Ticker

6/recent/ticker-posts

Ad Code

Responsive Advertisement

ರಾಯಚೂರು: ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಆಹ್ವಾನ

ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ: ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಆಹ್ವಾನ

ರಾಯಚೂರು,ಫೆ.08,(ಕ.ವಾ):- ಇಲ್ಲಿಯ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವತಿಯಿಂದ ಅನುಷ್ಠಾನಗೊಳಿಸುತ್ತಿರುವ ಗಂಗಾ ಕಲ್ಯಾಣ ಯೋಜನೆಗಳಡಿ 2021-22ನೇ ಸಾಲಿಗೆ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, ಮತ್ತು 3ಬಿ ರಲ್ಲಿ ಒಳಪಡುವ (ವಿಶ್ವಕರ್ಮ ಮತ್ತು ಇದರ ಉಪ ಸಮುದಾಯಗಳು, ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಕಾಡುಗೊಲ್ಲ, ಹಟ್ಟಿ ಗೊಲ್ಲ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳು, ಒಕ್ಕಲಿಗ, ಅಂಬಿಗ, ಸವಿತಾ, ಲಿಂಗಾಯತ, ಮರಾಠ ಮತ್ತು ಇದರ ಉಪ ಸಮುದಾಯಗಳು ಹೊರತುಪಡಿಸಿ) ಅರ್ಹ ಫಲಾಪೇಕ್ಷಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.

ಸೌಲಭ್ಯ ಪಡೆಯಲು ಅರ್ಹತೆಗಳು: ಕನಿಷ್ಠ 2ಎಕರೆ ಹಾಗೂ ಗರಿಷ್ಠ 5ಎಕರೆ ಜಮೀನು ಹೊಂದಿರಬೇಕು, ಯಾವುದೇ ಮೂಲದಿಂದ ನೀರಾವರಿ ಸೌಲಭ್ಯ ಹೊಂದಿಲ್ಲದೆ ಇರುವ ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು, ವಾರ್ಷಿಕ ವರಮಾನ ರೂ 40,000 ಗಳ ಮೀತಿಯಲ್ಲಿರಬೇಕು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕನಿಷ್ಠ 1ಎಕರೆ ಜಮೀನು ಹೊಂದಿರಬೇಕು. 

ಸಹಾಯಧನ: 24ಜಿಲ್ಲೆಗಳಿಗೆ ವೈಯಕ್ತಿಕ ನೀರಾವರಿ ಕೊಳವೆ ಬಾವಿಗಳಿಗೆ ಘಟಕ ವೆಚ್ಚ ರೂ 2.50 ಲಕ್ಷ ನಿಗದಿಪಡಿಸಲಾಗಿದೆ, ಅದರಲ್ಲಿ 2ಲಕ್ಷ ಸಹಾಯಧನ ಹಾಗೂ 50ಸಾವಿರ ಶೇ.4ರ ಬಡ್ಡಿ ದರದ ಸಾಲ ಒಳಗೊಂಡಿರುತ್ತದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳಿಗೆ ಘಟಕ ವೆಚ್ಚ ರೂ 4ಲಕ್ಷ ನಿಗದಿಪಡಿಸಿದ್ದು, ಇದರಲ್ಲಿ ರೂ 3.5ಲಕ್ಷ ಸಹಾಯಧನ ಹಾಗೂ 50ಸಾವಿರ ಶೇ.4ರ ಬಡ್ಡಿ ದರದ ಸಾಲ ಒಳಗೊಂಡಿರುತ್ತದೆ. ನಿಗದಿತ ಘಟಕ ವೆಚ್ಚದಿಂದ ಗಂಗಾ ಕಲ್ಯಾಣ ಯೋಜನೆಯಡಿ ಸೌಲಭ್ಯ ಒದಗಿಸಲಾಗುವುದು.

ಈ ಯೋಜನೆಗಳಿಗೆ ಸೌಲಭ್ಯ ಪಡೆಯಲು ಇಚ್ಚಿಸುವ ಫಲಾಪೇಕ್ಷಿಗಳು ನಿಗಮದ ವೆಬ್ ಸೈಟ್ ತಿತಿತಿ.ಜbಛಿಜಛಿ.ಞಚಿಡಿಟಿಚಿಣಚಿಞಚಿ,gov.iಟಿ ನಲ್ಲಿ ಸಂಪರ್ಕಿಸಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಜಿಲ್ಲಾ ವ್ಯವಸ್ಥಾಪಕರ ಕಛೇರಿಗೆ 2022 ಮಾ, 7ರ ಒಳಗಾಗಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ನಿಗಮದ ದೂರವಾಣಿ ಸಂಖ್ಯೆ: 08532-250440ಗೆ ಸಂಪರ್ಕಿಸುವAತೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   

ಸರಳವಾಗಿ ಸವಿತಾ ಮಹರ್ಷಿ ಜಯಂತಿ ಆಚರಣೆ

ರಾಯಚೂರು,ಫೆ.08,(ಕ.ವಾ):- ಕೋವಿಡ್-19ರ ಹಿನ್ನೆಲೆಯಲ್ಲಿ ಸವಿತಾ ಮಹರ್ಷಿ ಜಯಂತಿಯನ್ನು  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ  ನಗರದ ಮಡ್ಡಿಪೇಟೆಯಲ್ಲಿರುವ ಸವಿತಾ ಮಹರ್ಷಿ  ಪುತ್ಥಳಿಗೆ ಜಿಲ್ಲಾಧಿಕಾರಿ ಡಾ.ಅವಿನಾಶ್ ರಾಜೇಂದ್ರ ಮೆನನ್ ಅವರು  ಪುಷ್ಪಾರ್ಚನೆ ಮಾಡುವ ಮೂಲಕ ಸರಳವಾಗಿ ಜಯಂತಿಯನ್ನು ಆಚರಣೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷ ಈ.ವಿನಯ್ ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಎಸ್.ಬೋಸರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್, ರಾಯಚೂರು ತಹಶೀಲ್ದಾರ್ ಡಾ.ಹಂಪಣ ಸಜ್ಜನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ವಿ. ನಾಯಕ, ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ  ರಾಘವೇಂದ್ರ ಇಟಗಿ, ಜಿಲ್ಲಾಧ್ಯಕ್ಷ ವಿಜಯ ಭಾಸ್ಕರ್ ಇಟಗಿ ಸೇರಿದಂತೆ ಇತರರು ಇದ್ದರು.

ಮಂಚಲಾಪುರ: ನಾಳೆ ವಿದ್ಯುತ್ ವ್ಯತ್ಯಯ

ರಾಯಚೂರು,ಫೆ.08,(ಕ.ವಾ):- ನಗರದ 110/11 ಕೆವಿ ವಿದ್ಯುತ್ ಉಪ ಕೇಂದ್ರದಲ್ಲಿ ವಿದ್ಯುತ್ ನಿರ್ವಹಣೆ ಕಾಮಗಾರಿ ಕೈಗೊಳ್ಳಲಾಗಿದೆ. ಈ ಪ್ರಯುಕ್ತ 2022ರ ಫೆ.10ರ ಬೆಳಿಗ್ಗೆ 9ರಿಂದ ಸಂಜೆ 5.30ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.      

ಮಂಚಲಾಪುರ ರಸ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ರಾಯಚೂರು ಜೆಸ್ಕಾಂ ಕಾ ಮತ್ತು ಪಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

Post a Comment

0 Comments

Ad Code

Responsive Advertisement