Ticker

6/recent/ticker-posts

Ad Code

Responsive Advertisement

ಚಲನಚಿತ್ರ ಕಾರ್ಮಿಕರ ಕಲಾವಿದರ ತಂತ್ರಜ್ಞರ ಒಕ್ಕೂಟದ ಅಧ್ಯಕ್ಷರಾಗಿ ಕೆ.ಮಹಾಬಲ

ಅಂತು ಇಂತು ಕರ್ನಾಟಕ ಚಲನಚಿತ್ರ ಕಾರ್ಮಿಕರ ಕಲಾವಿದರ ತಂತ್ರಜ್ಞರ ಒಕ್ಕೂಟದ ಚುನಾವಣೆ 26-02-2022ರ ಭಾನುವಾರ ನಡೆದಿದೆ. ಕಾರಣ ಇಷ್ಟೇ ಇತ್ತೀಚಿನ ಮರ‍್ನಾಲ್ಕು ವರ್ಷಗಳಿಂದ ಒಂದಲ್ಲ ಒಂದು ತನ್ನ ಆಂತರಿಕ ಸಮಸ್ಯೆಗಳಿಂದ ಸುದ್ದಿಗೆ ಒಕ್ಕೂಟ ಇಂಬು ಕೊಡುತ್ತಿತ್ತು. 

35 ವರ್ಷಗಳ ಇತಿಹಾಸ ಈ ಒಕ್ಕೂಟಕ್ಕಿದೆ. ಇದರ ಸ್ಥಾಪಕ ಅಧ್ಯಕ್ಷ ಅಶೋಕ್ ಆರಂಭದ ದಿನಗಳಲ್ಲಿ ಹತ್ತು ಹಲವು ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸಿ, ಭದ್ರ ಬುನಾದಿ ಹಾಕಿದವರು. ಇಂದು ಕಾರ್ಮಿಕರಾಗಿ, ಕಲಾವಿದರಾಗಿ, ತಂತ್ರಜ್ಞರಾಗಿ ಗುರುತಿಸಿಕೊಂಡವರು, ದುಡಿಯುತ್ತಿರುವ ಎಷ್ಟೋ ಜನರಿಗೆ ಇವರ ಶ್ರಮ, ಇವರನ್ನು ಉದ್ಯಮ ಬಹಿಷ್ಕರಿಸಿದ್ಯಾವುದು ತಿಳಿದಿಲ್ಲ. ಚಿತ್ರರಂಗ ಕರ್ನಾಟಕದಲ್ಲಿ ನೆಲೆಗೊಳ್ಳಲು ಅವಿರತ ದುಡಿದ್ದಾಗಲಿ, ಮನರಂಜನೆ ತೆರಿಗೆ ಕನ್ನಡ ಚಿತ್ರಗಳಿಗೆ ಸಿಕ್ಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾಗಲಿ ತಿಳಿದಿಲ್ಲ. ಮಧ್ಯದಲ್ಲಿ ಅಧ್ಯಕ್ಷ ಸ್ಥಾನ ತೊರೆದು, ಪುನಃ ಮುಂದುವರೆದ ಅಶೋಕ್, ಇತ್ತೀಚೆಗೆ ಅಲ್ಲಿನ ಹಲವು ಸದಸ್ಯರ ಮನೋವಿಕಲತೆ ಯನ್ನು ಕಂಡು, ನೊಂದು ತಾವೇ ರಾಜೀನಾಮೆ ನೀಡಿ ನೇಪಥ್ಯಕ್ಕೆ ಸರಿದರು. 

ಇವರೊಂದಿಗೆ ಕೆ.ಎಸ್.ರವೀಂದ್ರನಾಥ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಹದಿನೈದು ವರ್ಷಗಳ ಕಾಲ ದುಡಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಅಲ್ಲಲ್ಲಿ ಇದ್ದ ಓರೆಕೋರೆಗಳನ್ನು ಒಪ್ಪ ಮಾಡಿಕೊಂಡು ಹಲವು ಮಗ್ಗಲುಗಳಲ್ಲಿ ಬೆಳೆಯಲಾರಂಭಿಸಿತ್ತು, ಮತ್ತಷ್ಟು ಶಿಸ್ತುಬದ್ಧ ವೇದಿಕೆಯಾಯಿತು ಎಂಬುದನ್ನು ಈ ಸಂದರ್ಭದಲ್ಲಿ ಹೇಳಲೇಬೇಕು. 

ಕಾರ್ಮಿಕನೇ ಅಧ್ಯಕ್ಷನಾಗಿರಬೇಕು ಎನ್ನುವ ಇತ್ತೀಚಿನವರ ಹಂಬಲಕ್ಕೆ ಬೆಂಬಲವೆನ್ನುವ0ತೆ, ಚುನಾವಣೆ ನಡೆದಿದೆ. ಈ ಹಿಂದೆ ಕಾರ್ಮಿರ‍್ಯಾರು ಅಧ್ಯಕ್ಷರಾಗಿಲ್ಲವೆಂದಲ್ಲ. ಕೆ.ಎಸ್.ರವೀಂದ್ರನಾಥ್ (ಕಂಠದಾನ ಮತ್ತು ಕಿರುಪಾತ್ರ ಕಲಾವಿದರ ಸಂಘ) ಕೂಡ ಹೆಚ್ಚು ಕಡಿಮೆ ಒಂದು ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು. ನಂತರ ಬಿ.ಕೃಷ್ಣಮೂರ್ತಿ (ನಿರ್ಮಾಣ ಸಹಾಯಕರ ಸಂಘ) ಆಗಿದ್ದರು. ಒಕ್ಕೂಟದ ಇತಿಹಾಸದಲ್ಲಿ ಅಂದರೆ, ಸ್ಥಾಪಕ ಖಜಾಂಚಿ! ಬಹುಪಾಲು ಖಜಾಂಚಿಯಾಗಿ ದುಡಿಯುತ್ತಿರುವ, ವಾಹನ ಚಾಲಕರ ಸಂಘದ ಹಾಲಿ ಅಧ್ಯಕ್ಷ ಕೆ.ಮಹಾಬಲ, ಒಕ್ಕೂಟದ ಅಧ್ಯಕ್ಷ ಸ್ಥಾನವನ್ನು ತುಂಬಿದ್ದಾರೆ. 

ಉಪಾಧ್ಯಕ್ಷರಾಗಿ, ಕೆ.ಮಲ್ಲಿಕಾರ್ಜುನ್, ಕೆ.ಬಾಲಕೃಷ್ಣಶೆಟ್ಟಿ, ಸಿ.ನಂಜು0ಡ, ಪ್ರಧಾನ ಕಾರ್ಯದರ್ಶಿ ಸೋಮಸುಂದರಮೂರ್ತಿ, ಜಂಟಿ ಕಾರ್ಯದರ್ಶಿಗಳಾಗಿ, ಜಿ.ವಿ.ಧರ್ಮೇಂದ್ರ, ಎಂ.ಎಸ್.ರಮೇಶ್, ಸುರೇಶ್ ಪೂಜಾರಿ, ಖಜಾಂಚಿಯಾಗಿ ವಿ.ಉಮೇಶ್ ಕುಮಾರ್ ಆಯ್ಕೆಯಾಗಿದ್ದಾರೆ. ಮುಂದಿನ ಮೂರು ವರ್ಷಗಳ ಕಾಲ ಯಾವುದೇ ಸಮಸ್ಯೆಗಳ ಸುಳಿಗೆ ಸಿಕ್ಕದೆ, ಬಂದರೂ ಬಗೆಹರಿಸಿಕೊಂಡು ಕಾರ್ಮಿಕರ ಹಿತವನ್ನು ಕಾಪಾಡಲಿ ನಮ್ಮ ಪತ್ರಿಕೆ ಹಾರೈಸುತ್ತದೆ. 



Post a Comment

0 Comments

Ad Code

Responsive Advertisement