ನಾರಾ ಸೂರ್ಯನಾರಾಯಣ ರೆಡ್ಡಿಯವರಿಗೆ ಭರ್ಜರಿ ಸ್ವಾಗತ !!!???
ಬಳ್ಳಾರಿ ಫೆ 08. ಆನೆಗುಂದಿಯ ಶ್ರೀ ಆದಿಶಕ್ತಿ ದುರ್ಗಾದೇವಿಯ ಅದ್ದೂರಿ ವಿಶೇಷ ಪೂಜಾ ಕಾರ್ಯಕ್ರಮ ಫೆ 10 ರಂದು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರು,ಮಾಜಿ ಶಾಸಕರು, ಬಳ್ಳಾರಿಯ ಪ್ರಮುಖ ಉದ್ಯಮಿ ಹಾಗು ಕೊಡುಗೈ ದಾನಿ ಎಂದೇ ಹೆಸರು ಪಡೆದ ನಾರಾ ಸೂರ್ಯನಾರಾಯಣ ರೆಡ್ಡಿಯವರು ಆಗಮಿಸುತಿದ್ದಾರೆ.
ನಾರಾ ಸೂರ್ಯನಾರಾಯಣ ರೆಡ್ಡಿಯವರು ಈ ವಿಶೇಷ ಪೂಜಾ ಕಾರ್ಯಕ್ರಮಕ್ಕೆ ಆಗಮಿಸುವುದರ ಹಿಂದೆ ಏನೋ ಮರ್ಮ, ಮಸಲತ್ತಿದೆ ಎಂದು ಕಂಪ್ಲಿ ವಿಧಾನ ಸಭಾ ಕ್ಷೇತ್ರದ ಜನತೆ ಗುಸು ಗುಸು ಮಾತನಾಡಿಕೊಳ್ಳುತಿದ್ದಾರೆ. ಆದರೇ ಜನರ ಮಾತುಗಳು ಕೇಳಿದರೇ ಈ ಬಾರಿ ರಾಜು ನಾಯಕ್ ಅವರಿಗೆ ಕೈ ಟಿಕೆಟ್ ಸಿಗುವುದು ಖಾಯಂ ಎಂದು ಅನಿಸುವಲ್ಲಿ ಡೌಟೇ ಇಲ್ಲ ಅನಿಸುತ್ತದೆ. ಈ ಬಾರಿ ಏನೇ ಆಗಲಿ ಕೆಪಿಸಿಸಿ ಅಧ್ಯಕ್ಷರು ಡಿ.ಕೆ.ಶಿವಕುಮಾರ್ ಹಾಗು ಸತೀಶ್ ಜಾರಕಿಹೊಳಿಯವರ ಆಪ್ತರು, ಕೆಪಿಸಿಸಿ ಎಸ್ಟಿ ಘಟಕದ ಪ್ರಧಾನ ಕಾರ್ಯಧರ್ಶಿ,ವಿಜಯನಗರ ವಿಧಾನಸಭಾ ಕ್ಷೇತ್ರದ ಸಂಯೋಜಕರು,ಕAಪ್ಲಿ ವಿಧಾನಸಭಾ ಕ್ಷೇತ್ರದ ಕೈ ಟಿಕೆಟ್ ಪ್ರಭಲ ಆಕಾಂಕ್ಷಿಯಾಗಿರುವ ರಾಜು ನಾಯಕ್ ಅವರಿಗೆ 100ಕ್ಕೆ 100 ಟಿಕೆಟ್ ಸಿಗುತ್ತದೆ ಎಂದು ಜನರು ಅಭಿಪ್ರಾಯವನ್ನು ವ್ಯಕ್ತ ಪಡಿಸುತಿದ್ದಾರೆ.
ನಾರಾ ಸೂರ್ಯನಾರಾಯಣ ರೆಡ್ಡಿಯವರು ಕೈ ಹಾಕಿದರೇ ಖಾಲಿ ಇಲ್ಲ ಎನ್ನುವಂತೆ ಕಳೆದ ಬಾರಿ ನಾರಾ ಪ್ರಯತ್ನದಿಂದಲೇ ಗಣೇಶ್ ಅವರು ಶಾಸಕ ಸ್ಥಾನವನ್ನು ಅಲಂಕರಿಸಿಕೊAಡರು. ಆದರೇ ಈ ಬಾರಿ ಯಾಕೋ ಗಣೇಶ್ ಅವರು ಇನ್ನು ಶಾಸಕ ಸ್ಥಾನದಲ್ಲಿದ್ದರೂ ಬರುವ ವಿಧಾನಸಭೆ ಚುನಾವಣೇಗೆ ಸ್ಪರ್ದೆ ಅಭ್ಯರ್ಥಿಯನ್ನು ನಾರಾ ರೆಡ್ಡಿಯವರು ರಾಜು ನಾಯಕ್ ಅವರನ್ನು ತಯಾರಿ ಮಾಡುತಿದ್ದಾರೆ ಎಂದು ಕೇಳಿ ಬರುತ್ತಿದೆ. ಇದರ ಮರ್ಮ ನೋಡಿದರೇ ಈ ಬಾರಿ ಗಣೇಶ್ ಅವರಿಗೆ ಕೈ ಟಿಕೆಟ್ ಕೈ ತಪ್ಪುತ್ತದೆ ಎಂದು ತಿಳಿಯುತ್ತದೆ.
ಸ್ಥಳಿಯರನ್ನು ಮಾತನಾಡಿಸಿದಾಗ ಈ ಬಾರಿ ರಾಜು ನಾಯಕ್ ಅವರಿಗೆ ಟಿಕೆಟ್ ಸಿಗುವುದು ಖಚಿತ,ಗೆಲ್ಲುವುದು ಖಚಿತ ಎಂದು ಜ್ಯೋತಿಷ್ಯವನ್ನು ನುಡಿಯುತಿದ್ದಾರೆ. ಈ ರಾಜಕೀಯ ಬದಲಾವಣೆಗಳು ಏನು ಆಗುತ್ತವೋ ಎಂದು ಜನರು ಕುತೂಹಲದಿಂದ ಕಾದು ನೋಡಬೇಕಿದೆ.
ಆನೆಗುಂದಿಯ ಶ್ರೀ ಆದಿಶಕ್ತಿ ದುರ್ಗಾದೇವಿಯ ಅದ್ದೂರಿ ವಿಶೇಷ ಪೂಜಾ ಕಾರ್ಯಕ್ರಮಕ್ಕೆ ಸೂರ್ಯನಾರಾಯಣ ರೆಡ್ಡಿಯವರನ್ನು ಅದ್ದೂರಿಯಾಗಿ ಸ್ವಾಗತಿಸಲು ದೊಡ್ಡಮಟ್ಟದಲ್ಲಿ ರಾಜು ನಾಯಕ್ ಅವರು ತಯಾರಿ ನಡೆಸುತಿದ್ದಾರೆ ಎಂದು ತಿಳಿದುಬಂದಿದೆ.
0 Comments