ಮಧುಗಿರಿ : ಸಚಿವ ಈಶ್ವರಪ್ಪ ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ ಮಧುಗಿರಿ ತಾಲೂಕು ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ ಮೆರವಣಿಗೆ ನಡೆಸಿ ಉಪವಿಭಾಗ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ನವರು ಪತ್ರಕರ್ತರ ಸಮ್ಮುಖದಲ್ಲಿ ಕೇಸರಿ ವಿಚಾರವನ್ನು ಪ್ರಸ್ತಾಪಿಸಿರುತ್ತಾರೆ. ಮುಂದಿನ ದಿನಗಳಲ್ಲಿ ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜವನ್ನು ಹಾರಿಸುತ್ತೇವೆಂದು ಸಂವಿಧಾನ ವಿರೋಧಿ ಪದವನ್ನು ಬಳಸಿ ಭಾರತದ ಸಂವಿಧಾನಕ್ಕೆ ಅವಮಾನ ಮಾಡಿರುತ್ತಾರೆ. ಇವರಿಗೆ ಸಂವಿಧಾನದ ಸಾಮಾನ್ಯ ಜ್ಞಾನವಾಗಲಿ ಇರುವುದಿಲ್ಲ. ಹಾಗೂ ರಾಷ್ಟ್ರಧ್ವಜದ ಬಗ್ಗೆಯಾಗಲಿ ಗೌರವವಿಲ್ಲ. ನಾಡಿನಾದ್ಯಂತ ಇವರ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದು, ಸರ್ಕಾರ ಈ ಕೂಡಲೆ ಎಚ್ಚೆತ್ತುಕೊಂಡು ಕೆ.ಎಸ್.ಈಶ್ವರಪ್ಪ ನವರನ್ನು ಸಚಿವ ಸಂಪುಟದಿಂದ ವಜಾ ಮಾಡಿ, ಸಂವಿಧಾನದ ವಿರೋಧಿ ಹೇಳಿಕೆ ನೀಡಿರುವ ಕೆ.ಎಸ್.ಈಶ್ವರಪ್ಪ ನವರ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿ, ಕೂಡಲೇ ಇವರನ್ನು ಬಂಧಿಸಬೇಕು, ಒತ್ತಾಯಿಸಿದ್ದಾರೆ
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಎಂ ಎಸ್ ಮಲ್ಲಿಕಾರ್ಜುನಯ್ಯ.ಎಸ್ಆರ್ ರಾಜಗೋಪಾಲ್. ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ ನಾಗೇಶ್ ಬಾಬು. ತಾಪಂ ಮಾಜಿ ಅಧ್ಯಕ್ಷ ಇಂದಿರಾ ನಾಯಕ್. ಪುರಸಭೆ ಮಾಜಿ ಅಧ್ಯಕ್ಷರು ಎಂಕೆ ನಂಜುಂಡಯ್ಯ. ಮಹಮದ್ ಆಯುಬ್. ಸದಸ್ಯರುಗಳಾದ ಆಚಾರ್ ಮಂಜುನಾಥ್. ಲಾಲಾ ಪೇಟೆ ಮಂಜುನಾಥ್. ಮುಖಂಡರಾದ. ಸಿದ್ದಾಪುರ ರಂಗಶಾಮಯ್ಯ. ವಿಆರ್ ಭಾಸ್ಕರ್ ಪಿಟಿ ಗೋವಿಂದಪ್ಪ ಎಂಜಿ ಉಮೇಶ್ ಎಸ್ ಬಿ ಟಿ ರಾಮು ಆನಂದ್ ಕೃಷ್ಣ ಸುವರ್ಣಮ್ಮ ಯೂತ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ಇನ್ನು ಮುಂತಾದವರು ಇದ್ದರು.
-ವರದಿ:ನಾಗೇಶ್ ಜೀವಾ ಮಧುಗಿರಿ
0 Comments