ನೆಲಮಂಗಲ, ಜ.21: ಉದ್ಯೋಗದ ಸಂಬ0ಧ ಮಾತುಕತೆಗೆಂದು ಯುವತಿಯೊಬ್ಬಳಿಗೆ ಬರಹೇಳಿದ ಯುವಕನೊಬ್ಬ, ಆಕೆಯ ಮೇಲೆ ಕಾರೊಳಗೇ ಅತ್ಯಾಚಾರ ಎಸಗಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಪ್ರಕರಣ ಸಂಬ0ಧ ಯುವತಿಯು ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಆರೋಪಿಯ ಮೇಲೆ ಕೇಸು ದಾಖಲಾಗಿದೆ.
25 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಹರ್ಷ ಎಂಬಾತನ ಮೇಲೆ ಪ್ರಕರಣ ದಾಖಲಾಗಿದೆ.
ಕೆಲಸದ ವಿಷಯವಾಗಿ ಜನವರಿ 16 ರಂದು ಹರ್ಷ ಆ ಯುವತಿಗೆ ಬರಲು ಹೇಳಿದ್ದ. ನಂತರ ಮಾಕಳಿ ಸಮೀಪದ ವೀರೂಸ್ ಢಾಬಾ ಅಂಡ್ ರೆಸ್ಟೋರೆಂಟ್ ಬಳಿ ಕರೆದೊಯ್ದು, ಅಲ್ಲಿಯ ಸಮೀಪದ ನಿರ್ಜನ ಪ್ರದೇಶದಲ್ಲಿ ಕಾರೊಳಗೇ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ, ತನಿಖೆ ಮುಂದುವರಿಯುತ್ತಿದೆ.
Varthajala Daily, Bengaluru
0 Comments