Ticker

6/recent/ticker-posts

Ad Code

Responsive Advertisement

Flash News: ಸಿಎಂ ಸಭೆಯಲ್ಲಿ ಕೊರೋನ ಹೊಸ ಮಾರ್ಗಸೂಚಿಗಳು!

ಬೆಂಗಳೂರು, ಜ.21: ಕರ್ನಾಟಕದಲಿ ಕೊರೋನ ಸ್ಥಿತಿ ಗತಿ ಕುರಿತು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಇಂದು ಸಭೆ ನಡೆಯಿತು. ಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆದಿವೆ. ಅಲ್ಲದೇ ಪ್ರಮುಖ ತೀರ್ಮಾನಗಳನ್ನ ಸಹ ಕೈಗೊಳ್ಳಲಾಗಿದೆ. ಹಲವರು ವಿರೋಧಿಸಿದ್ದರಿಂದ ಸೋಂಕು ನಿಯಂತ್ರಣಕ್ಕೆ ಜಾರಿಗೊಳಿಸಲಾಗಿದ್ದ ವೀಕೆಂಡ್ ಕರ್ಪ್ಯೂ ಹಿಂಪಡೆಯಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. 

ಅಲ್ಲದೇ ನೈಟ್ ಕರ್ಫ್ಯೂ ಸೇರಿದಂತೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ. ಇನ್ನು ಸಿಎಂ ಸಭೆಯಲ್ಲಿ ತೆಗೆದುಕೊಂಡು ನಿರ್ಧಾರಗಳು ಈ ಕೆಳಗಿನಂತಿವೆ.

ಸಿಎ0 ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು: 

1) ರಾತ್ರಿ ಕರ್ಫ್ಯೂ ಅವಧಿಯು ವಾರದ ೭ ದಿನಗಳಲ್ಲಿ ರಾತ್ರಿ ೧೦ರಿಂದ ಬೆಳಗ್ಗೆ ೫ರವರೆಗೆ ಜಾರಿಯಲ್ಲಿರಲಿದೆ.

2) ಸಾರ್ವಜನಿಕ ಬೇಡಿಕೆಯ ಮೇರೆಗೆ ಹಾಗೂ ತಜ್ಞರೊಂದಿಗೆ ಚರ್ಚಿಸಿದ ಅಂಶಗಳನ್ನ ಆಧರಿಸಿ, ಈ ವಾರಾಂತ್ಯದಲ್ಲಿ ವಾರಾಂತ್ಯ ಕರ್ಫ್ಯೂ ಸದ್ಯಕ್ಕೆ ಹಿಂಪಡೆಯಲು ತೀರ್ಮಾನಿಸಲಾಗಿದೆ. ಆದ್ರೆ, ಮುಂದಿನ ವಾರ ಆಸ್ಪತ್ರೆಗೆ ದಾಖಲಾಗುವ ಪ್ರಮಾಣವನ್ನು ನೋಡಿಕೊಂಡು ನಿರ್ಬಂಧಗಳನ್ನ ವಿಧಿಸುವ ಬಗ್ಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಳಿದುಬಂದಿದೆ.

3) ಆದ್ದರಿಂದ ಸಾರ್ವಜನಿಕರು ಜವಾಬ್ದಾರಿಯುತವಾಗಿ ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂಬುದಾಗಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

4) ಸಾರ್ವಜನಿಕರು ಜವಾಬ್ದಾರಿಯುತವಾಗಿ ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸುವುದು ಅತಿ ಅಗತ್ಯವಾಗಿದೆ.

5) ಮಾಲ್, ಹೋಟೆಲ್, ಬಾರ್, ಕ್ಲಬ್, ಪಬ್‌ಗಳಲ್ಲಿ ಶೇ.೫೦ರಷ್ಟು ಆಸನ ಸಾಮರ್ಥ್ಯದೊಂದಿಗೆ ತೆರೆಯಲು ತೀರ್ಮಾನಿಸಲಾಗಿದೆ ಹಾಗೂ ಎರಡೂ ಡೋಸ್ ಲಸಿಕೆ ಕಡ್ಡಾಯ.

ಸರ್ಕಾರದ ಹೊಸ ಮಾರ್ಗಸೂಚಿಗಳು ಇಂತಿವೆ.

1) ಈ ಹಿಂದೆ ಜಾರಿಗೊಳಿಸಿದ್ದಂತ ಶುಕ್ರವಾರ ರಾತ್ರಿ ೧೦ರಿಂದ ಆರಂಭಗೊ0ಡು ಸೋಮವಾರ ಬೆಳಿಗ್ಗೆ ೫ ಗಂಟೆಗೆಯವರೆಗಿನ ವೀಕೆಂಡ್ ಕರ್ಪ್ಯೂವನ್ನು ವಾಪಾಸ್ ಪಡೆಯಲಾಗಿರೋದಾಗಿ ತಿಳಿಸಿದ್ದಾರೆ.

2) ವೀಕೆಂಡ್ ಕರ್ಪ್ಯೂ ಮಾತ್ರವೇ ರದ್ದುಗೊಳಿಸಲಾಗಿದೆ.

3) ಕೊರೋನಾ ನಿಯಂತ್ರಣ ಕ್ರಮವಾಗಿ ಈ ಹಿಂದೆ ಜಾರಿಯಲ್ಲಿದ್ದಂತ ಎಲ್ಲಾ ನಿಯಮಗಳು ಮುಂದುವರೆಯಲಿವೆ.

4) ಧರಣಿ, ಪ್ರತಿಭಟನೆ ಸೇರಿದಂತೆ ಸಾಮಾಜಿಕ, ಧಾರ್ಮಿಕ, ರಾಜಕೀಯ ಪ್ರತಿಭಟನೆಗಳನ್ನು ನಿಷೇಧಿಸಲಾಗಿದೆ.

5) ಮದುವೆ ಸಮಾರಂಭಗಳಿಗೆ ಕೊರೋನಾ ಸೋಂಕಿನ ತೀವ್ರತೆಯ ನಡುವೆಯೂ ಅವಕಾಶ ನೀಡಲಾಗಿದೆ. ಓಪನ್ ಸ್ಥಳದಲ್ಲಿ ನಡೆಯೋ ಮದುವೆಗೆ ೨೦೦ ಜನ. ಮುಚ್ಚಿದ ಪ್ರದೇಶದಲ್ಲಿ ನಡೆಯೋ ಮದುವೆಗೆ ೧೦೦ ಜನರ ಮಿತಿಯನ್ನು ಮುಂದುವರೆಸಲಾಗಿದೆ.

6) ಈ ಹಿಂದಿನ0ತೆ ರಾತ್ರಿ ೧೦ ರಿಂದ ಬೆಳಿಗ್ಗೆ ೫ ಗಂಟೆಯವರೆಗೆ ನೈಟ್ ಕರ್ಫ್ಯೂ ರಾಜ್ಯಾದ್ಯಂತ ಮುಂದುವರೆಯಲಿದೆ. ಎಲ್ಲಾ ದಿನಗಳಲ್ಲಿಯೂ ರಾತ್ರಿ ಕರ್ಪ್ಯೂ ಜಾರಿಯಲ್ಲಿ ಇರಲಿದೆ.

7) ಎಲ್ಲಾ ಪಬ್, ಕ್ಲಬ್, ರೆಸ್ಟೋರೆಂಟ್, ಬಾರ್, ಹೋಟೆಲ್, ಊಟದ ಸ್ಥಳಗಳು ಸೇರಿದಂತೆ ಇತರೆ ಪ್ರದೇಶಗಳಲ್ಲಿ ಶೇ.೫೦ರ ಜನರು ಸೇರುವ ಮಿತಿಯ ನಿರ್ಬಂಧ ವಿಧಿಸಲಾಗಿದೆ. ಕೊರೋನಾ ಮಾರ್ಗಸೂಚಿಯನ್ನು ಅನುಸರಿಸುವಂತೆ ಸೂಚಿಸಲಾಗಿದೆ. ಅಲ್ಲದೇ ಸಂಪೂರ್ಣ ಡೋಸ್ ಲಸಿಕೆ ಪಡೆದಂತವರಿಗೆ ಮಾತ್ರವೇ ಅವಕಾಶ ನೀಡಲಾಗಿದೆ.

8) ಸಿನಿಮಾ, ಹಾಲ್, ಮಲ್ಟಿಪ್ಲೆಕ್ಸ್, ಚಿತ್ರಮಂದಿರ, ರಂಗಮ0ದಿರ, ಆಡಿಟೋರಿಯಂ, ಹೆಚ್ಚು ಜನರು ಸೇರಿವಂತ ಸ್ಥಳದಲ್ಲಿ ಶೇ.೫೦ ಜನರು ಸೇರುವಂತ ಮಿತಿಯನ್ನು ವಿಧಿಸಲಾಗಿದೆ.

9) ಮಹಾರಾಷ್ಟ್ರ, ಕೇರಳ ಮತ್ತು ಗೋವಾ ಸೇರಿದಂತೆ ಗಡಿ ಭಾಗಗಳಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ. ಒಂದು ವೇಳೆ ನಿಯಮ ಮೀರಿದವರ ವಿರುದ್ಧ ಕೋವಿಡ್ ನಿಯಂತ್ರಣ ಕ್ರಮದಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

Varthajala Daily, Bengaluru

Post a Comment

0 Comments

Ad Code

Responsive Advertisement