇಶ್ವರಿ ಅಮ್ಮನವರ ರಥೋತ್ಸವವನ್ನು ಅದ್ಧೂರಿಯಾಗಿ ಏರ್ಪಡಿಸಿ, ದೇವಸ್ಥಾನದ ಸಮೀಪದ ಮುಖ್ಯ ರಸ್ತೆಗಳಲ್ಲಿ  ರಥ ಯಾತ್ರೆಯನ್ನು ನೆರವೇರಿಸಲಾಯಿತು. 


ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕರು ಹಾಗೂ ಬಿಜೆಪಿ ಮುಖಂಡರು ಬಿ.ಆರ್.ನಂಜುಂಡಪ್ಪನವರು, ಬಿಬಿಎಂಪಿ ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷರು ಮಾಜಿ ಪಾಲಿಕೆ ಸದಸ್ಯರಾದ ಮುನಿಸ್ವಾಮಿಗೌಡರು, ಮಾಜಿ ಪಾಲಿಕೆ ಸದಸ್ಯರಾದ ಗಂಗಭೈರಯ್ಯ, ವಾರ್ಡ್ 17 ರ ಬಿಜೆಪಿ ಮುಖಂಡರು ಬಿ.ಎಸ್.  ವಾಸುದೇವ, ಜೆ.ಪಿ.ಪಾರ್ಕ್ ವಾರ್ಡ್ ಬಿಜೆಪಿ ಮುಖಂಡರಾದ ಸುನಂದಮ್ಮ ಬೋರೇಗೌಡ, ದೇವಸ್ಥಾನದ ಟ್ರಸ್ಟಿಗಳಾದ ನಾಗೇಂದ್ರ ಪ್ರಸಾದ್, ಆರ್. ಲಕ್ಷ್ಮಿ, ಪ್ರದೀಪ್ ಕುಮಾರ್, ನರಸಿಂಹನ್, ಕೃಷ್ಣಾನಂದ ಮಾವಿನಕುರ್ವೆ, ಬಿ.ಕೆ.ಲಕ್ಷಣ, ರವಿಶಂಕರ್, ತೀರ್ಥಲಿಂಗ ಕೆ.ಇ., ಸಂಜೀವ್ ಕುಮಾರ್, ಶ್ರೀಧರ್, ರಾಮಕೃಷ್ಣರಾಜು ರವರೊಂದಿಗೆ ಇನ್ನೂ ಅನೇಕ ಭಕ್ತಾದಿಗಳು ಸ್ವಯಂ ಸೇವಕರಾಗಿ ಈ ಮಹೋತ್ಸವದ ಯಶಸ್ಸಿಗೆ ಸೇವೆ ಸಲ್ಲಿಸಿದರು.

ಬೆಂಗಳೂರು ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳಿಂದ ಹಾಗೂ ದೂರದೂರದ ಊರುಗಳಿಂದಲೂ ಬಂದ ಭಕ್ತಾಧಿಗಳು ಉತ್ಸವದಲ್ಲಿ ಶ್ರದ್ಧಾ ಭಕ್ತಿಭಾವದಿಂದ ಭಾಗವಹಿಸಿದ್ದರು.

Post a Comment

0 Comments

Ad Code

Responsive Advertisement