Ticker

6/recent/ticker-posts

Ad Code

Responsive Advertisement

Flash News: ಕೇರಳದ ಮಾಜಿ ಮುಖ್ಯಮಂತ್ರಿ ಆಸ್ಪತ್ರೆಗೆ ದಾಖಲು ?

ತಿರುವನಂತಪುರ, ಜ.21: ಕೇರಳದ ರಾಜ್ಯದ ಮಾಜಿ ಮುಖ್ಯಮಂತ್ರಿ ವಿ. ಎಸ್. ಅಚ್ಯುತಾನಂದನ್ ಅವರಿಗೆ ಕೋವಿಡ್ ಇರುವುದು ದೃಢಪಟ್ಟಿದ್ದು ಶುಕ್ರವಾರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ 98 ವರ್ಷ ವಯಸ್ಸಾಗಿದ್ದು, ಅಚ್ಯುತಾನಂದನ್ ಅವರನ್ನು ಆರೈಕೆ ಮಾಡುತ್ತಿದ್ದ ಶುಶ್ರೂಷಕಿಯಿಂದ ಅವರಿಗೂ ಸೋಂಕು ತಗುಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

'ಅಚ್ಯುತಾನ0ದನ್ ಅವರು ಮನೆಯಲ್ಲಿಯೇ ಪ್ರತ್ಯೇಕ ವಾಸದಲ್ಲಿದ್ದರು. ಅವರನ್ನು ಆರೈಕೆ ಮಾಡುತ್ತಿದ್ದ ಶುಶ್ರೂಷಕಿಗೆ ಗುರುವಾರ ಕೋವಿಡ್ ದೃಢಪಟ್ಟಿತ್ತು, ಬಳಿಕ ಅವರಿಗೂ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ' ಎಂದು ಅವರ ಪುತ್ರ ವಿ.ಎ. ಅರುಣ್ ಕುಮಾರ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

Varthajala Daily, Bengaluru


Post a Comment

0 Comments

Ad Code

Responsive Advertisement