Ticker

6/recent/ticker-posts

Ad Code

Responsive Advertisement

ಶ್ರೀ ಕ್ಷೇತ್ರದ ಧರ್ಮಸ್ಥಳಕ್ಕೆಹತ್ತನೇ ವರ್ಷದ ಪಾದಯಾತ್ರೆ

ಮಧುಗಿರಿ ;-ತಾಲ್ಲೂಕಿನ ಕೋಡ್ಲಾಪುರ ಮತ್ತು ಸಿಡದರಗಲ್ಲು ಶ್ರೀ ಪುಣ್ಯಕ್ಷೇತ್ರ ಪಾದಯಾತ್ರಿಗಳ ಸೇವಾ ಸಮಿತಿ ವತಿಯಿಂದ ಶ್ರೀ ಕ್ಷೇತ್ರದ ಧರ್ಮಸ್ಥಳಕ್ಕೆ ಹತ್ತನೇ ವರ್ಷದ ಪಾದಯಾತ್ರೆ ಯನ್ನು ಫೆಬ್ರವರಿ 20 ರಿಂದ 27 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಪಾದಯಾತ್ರೆ ಸಮಿತಿಯವರು ತಿಳಿಸಿದ್ದಾರೆ. 

ಈ ಪಾದಯಾತ್ರೆಯು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದು, ಕೋಡ್ಲಾಪುರ ಪಾದಯಾತ್ರೆ ಮೂಲಕ ಗುರುಗಳಾದ ಶ್ರೀ ಶ್ರೀ ಗುರುಗಳ ಆಶೀರ್ವಾದಗಳೊಂದಿಗೆ ಮತ್ತು ಧರ್ಮದರ್ಶಿಗಳಾದ ಡಾ. ಎಂ. ಜಿ .ಶ್ರೀನಿವಾಸ್ ಮೂರ್ತಿ ತಿರುಮಲ ಪಾದಯಾತ್ರಾ ವೃಂದಂ ಗುರುಗಳಾದ ಸೂರ್ಯ ನಾರಾಯಣ್ ರವರ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದೆ. 

ಈ ಪಾದಯಾತ್ರೆಯಲ್ಲಿ ಸುಮಾರು ಇನ್ನೂರೈವತ್ತು ಭಕ್ತಾದಿಗಳು ಪಾಲ್ಗೊಳ್ಳಲಿದ್ದು, ಭಾನುವಾರ ಬೆಳಿಗ್ಗೆ  ಬೂದೆನಹಳ್ಳಿ  ಶ್ರೀ ಶನೇಶ್ವರ ದೇವಸ್ಥಾನದಿಂದ ಮೊದಲುಗೊಂಡು ವೀರನಾಗೇನಹಳ್ಳಿ, ಹಿಂದೂಪುರ, ಗೋವಿಂದನಹಳ್ಳಿ, ತಾಳಕೆರೆ ,ಬಡಕನಹಳ್ಳಿ, ಸಿಡದರಗಲ್ಲು ,ಗೌಡನಪಾಳ್ಯ ಲಿಂಗಸಂದ್ರದ ಎಲ್ಲಾ ಪಾದಯಾತ್ರಿಗಳು ಕೊಡ್ಲಾಪುರದಲ್ಲಿರುವ ನಾಗದೇವತಾ ಪ್ರತಿಷ್ಠಾಪನಾ ಪೂಜೆ ಕಾರ್ಯಕ್ರಮ ಮುಗಿಸಿ ಪ್ರಸಾದ ಸ್ವೀಕರಿಸಿ ಪಾದಯಾತ್ರೆ ಯನ್ನು ಭಕ್ತಿ ಭಜನೆಗಳಿಂದ ಪ್ರಾರಂಭವಾಯಿತು. 

ಈ ಪಾದಯಾತ್ರೆಗೆ ವಾಹನ ಸೇವೆಯನ್ನು ವಿ.ಡಿ.ಜಿ. ಪಾಳ್ಯದ ಶಿವಣ್ಣ ಮತ್ತು ಮಕ್ಕಳು ಕುಡಿಯುವ ನೀರಿನ ವಾಹನವನ್ನುವಿ.ಡಿ.ಜಿ.  ಪಾಳ್ಯದ ರಂಜಿತ್ ರವರು ಮಾಡಿಕೊಟ್ಟಿರುತ್ತಾರೆ. 

ವಿಶೇಷ ಸೇವಾಕರ್ತರ ಗಳಾಗಿ ಲಿಂಗಸಂದ್ರ ಚನ್ನಬಸವಯ್ಯ, ಲಿಂಗೇನಹಳ್ಳಿ ಮಂಜುಳಾ ಶ್ರೀರಘು, ಕೊಡ್ಲಾಪುರದ ಶ್ರೀ ಮಲ್ಲಿಕಾರ್ಜುನ ಯ, ಕೆ ಎಂ ಲೋಕೇಶ್, ಕೆ ಸಿ ಗೋಪಾಲಯ್ಯ ,ಕುಮಾರಣ್ಣ, ಸೊಸೈಟಿ ಅಶ್ವತ್ಥಪ್ಪ ,ಸೊಸೈಟಿ ನರಸಿಂಹಮೂರ್ತಿ, ನಾಗರಾಜಪ್ಪ, ಶಾಮಣ್ಣ ದೊಡ್ಡೀರಪ್ಪ, ಹರಿಹರೇಶ್ವರ ,ಸೋಮಣ್ಣ, ಲಕ್ಷ್ಮೀಪತಿ ,ನರಸಿಂಹಮೂರ್ತಿ, ನರಸಿಂಹಪ್ಪ ,ರಿಯಲ್ ಎಸ್ಟೇಟ್ ವೆಂಕಟೇಶ್ ,ಪುಟ್ಟಹನುಮಂತಪ್ಪ, ಶ್ರೀನಿವಾಸ್ ಕಾರ್ಪೆಂಟರ್ ಶ್ರೀನಿವಾಸ್ ಅಶ್ವತ್ಥನಾರಾಯಣಪ್ಪ,ಶೋಭಾ ಉಮೇಶ್ ಮತ್ತು ಕುಟುಂಬದವರು  ಸಹಕರಿಸಿದ್ದಾರೆ. 

ಮಧುಗಿರಿಗೆ ಆಗಮಿಸಿದ ಪಾದಯಾತ್ರಿಗಳನ್ನು ಪಟ್ಟಣದ ಐತಿಹಾಸಿಕ ಶ್ರೀ ಮಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಿ ವಿಶ್ರಾಂತಿ ಪಡೆದರು. ನಂತರ ಪಾದಯಾತ್ರೆಗೆ ಸಹಕಾರ ನೀಡಿದ ಡಾ. ಎಂ. ಜಿ. ಶ್ರೀನಿವಾಸ್ ಮೂರ್ತಿ ಅವರನ್ನು ಪಾದಯಾತ್ರೆ ಸಮಿತಿ ಅವರು ಸನ್ಮಾನಿಸಿದರು. ಈ ವೇಳೆ ಮಲ್ಲೇಶ್ವರಸ್ವಾಮಿ ದೇವಸ್ಥಾನ ಪ್ರಧಾನ ಅರ್ಚಕ ನಟರಾಜ ದೀಕ್ಷಿತ್ ಮತ್ತು ಪಾದಯಾತ್ರಿಗಳು ಇದ್ದರು .

-ವರದಿ:ನಾಗೇಶ್ ಜೀವಾ ಮಧುಗಿರಿ

Post a Comment

0 Comments

Ad Code

Responsive Advertisement